ಪುಟ:Abhaya.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೮೭

ತನ್ನದೇನೂ ತಪ್ಪಿಲ್ಲವೆನ್ನುವಂತೆ ತುಂಗಮ್ಮನೆಂದಳು :

“ಹೇಳ್ದೆ ದೊಡ್ಡಮ್ಮ.”

“ಹೇಳಿದ್ಲು, ಹೇಳಿದ್ಲು. ಆದರೂ ಇದೊಂದ್ಸಾರೆ ಕ್ಷಮಿಸ್ತೀರೀಂತ
ತಗೊಂಡ್ಬಂದೆ.... ಅಲ್ಲದೆ, ಹೇಳಿಕೊಳ್ಳೋವಂಥ ತಿಂಡಿ ಏನೂ ಅಲ್ಲ.”

ತಿಂಡಿಯ ಕತೆ ಬಲು ದೊಡ್ಡದು. ತುಂಗಮ್ಮನಿಗೂ ಅದು ತಿಳಿದಿರ
ಲಿಲ್ಲ ಆ ಘಟನೆ ನಡೆದುದು ಬಲು ಹಿಂದೆ. ಅಭಯಧಾಮ ಬಿಟ್ಟು ಮತ್ತೆ
ಬೀದಿಗೆ ಬರಲೊಪ್ಪದ ಹುಡುಗಿಯೊಬ್ಬಳಿಗೆ ಬುದ್ದಿ ಕಲಿಸಬೇಕೆಂದು ಆಕೆಯ
'ಸಂಬಂಧಿಕ' ಮನಸಿನಲ್ಲೆ ನಿರ್ಧರಿಸಿದ ಹುಡುಗಿಯ ಸುಖ ದುಃಖ ವಿಚಾರಿ
ಸಲೆಂದು ವಾರಕ್ಕೊಮ್ಮೆ ಬರುತಿದ್ದವನು ಒಮ್ಮೆ ತಂದುಕೊಟ್ಟ ತಿಂಡಿ ತಿಂದು
ಆ ಹುಡುಗಿ ಮರಣ ಸಂಕಟಕ್ಕೆ ಗುರಿಯಾದಳು. ಆಕೆಯನ್ನು ಆಸ್ಪತ್ರೆಗೆ
ಸೇರಿಸಬೇಕಾಯಿತು. ಅಲ್ಲಿಂದ ಆಕೆಯನ್ನು ಓಡಿಸಿಕೊಂಡು ಹೋಗಲು
ಯತ್ನಿಸಿದ ಆ 'ಸಂಬಂಧಿಕ'. ಆತನಿಗೆ ಯಶಸ್ಸೇನೋ ದೊರೆಯಲಿಲ್ಲ. ಆದರೆ
ಆ ಹುಡುಗಿ ಮತ್ತೆ ಆರೋಗ್ಯವಂತಳಾಗಲು ದೀರ್ಘಕಾಲ ಹಿಡಿಯಿತು.
ಅಂದಿನಿಂದ ಹೊರಗೆ ತಯಾರಿಸಿದ ತಿಂಡಿ ಅಭಯಧಾಮದ ಒಳಕ್ಕೆ ಬರು
ವುದು ನಿಂತೇ ಹೋಯಿತು. ತಿಂಡಿಯನ್ನು ಯಾರೂ ತ೦ದು ಕೊಡಬಾರ
ದೆಂಬುದು ನಿಯಮವಾಯಿತು.

ತುಂಗಮ್ಮನ ತಂದೆ ತುಂಬಿದ್ದ ಚೀಲವನ್ನು ಹಾಗೆಯೇ. ಸರಸಮ್ಮ
ನಿಗೆ ಒಪ್ಪಿಸಿದವರಂತೆ, ಮಂಚದ ಕಾಲಿಗೆ ಒರಗಿಸಿ ನಿಲ್ಲಿಸಿದರು.
“ಏನೇನಿದೆ ಅದರಲ್ಲಿ ?”

ನಾಲ್ಕು ಡಜನ್ ಕಿತ್ತಳೆ ಹಣ್ಣುಗಳಿದ್ದುವು ; ಮೂರು ಪೌಂಡು
ಬಿಸ್ಕತ್ತು. ಬಾಳೆಯ ಎಲೆಯಲ್ಲಿ ಕಟ್ಟಿದ್ದ ಪೊಟ್ಟಣದಲ್ಲಿ ತುಂಗಮ್ಮನ
ಸೂಚನೆಯಂತೆ ಕೊಂಡುಕೊಂಡಿದ್ದ ನಾಲ್ಕು ಸೇರು ಮಲ್ಲಿಗೆ ಮೊಗ್ಗು
ಗಳಿದ್ದುವು.

ಆದರೆ ಹಾಗೆಂದು ತುಂಗಮ್ಮನ ತಂದೆ ವಿವರಿಸಲಿಲ್ಲ.
ಅವರೆಂದರು:

"ಏನೋ ಒಂದಿಷ್ಟು ಕಿತ್ತಳೆ ಹಣ್ಣು- ಬಿಸ್ಕತ್ತು.”

“ನಿಮ್ಮ ಮಗೂಗಾದರೂ ಒಂದಿಷ್ಟು ಇಟ್ಕೊಳ್ಳಿ”