ಪುಟ:Abhaya.pdf/೨೦೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

"ಅಮ್ಮಾ! ಏ ಅಮ್ಮಾ!" ಬಲವಾಗಿ ಬಾಗಿಲು ತಟ್ಟುತಿದ್ದರು ಯರೋ ಗಂಡಸಿನ ಗಡುಸಾದ ಸ್ವರ. ಎಲ್ಲರ ಹಾಗೆಯೇ ಚಾವೆಯಮೇಲೆ ಸೀರೆಯನ್ನು ಮಡಚಿಹಾಕಿ ನಿದ್ದೆ ಹೋಗಲು ಯತ್ನಿಸಿದಳು ತುಂಗಮ್ಮ.ಆಕೆ ಮಲಗಿದ್ದುದು ಜಗಲಿಯ ಮೇಲೆ ,ಜಲಜೆಯ ಬಳಿಯಲ್ಲಿ ಆ ಗೆಳತಿಯರು ಗುಣುಗುಣು ಎಂದು ಬಹಳ ಹೊತ್ತು ಮತನಾಡಿದ್ದರು.ಆ ಮಾತುಗಳ ನಡುವೆ ಹೂಂಗಡು ತಿದ್ದಾಗಲೊಮ್ಮೆ ಸದ್ದಿಲ್ಲದೆ ಜಗಜ ನಿದ್ದೆ ಹೋಗಿದ್ದಳು.ಆ ಮೇಲೂ ಎಷ್ಟೋ ಹೊತ್ತು ತುಂಗಮ್ಮನಿಗೆ ನಿದ್ದೆ ಬರಲಿಲ್ಲ. ಅದೇ ಆಗ ಮಂಪರು ಹೊಂಚಿಹಾಕುದ್ದಾಗಲೇ ಬಾಗಿಲು ತಟ್ಟದ ಸದ್ದು ಕೇಳಿಸಿತು. "ಅಮ್ಮಾ ! ಅಮ್ಮಾ ! " ಮತ್ತೆ ಅದೇ ಕರೆ. ಅದು ಗಂಡನಿಗೆ ಧ್ವನಿಯಾಗಿತ್ತೆಂದು ತುಂಗಮ್ಮನಿಗೆ ಯಾಕೋ ಭಯವೆನಿಸಿತು. ಆಕೆ ಎದ್ದು ಕುಳಿತು ಜಲಜೆಯ ಮೈಕುಲುಕಿದಳು. "ಜಲಜ ! ಏ ಜಲಜ!" ಗಾಬರಿಗೊಂಡ ಜಲಜ ಗಕ್ಕನೆ ಎದ್ದು ಕೇಳಿದಳು. "ಏನಕ್ಕ? ಏನಾಯ್ತಕ್ಕ?" "ನೋಡು. ಹೊರಗೆ ಯಾರೋ ಬಾಗಿಲು ತಟ್ಟಿದಾರೆ." ಜಲಜ ಕಿವಿನಿಗುರಿಸಿ, "ಹೂಂ ಹೌದು" ಎಂದಳು. "ಗಂಡನಿಗೆ ಸ್ವರ ಇದ್ದಹಾಗಿದೆ,ಆಲ್ವಾ?" ನಕ್ಕಳು ಜಲಜ.