ಪುಟ:Abhaya.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಹೈಹೈ-ಟಕಟಕಟಕ-ಬಾಜೋ ಸಾಮಿ ಸದ್ದುಗಳೊಂದೂ ಇಲ್ಲದೆ, ನಿರ್ಜನವಾದ ಆ ಬೀದಿಯಲ್ಲಿ ಕುದುರೆಯ ಗಾಡಿ ಸರಾಗವಾಗಿ ಸಾಗಿ ಬಂದು, ಅಭಯಧಾಮದ ಹಿತ್ತಿಲಗೋಡೆಯಾಚೆ ನಿಂತಿತು.

ಜಲಜ, ಅಭಯಧಾಮದ ಕಿಟಿಕಿಯ ಎಡೆಯಿಂದ ನೋಡುತ್ತಲಿದ್ದಳು. ಕಳೆದು ಹೋದ ಆಟದ ಸಾಮಾನನ್ನು ಮರಳಿ ಪಡೆದಾಗ ಮಗುವಿಗೆ ಆಗುವ ಸಂತೋಷವನ್ನು ಹೊರಸೂಸುತಿತ್ತು ಆಕೆಯ ಮುಖ.

ನಿಂತಲ್ಲಿಂದಲೆ ಕೂಗಿಕೊಂಡಳು ಜಲಜ:

"ತುಂಗಕ್ಕ ಬಂದ್ಲು ದೊಡ್ಡಮ್ಮ; ತುಂಗಕ್ಕ ಬಂದ್ಲು !"

ಗಾಡಿಯಿಂದ ತುಂಗಮ್ಮನ ತಮ್ಮ ಮೊದಲು ಕೆಳಕ್ಕೆ ಧುಮುಕಿದ. ಆ ಬಳಿಕ ಆತನ ಅಕ್ಕ. ಅದಾದ ಮೇಲೆ ತುಂಬಿದೊಂದು ಚೀಲವೂ ಪುಟ್ಟ ಕೈ ಗಂಟೂ ತೆಳಕ್ಕಿಳಿದುವು. ಗೊತ್ತಾಗಿದ್ದ ಬಾಡಿಗೆಯನ್ನು ಗಾಡಿಯವನಿಗೆ ಕೊಟ್ಟು ತುಂಗಮ್ಮನ ತಂದೆಯೂ ನಿಧಾನವಾಗಿ ಇಳಿದರು

ತುಂಗಮ್ಮನ ಕೈ ಸೋಂಕಿಗೆ ಕಿರುಗೇಟು ಕಿರ್‌ ಎಂದಿತು.

ಈ ಸಲ ಅಕೆ ಬಾಗಿಲು ಬಡೆದು. 'ಅಮ್ಮಾ' 'ಅಮ್ಮಾ' ಎಂದು ಕೂಗ ಬೇಕಾಗಿರಲಿಲ್ಲ. ಅಭಯಭಾಮದ ತಲೆ ಬಾಗಿಲು ತೆರೆದೇ ಇತ್ತು ಮುಗುಳು ನಗುತ್ತ ಸ್ವಾಗತಿಸಿದರು ಸರಸಮ್ಮ. ಆ ದೊಡ್ಡಮ್ಮನಿಗೆ ಆತುಕೊಂಡು ಜಲಜ, ಲಲಿತ ಮತ್ತಿತರ ಮೂವರು ಹುಡುಗಿಯರಿದ್ದರು

ಹಜಾರದಿಂದ ಹಾರ್‍ಮೋನಿಯಂ ಸ್ವಲ್ಪ ಕರ್ಕಶವಾಗಿಯೆ ಶಬ್ದಿಸು ತಿತ್ತು. ಆ ಸ್ವರಪೆಟ್ಟಿಗೆಯ ಸಹವಾಸದಲ್ಲಿ ಅನ್ಯಾಯಕ್ಕೆ ಗುರಿಯಾಗಿದ್ದ ಒಂದು ಮಧುರ ಕಂಠದಿಂದ ಹಾಡು ಕೇಳಿ ಬರುತಿತ್ತು:

"ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ...."

"ಬನ್ನಿ"