ಸರಿಸಿ ನೋಡಿದಳು. ದೊಡ್ಡವಳು ಎದ್ದು ಕುಳಿತಿದ್ದಳು ಆಗಲೆ. ಚಿಕ್ಕವಳಿಗೆ
ಎಚ್ಚರವಾಗಿರಲಿಲ್ಲ.
ತಮ್ಮ ಕೊಠಡಿಯಿಂದ ಹೊರಬಿದ್ದು ದೊಡ್ಡಮ್ಮ ಅತ್ತ ಬಂದರು.
"ಅವರಿಗೇನು ಬೇಕೋ ನೋಡ್ಕೊಳ್ರೇ ”
-ಎಂದರು, ಜಲಜೆಯನ್ನೂ ತುಂಗಮ್ಮನನ್ನೂ ಉದ್ದೇಶಿಸಿ. ತನಗೂ
ಕೆಲಸ ಒಪ್ಪಿಸಿದರೆಂದು ತುಂಗಮ್ಮನಿಗೆ ಸಂತೋಷವಾಯಿತು
ಸ್ವಲ್ಪ ಹೊತ್ತಾದಮೇಲೆ ದೊಡ್ಡವಳನ್ನು ಕರೆದುಕೊಂಡು ಜಲಜ
ಬಚ್ಚಲು ಮನೆಗೆ ಹೋದಾಗ, ಚಿಕ್ಕವಳೊಡನೆ ತುಂಗಮ್ಮ ಮಾತನಾಡಿದಳು.
ಏನು - ಎತ್ತ - ಎಂಬ ಹತ್ತು ಪ್ರಶ್ನೆಗಳಿಗೆ ಬಂದ ಉತ್ತರ ಒಂದೇ:
"ನಾನೇನೂ ತಪ್ಪು ಮಾಡಿಲ್ಲ ನನ್ನ ಬಿಟ್ಬಿಡಿ ಪೋಲೀಸಪ್ಪನ
ಕೈಗೆ ಕೊಡ್ಬೇಡಿ!”
"ಮತ್ತೆ ಅವಳ ಜತೇಲಿ ಹ್ಯಾಗ್ಬಂದೆ?”
ಉತ್ತರವಿಲ್ಲ.
"ಮಾತೇ ಆಡ್ಡಿದ್ರೆ ಹ್ಯಾಗಮ್ಮ? ನಿಂಗೆ ಸಹಾಯ ಮಾಡ್ಬೇಕೂಂತ್ಲೇ
ಅಲ್ವೆ ಇದನ್ನೆಲ್ಲಾ ಕೇಳೋದು?"
ತುಂಗಮ್ಮನ ಮಾತಿನಲ್ಲಿ ನಂಬಿಕೆ ಇಡಲೆತ್ನಿಸುತ್ತಾ ಆ ಹುಡುಗಿ ನಡು
ಗುವ ಸ್ವರದಲ್ಲಿ ಅಂದಳು :
“ಇವಳು ನಮ್ಮನೇ ಪಕ್ದಲ್ಲೇ ಇರೋದು, ನಮ್ಜನವೂ ಇಲ್ಲ.
ಶಿವಾಜಿ ಟಾಕೀಸಿಗಿ ಹೋಗಿ ಸಾಯಂಕಾಲ ಸಿನಿಮಾ ನೋಡ್ಕೊಂಡು
ಬರೋಣಾಂತ ಕರದ್ದು. ಸಿನಿಮಾ ಅಂದ್ರೆ ಇಷ್ಟ ನಂಗೆ ಸ್ನೇಹಿತರ ಮನೆಗೆ
ಹೋಗ್ಬರ್‍ತೀನಿ ಅಂತ ಹೇಳಿ, ಇವಳ್ಜ ತೇಲಿ ಬಂದೆ. ಸಿನಿಮಾ ಬಿಟ್ಟಿಟ್ಟು ನಾವು
ಬರ್‍ತಿದ್ದಾಗ ಯಾವನೋ ಒಬ್ಬನ ಜತೆ ಜಾನಕಿ ಮಾತಾಡೋಕೆ ನಿಂತ್ಲು.
ತಡವಾಗುತ್ತೆ, ಬಾ, ಅಂದರೂ ಕೇಳ್ಲಿಲ್ಲ....ಆಮೇಲೆ ಯಾವು ಯಾವುದೋ
ಹಾದೀಲಿ ಹೋಗಿ, ಹಾದಿ ತಪ್ಪೋಯ್ತು ಅಂದ್ಲು.... ಆ ಮೇಲೆ-"
ಕಾವೇರಿ ಅತ್ತಳು.
"ಅಳಬೇಡ್ವೆ. ನಾನು ದೊಡ್ಡಮ್ಮಂಗೆ ಹೇಳ್ತೀನಿ. ನಿನ್ನ ಮನೆಗೆ
ಕಳಿಸ್ಕೊಡೋಕೆ ಸಹಾಯ ಮಾಡ್ತಾರೆ."
ಪುಟ:Abhaya.pdf/೨೧೦
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಭಯ
೨೦೫