ಪುಟ:Abhaya.pdf/೨೦೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೦೧
ಅಭಯ

ಕರ್‍ರ‌ಗಿನ ಮುಖ ಮತ್ತಷ್ಟು ಕಪ್ಪಿಟ್ಟಿತು ಅವನ ಪ್ರತಾಪದ ನಿಲುವು ಕುಗ್ಗಿ ಹೋಯಿತು. ಆತ ಗೊಣಗಿದ. ಆದರೆ ಅದೇನೆಂದು ಯಾರಿಗೂ ಅರ್ಥವಾಗಲಿಲ್ಲ. ಸರಸಮ್ಮ ಹೇಳಿದಂತೆಯೆ ಬರೆದು ಆತ ಸಹಿಹಾಕಿದ
ಪೋಲಿಸರೊಡನೆ ಮಾತನಾಡಿದ ಸ್ವರದ ಬದಲು, ಪರಿಚಯದ ದೊಡ್ಡಮ್ಮನ ಮೃದುಸ್ವರವೇ ಕೇಳಿಸಿತು:
"ಜಲಜ, ಒಳಗಿನ ಕೊಠಡೀಲಿ ಎರಡು ಚಾಪೆಹಾಕಿ ಇವರಿಬ್ಬರ್‍ನ ಅಲ್ಲಿ ಬಿಟ್ಟುಡಮ್ಮ."
"ಹೂಂ ದೊಡ್ಡಮ್ಮ."
"ನೀವೆಲ್ಲಿ ಮಲಕೊಂಡಿದೀರಾ ?"
-ಎಂದರು ಸರಸಮ್ಮ, ತುಂಗಮ್ಮನನ್ನೂ ನೋಡುತ್ತ
"ಅಲ್ಲೇ, ಆ ಕೊಠಡಿ ಬಾಗಿಲಲ್ಲೇ ದೊಡ್ಡಮ್ಮ."
"ಸರಿ ಹಾಗಾದರೆ."
ಆ ಪೋಲೀಸರವನು ಮತ್ತೊಮ್ಮೆ ತುಂಗಮ್ಮ ಜಲಜೆಯರನ್ನು ನೋಡಿ, ತಾನು ತಂದು ಬಿಟ್ಟಿದ್ದ ಬೇಟೆಗಳನ್ನು ನೋಡಿ, ತನ್ನ ಹಳೆಯ ಸಹೋದ್ಯೋಗಿಯೊಡನೆ ಹೊರಟುನಿಂತ. ಸರಸಮ್ಮ ಅವರಿಬ್ಬರನ್ನೂ ಬಾಗಿಲು ದಾಟಿಸಿ ತಗಲಿಸಿದರು.
ಆಮೇಲೆ ಅವರ ಕೊಠಡಿಯ ದೀಪ ಆರಲು ಹೆಚ್ಚುಹೋತ್ತು ಹಿಡಿಯಲಿಲ್ಲ.
ಹುಡುಗಿಯರನ್ನು ಒಳಕ್ಕೆ ಬಿಟ್ಟು ಜಲಜ ಆ ಕೊಠಡಿಯ ಬಾಗಿಲೆಳೆದುಕೊಂಡಳು....ಆ ಮಾತುಕತೆ- ಸದ್ದಿಗೆ ಹಲವು ಹುಡುಗಿಯರು ಎಚ್ಚರಗೊಂಡರೂ ಮತ್ತೆ ನಿದ್ದೆ ಹೋದರು.
ಜಲಜ - ತುಂಗಮ್ಮರಿಗೆ ಮಾತ್ರ ನಿದ್ದೆ ಬರಲಿಲ್ಲ. ಪಿಸುಮಾತಿನಲ್ಲೆ ಜಲಜ ಪೋಲೀಸರ ಸಾಹಸದ ಕತೆಗಳನ್ನು ಹೇಳಿದಳು.
"ಡಿ ಎಸ್. ಪಿ . ಗೀಯಸ್ಪಿ ಅಂತ ಗದರಿಸ್ಲಿಲ್ವೆ ದೊಡ್ದಮ್ಮ ? ಅದೇನು ಗೊತ್ತಾಯ್ತೆ ನಿಂಗೆ?"
"ಇಲ್ಲ, ಏನು ಹೇಳು ?"
"ಅಯ್ಯೋ! ಒಂದೆರಡ್ಸಲ ಏನಾಯ್ತೂಂತ....."