ಪುಟ:Abhaya.pdf/೨೦೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

"ಯಾಕೆ - ಗಂಡಸ್ರು ಬಾಗಿಲು ತಟ್ಬಾರ್ದೇನು? ಹೆದಕೋಸ್ಕರಬೇಡ ನನ್ನಕ್ಕ ಗಂಡಸ್ರು ಆಭಯ ಕೇಳ್ಕೊಂಡು ಇಲ್ಲಿಗ್ಬರಲ್ಲಿ ಅವರಿಗೆ ಯಾವ ತಾಪತ್ರಯವೂ ಇಲ್ಲ! ಪೋಲಿಸಪ್ಪ ಬಂದಿರ್ಬೇಕು ಮಿಕ ಹಿದ್ದೊಂದು.......... ಏಳು, ದೊಡ್ಡಮ್ಮನ್ನ ಎಬ್ಬಿಸೋಣ." ಅವರಿಬ್ಬರೂ ಎದ್ದು ನಿಲ್ಲುವುದರೊಳಗೇ ಸರಸಮ್ಮನ ಕೊಠಡಿಯ ದೀಪ ಬೆಳೆಗಿತು.ಸದ್ದು ಕೇಳಿ ಅವರೂ ಬಳಿಗೆ ಬಂತು. "ಕದ ತೆರೀರಿ ಅಮ್ಮ ಇಬ್ಬರು ಹುಡುಗೀರ್ನ ಅಡ್ಮಿಟ್ ಮಾಡ್ಕೊಳ್ಳಿ" ಆತನ ಹಿಂದೆ ಇಬ್ಬರು ಹುಡಿಗಿಯಗಿದ್ದರು ಒಬ್ಬಳ ಬಲಗೈಯನ್ನು ಇನ್ನೊಬ್ಬಳ ಎಡಗೈಗೆ ಕರವಸ್ತ್ರದಿಂದ ಬಿಗಿದಿತ್ತು ಅವರ ಹಿಂದೆ ಮತ್ತೋಬ್ಬ ಪೋಲೀಸಿನವನಿದ್ದ. ಹಾಗೆ ಪೊಲೀಸರು ಬೀದಿಯಲ್ಲಿ ಪೋಲಿ ಆಲೆಯುವ ಹುಡುಗಿಯರನ್ನು ಹಿಡಿದುಕೊಂಡು ಬರುವುದುಂಟೆಂದು ತುಂಗಮ್ಮ ಕೇಳಿದ್ದಳು, ಕಂಡಿರಲಿಲ್ಲ.ಈಗ ಆಂತಹ ಮೊದಲ ಪ್ರಸಂಗವಿತ್ತು ಎದುರಿಗೆ ಹೆಬ್ಬಾಗಿಲು ತೆರೆದಕೊಂಡು ಆ ನಾಲ್ವಾರನ್ನೂ ಬರಮಾಡಿತು ಪೋಲಿಸರವನೊಬ್ಬನ ಹಸಿದ ಕಣ್ಣುಗಳು ಆ ಕತ್ತಲೆಯಲ್ಲಿ ಜಗಲಿ ಹಜಾರದ ಸುತ್ತೆಲ್ಲ ಚಲಿಸಿದವು.ಜಲಜೆಯರನ್ನೆ ನೋಡಿದ ಆದರೆ ಅವರು ಆತನನ್ನು ಗಮನಿಸುತ್ತಿರಲಿಲ್ಲ.ಅವರ ದೃಷ್ಟಿಯೆಲ್ಲ ಆ ಇಬ್ಬರು ಹುಡುಗಿಯರ ಮೇಲೆ ನೆಟ್ಟಿತ್ತು ಒಬ್ಬಳಿಗೆ ವಯಸ್ಸು ಇಪ್ಪತ್ತು ದಾಟಿರಬೇಕು. ಯೌವನ ,ಉಡುಗೆಯನ್ನು ಬಿರಿದು ಹೊರಸೂಸುತಿತ್ತು.ಉಟ್ಟಿದ್ದುದು ಹಳೆಯದಾದ ಜಿಡ್ಡಾದ ವಾಯಿಲ್ ಸೀರೆ.ಕಣ್ಣುಗಳು ಕೆರಳಿದ ಚಿರತೆಯ ಹಾಗೆ ಎಲ್ಲರನ್ನೂ ದುರುಗುಟ್ಟಿಕೊಂಡು ನೋಡುತಿದ್ದುದು ಇನ್ನೊಬಳು ಚಿಕ್ಕವಳು.ಹದಿನೈದು ದಾಟಿತ್ತೋ ಇಲ್ಲವೋ. ಕಿವಿ,ಕತ್ತು,ಕೈಗಳಲ್ಲಿ ಒಂದಿಷ್ಟು ಚಿನ್ನ ಆಭರಣವಾಗಿ ಕುಳಿತಿತ್ತು ಬಿಕ್ಕಿಬಿಕ್ಕಿ ಅಳುತಿದ್ದಳು ಆಕೆ. ಆ ಹುಡುಗಿ ಅಳುವುದು ತನಗೆ ಅವಮಾನವೆವೆಂಬಂತೆ ಆಕೆಯನ್ನೂಕೆಂಣ್ಣಿನಿಂದ ನೋಡುತಿದ್ದಳು ದೊಡ್ಡವಳು.