ಆಭಯ ೧೮೩
ನಿಲ್ದಾಣದ ರಸ್ತೆಯಲ್ಲೇ ಇದ್ದ ಉಡುಪಿ ಬ್ರಾಹ್ಮಣರ ಹೊಟೆಲಿನಲ್ಲಿ ಒಂದಿಷ್ಟು ತಿಂಡಿತಿಂದು, ಅರ್ಧ ಹಾದಿ ನಡೆದು, ಅರ್ಧ ಹಾದಿ ಜಟಕಾ ಗೊತ್ತು ಮಾಡಿ, ಅಭಯಧಾಮ ತಲಸಿದ್ದರು
....ಮಾತನಾಡುತ್ತಾ ಹೊತ್ತು ಕಳೆದಿತ್ತು. ಅದನ್ನು ಗಮನಿಸುತ್ತಾ ತುಂಗಮ್ಮಕೆ ತಂದೆ ಹೇಳಿದರು:
“ ನನ್ನದೊಂದು ಸಣ್ಣ ಕೋರಿಕೆ ಇದೆ. ನಡೆಸಿಕೊಡ್ತೀರಾ?”
“ ಏನು, ಹೇಳಿ"
ಮಗಳ್ನ ಕರಕೊಂಡು ಒಂದಿಷ್ಟು ಪೇಟೆಕಡೆ ಹೋಗಿಬರ್‍ಲಾ?"
ಆ ಪ್ರಶ್ನೆ ರೂಪುಗೊಳ್ಳುತಿದ್ದಂತೆಯೇ ಒಪ್ಪಿಗೆಯ ಉತ್ತರವನ್ನೀಯುವ ತೀವ್ರ ನಿರ್ಧಾರವನ್ನು ಸರಸಮ್ಮ ಮಾಡಿದರು.
« ಹಾಗೆಯೇ ಆಗ್ಲಿ. ಊಟ ದದ ಹೊತ್ತಿಗೆ ತಂದು ಬಿಡ್ತೀರಾ? ನಿಮ್ಮನ್ನಂತೂ ಕರಿಯೋ ಸ್ಥಿತೀಲಿ ನಾವಿಲ್ಲ!"
“ ನೀವು ಒಪ್ಪೋದಾದರೆೆ ತಂದೆ ಮಕ್ಕಳೆಲ್ಲಾ ಜತೆಯಾಗಿಯೇ ಇವತ್ತು ಹೋಟೆಲಿನಲ್ಲಿ ಊಟಿಮಾಡ್ತೀವಿ.
ಆಗಲಿ ಅದಕ್ಕೇನಂತೆ?”
__ಎಂದರು ಸರಸಮ್ಮ ನಗುತ್ತ. ಅರೆಕ್ಷಣ, ಹೊರಹೋಗುವ ತುಂಗಮ್ಮ ಮತ್ತೆ ಬರುವಳೋ ಇಲ್ಲವೊ ಎಂಬ ಶಂಕೆ ಅವರನ್ನು ಬಾಧಿಸಿತು, ಆದರೆ, ನೋವಿನಿಂದ ಜರ್ಜರಿತವಾಗಿದ್ದರೂ ಪ್ರಾಮಾಣಿಕತೆಯನ್ನೆ ಪ್ರತಿ ಪಾದಿಸುತಿದ್ದ ನಿವೃತ್ತ ಉಪಾಧ್ಯಾಯರ ಮುಖವನ್ನು ಕಂಡಾಗ, "ಛೆ-ಎಂಥ ಯೋಚ್ನೆ' - ಎಂದು ಅವರಿಗೆ ಲಜ್ಜೆಯಾಯಿತು.
ಆ ದಿನ ತುಂಗಮ್ಮ ತನ್ನದೇ ಸೀರೆಯುಟ್ಟುಕೊಂಡಿದ್ದಳು.
" ತಂದೆ ಜತೇಲೆ ಹೋಗ್ಬಿಟ್ಟು ಬರ್‍ತೀಯೇನಮ್ಮ?
__ಎಂದು ಸರಸಮ್ಮ ಕೇಳಿದಾಗ ಸಂತೋಷದಿಂದ ಕತ್ತು ಕೊಂಕಿಸಿದ ತುಂಗಮ್ಮ, ಮುಖ ತೊಳೆದುಕೊಂಡು ಬಂದು ಸಿದ್ಧಳಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಜಲಜ ಆಕೆಗೆ ಹೆರಳು ಹಾಕಿದಳು.
ಕೈಸನ್ನೆ ಮಾಡಿ ದೊಡ್ಡಮ್ಮನನ್ನು ಹೊರಗೆ ಕರೆದಳು ಜಲಜ.
“ ಏನಮ್ಮ?”