ಪುಟ:Abhaya.pdf/೨೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೭ ಅಭಯ "ಬೇಡ ತುಂಗ. ಅದು ಸರಿಯಲ್ಲ. ಹಾಗೆ ಮಾಡ್ಬಾರ್ದು ತಂದೇನೆ ಮಗಳ ಕರಕೊಂಡು ಹೋಗ್ಲಿ. ಏನಂತೀಯಾ ?" ತನ್ನ ಯೋಚನೆ ಸರಿಯಾದುದಲ್ಲವೆಂದು ತುಂಗಮ್ಮನಿಗೆ ಆಗಲೆ ಹೊಳೆದು ಹೋಗಿತ್ತು

“ ಹೌದು ದೊಡ್ಡಮ್ಮ, ನೀವು ಹೇಳೋದು ನಿಜ" ಪೋಲೀಸ್ ಇನ್ಸ್ ಪೆಕ್ಟರಿಗೆ ಕಾಗದ ಬರೀತೀನಿ ಅಭಯಧಾಮದ ಮುದ್ರೆ ಒತ್ತಿ ಕೊಡೋಣ ಪೋಲೀಸಿನವನೇ ತಗೊಂಡು ಹೋಗ್ತಾನೆ.” ಸರಸಮ್ಮ ಮಾತು ಮುಗಿಸಿದ್ದರೋ ಇಲ್ಲವೋ ಅಷ್ಟರಲ್ಲೇ ಜಲಜ ಓಡಿಬಂದಳು.

“ದೊಡ್ಡಮ್ಮ !.... ಜಗಳಾಡ್ತಿದಾರೆ! ಜನವರೀಲಿ ತಮಿಳು ಹುಡುಗೀರು ಇಬ್ಬರು ಬರ್ಲಿಲ್ವ ? ಅವರಿಗೆ ಆ ದೊಡ್ಡವಳು ಗೊತ್ತಂತೆ ಅವಳ ಮೈಮೇಲೆ ಬಿದ್ದು ಇಬ್ಬರೂನೂ ಕಿತ್ತು ಬಡೀತಿದಾರೆ !”

ಸರಸಮ್ಮ, ತುಂಗಮ್ಮ ಜಲಜೆಯರೊಡನೆ ಹೊರಕ್ಕೋಡಿದರು,

ತಮ್ಮ ಜೀವನವನ್ನು ಮಣ್ಣುಗೂಡಿಸಿದವಳೆಂಬುದೇ ದೊಡ್ಡವಳ ಜಾನಕಿಯ ಮೇಲೆ ಆ ತಮಿಳು ಹುಡುಗಿಯರಿಗೆ ಇದ್ದ ಸಿಟ್ಟು ಅಭಯ ಧಾಮದ ಹುಡುಗಿಯರೆಲ್ಲ ನಿಂತಲ್ಲೆ ನಿಂತು ಈ ನಾಟಕ ನೋಡುತಿದ್ದರು.

ಹೆಚ್ಚು ಕಷ್ಟವಿಲ್ಲದೆ ಸರಸಮ್ಮ, ಆ ಜಗಳ ನಿಲ್ಲಿಸಿದರು ಹುಡುಗಿಯ ರನ್ನೆಲ್ಲ ಸಾಮೂಹಿಕವಾಗಿ ಬಯ್ದು, ಅವರೆಲ್ಲ ತಮ್ಮ ಕೆಲಸಗಳಿಗೆ ಮನಸ್ಸು ಕೊಡುವಂತೆ ಮಾಡಿದರು.

ಒಂಭತ್ತು ಘಂಟೆಗೆ ಆ ಪೋಲೀಸಿನವನು ಬಂದ ಆತ ಒರಟು ಮಾತುಗಳನ್ನು ಆಡಲಿಲ್ಲವಾದರೂ ಸರಸಮ್ಮನ ಬಗೆಗೆ ಆತನಿಗಿದ್ದ ದ್ವೇಷ ಮುಖಭಾವದಿಂದಲೆ ಸ್ಪಷ್ಟವಾಗುತಿತ್ತು. ಆತ, ಸರಸಮ್ಮ ಕೊಟ್ಟ ಕಾಗದವನ್ನು ತೆಗೆದುಕೊಂಡ "ಇದು ನನ್ನ ಮೇಲೆ ಕಂಪ್ಲೇಂಟೊ?

"ನಿಮ್ಮ ಮೇಲೆ ಯಾಕಪ್ಪ ಕಂಪ್ಲೇಂಟು? ಈ ಹುಡುಗಿಯರ ವಿಷಯ ಬರೆದಿದೀನಿ.” “ ಏನೂಂತ ???