ಪುಟ:Abhaya.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦೪

ಅಭಯ

ಜಲಜೆಯ ಊಹೆ ಸರಿಇರಬೇಕು ಅನ್ನಿಸಿತು, ತುಂಗಮ್ಮನಿಗೂ. ತನ್ನ ಗೆಳತಿಯ ಸೂಕ್ಷ್ಮಬುದ್ದಿಗಾಗಿ ಮೆಚ್ಚುಗೆ ಎನಿಸಿತು. "ನಾಳೆ ಏನ್ಮಾಡ್ತಾರೋ ಇವರ್‍ನ?"
“ದೊಡ್ಡಮ್ಮ ಬರಸ್ಕೊಳ್ದೇ ಇದ್ದಿದ್ರೆ ಆ ಪೋಲೀಸ್ನೋನು ಅವರಿಬ್ಬರ್‍ನೂ ಇಲ್ಲಿಂದ ಕರಕೊಂಡು ಹೋಗಿ, ಇದ್ದಿದ್ನ ಕಸ ಕೊ೦ಡೋ ಏನಾದರೂ ಮಾಡಿಯೋ ಬಿಡ್ತಿದ್ದ, ಆದರೆ ಈಗ—"
"ದೊಡ್ಡಮ್ಮ ಹೆಸರು ಬರೆದು ಸಹಿಹಾಕಿಸಿ ಕೊಳ್ಳದೆ ಇದ್ದಿದ್ದರೇ ಚೆನ್ನಾಗಿತ್ತೇನೊ ಎಂದು ತುಂಗಮ್ಮನಿಗೆ ಅನಿಸಿತು. ಹಾಗೆ ಮಾಡಿದ್ದರೆ, ಬೆಳಗಾದೊಡನೆಯೇ ಆ ಚಿಕ್ಕ ಹುಡುಗಿ ಮನೆಗೆ ಹೊಗುವುದು ಸಾಧ್ಯವಾಗುತಿತ್ತು.
“ಆ ಚಿಕ್ಕೋಳ್ನ ಬಿಡಿಸೋಕೆ ಆಗಲ್ವ ಜಲಜ ?" ಕ್ಷಣಕಾಲ ತಡೆದು ಜಲಜ ಹೇಳಿದಳು : "ಒಂದು ಕೆಲಸ ಮಾಡೋಣ ತುಂಗಕ್ಕ ನಾಳೆ ದೊಡ್ಡಮ್ನಿಗೆ ಹೇಳೋಣ ಅವರೇನಾದರೂ ಆ ಹುಡುಗಿ ವಿಷಯ ಇನ್ಸ್ಪೆ ಪೆಕ್ಟರಿಗೆ ಒಂದು ರಿಪೋರ್ಟು ಬರಕೊಟ್ರೆ-"
"ಹಾಗೆ ಮಾಡೋಣವಮ್ಮ!"
ಆ ಹುಡುಗಿಯರಲ್ಲಿ ಒಬ್ಬಳನ್ನು - ಕಾವೇರಿಯನ್ನು - ಆಗಲೆ ತಾನು ಬಿಡುಗಡೆ ಮಾಡಿಸಿದಷ್ಟು ಸಂತೋಷವಾಯಿತು ತುಂಗಮ್ಮನಿಗೆ.
ಮತ್ತೆ ಸ್ವಲ್ಪ ಹೊತ್ತಿನಲ್ಲೆ ನಿದ್ದೆ ಬ೦ತು.

ದೊಡ್ಡಮ್ಮ ಬಾರಿಸಿದ ಗಂಟೆಯ ಬಡಿತಕ್ಕೆ ಎಚ್ಚರವಾಗಿ, ಇತರ ಹುಡುಗಿಯರೊಡನೆ ತುಂಗಮ್ಮ ಜಲಜೆಯರೂ ಎದ್ದರು.
ಇ೦ದಿನಿ೦ದ ತು೦ಗಮ್ಮ, ಅಭಯಧಾಮದಲ್ಲಿ ಅತಿಥಿಯಾಗಿರಲಿಲ್ಲ. ನಿವಾಸಿಗಳಲ್ಲಿ ಆಕೆಯೂ ಒಬ್ಬಳು; ತಂದೆಯ ಜತೆಯಲ್ಲಿ ಹೊರಟು ಹೋಗದೆ, ತಾನಾಗಿಯೇ ತನ್ನದಾಗಿ ಸ್ವೀಕರಿಸಿದ ಆ ವಿಚಿತ್ರ ಕುಟುಂಬದ ಒಬ್ಬ ಸದಸ್ಯೆ.
ಎದು ಕಣ್ಣು ತೆರೆದ ತುಂಗಮ್ಮನಿಗೆ, ಹಿಂದಿನ ರಾತ್ರೆ ಕೊಠಡಿಯಲ್ಲಿ ಕೂಡಹಾಕಿದ್ದ ಹುಡುಗಿಯರ ನೆನಪಾಯಿತು. ಆಕೆ ಬಾಗಿಲನ್ನು ಹಿಂದಕ್ಕೆ