ವಿಷಯಕ್ಕೆ ಹೋಗು

ಪುಟ:Abhaya.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೦೦
ಅಭಯ

"ಏನಾದರೂ ಹೆಸರು ಬರ್‍ಕೊ‌ಳ್ಳೋದು ಬೇರೆಕಡೆ ನಡೆದೀತು – ಇಲ್ಲಿ ಅల్ల !"
ಹೆಣ್ಣಹೆಂಗಸಿನಿಂದ ತನಗೆ ಅವಮಾನವಾಯಿತೆಂದು ಪೊಲೀಸಿನವನಿಗೆ ತಾಳ್ಮೆ ತಪ್ಪಿತು
"ಹಾಗಾದರೆ, ಇಲ್ಲಿ ಸೇರಿಸ್ಕೊಳ್ಳೋದಿಲ್ಲಾಂತ ಬರ್‍ಕೊ‌ಡಿ ಲಾಕಪ್ಪಿಗೆ ಕರಕೊಂಡು ಹೋಗ್ತೀನಿ.”
ಸರಸಮ್ಮ ಆತನ ದರ್ಪಕ್ಕೆ ಮಣಿಯಬಾರದೆ೦ದುಕೊ೦ಡರು.
ಆದರೆ ಲಾಕಪ್ಪಿನ ಪದ ಕಿವಿಗೆ ಬಿದ್ದೊಡನೆಯೆ ದೊಡ್ಡವಳು ಬೆಚ್ಚಿ ಬಿದ್ದಳು; ಚಿಕ್ಕವಳ ರೋದನ ಬಲವಾಯಿತು.
ದೃಢವಾದ ಸ್ವರದಲ್ಲಿ ದೊಡ್ಡ ಹುಡುಗಿಯೆಂದಳು:
"ನನ್ನ ಹೆಸರು ಜಾನಕೀಂತ. ಇವಳ ಹೆಸರು ಕಾವೇರಿ.”
ಅನಿವಾರ್ಯವಾಗಿದ್ದೊಂದು ಗಂಡಾಂತರ ತಪ್ಪಿತೆಂದು ಎಲ್ಲರಿಗೂ ಸ್ವಲ್ಪ ಸಮಾಧಾನವಾಯಿತು.
ಹೆಸರುಗಳನ್ನು ಪುಸ್ತಕದಲ್ಲಿ ಬರೆದುಕೊಂಡು ಸರಸಮ್ಮ ಆ ಪೋಲೀಸರವನಿಗೆ ಹೇಳಿದಳು:
"ನೀವು ಈ ಪುಟದಲ್ಲಿ, ಇವರಿಬ್ಬರನ್ನೂ ತಂದು ಅಭಯಧಾಮದ ವಶಕ್ಕೆ ಒಪ್ಪಿಸಿದೀವಿ ಅಂತ ಬರೆದು ಸಹಿಮಾಡ್ಬೇಕು. ಇವತ್ತಿನ ತಾರೀಖೂ ಬರೀರಿ. ತಂದು ಬಿಟ್ಟಾಗ ಹೊತ್ತು ಹನ್ನೆರಡೂವರೆ ಗಂಟೆ ಅ೦ತಾನೂ ಬರೀರಿ."
"ಅದೊಂದು ಬರಿಯೋಕಾಗೋದಿಲ್ಲ."
“ ಹಾಗಾದರೆ ಇವರ್‍ನ ವಾಪಸು ಕರಕೊಂಡು ಹೋಗ್ಬಹುದು."
"ಹೋದ್ಸಲಿ ಬಂದಾಗ ಹಾಗೆ ನಾನು ಬರ್‍ಕೊಟ್ಟಿಲ್ಲ.”
"ಅದಕ್ಕೇ ಈಸಲಿ ಬರೀರಿ ಅಂತ ಹೇಳ್ತಿರೋದು, ಹೋದ್ಸಲಿ ನೀವು ಏನೇನು ಮಾಡಿದಿರಿ ಅನ್ನೋದನ್ನ ನನ್ನ ಬಾಯಿಂದಲೂ ಕೇಳ್ಬೇಕೂಂತ ಇದಿರೇನು? ಡಿ. ಎಸ್. ಪಿ. ಸಾಹೇಬರು ಹೇಳಿದಾರೆ; ನೀವು ಸಹಿಹಾಕಿದ ಹೊರತು ಯಾರನ್ನೂ ಅಡ್ಮಿಟ್ ಮಾಡೋ ಹಾಗಿಲ್ಲ."
ಡಿ. ಎಸ್. ಪಿ. ಎ೦ಬ ಪದೋಚ್ಚಾರಣೆಕೇಳಿ, ಪೋಲೀಸಿನವನ