ಪುಟ:Abhaya.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೮

ಅಭಯ

ಪ್ರತಿಸಾರಿಯೂ ಇಂಥ ಹುಡುಗೀರ ವಿಷಯ ಇನ್‌ಸ್ಪೆಕ್ಟರಿಗೆ ವರದಿ
ಕೊಡ್ಬೇಕೊಂತ ಡಿ. ಎಸ್. ಪಿ. ಸಾಹೇಬರು ಹೇಳಿದ್ದಾರೆ.”
ಮತ್ತೆ ಡಿ ಎಸ್. ಪಿ. ಸಾಹೇಬರು!.... ಪೋಲೀಸಿನವನು ಸುಮ್ಮನಾದ.
"ಸ್ಟೇಷನಿಂದ ಬಂದು ಅಲ್ಲಿ ಏನಾಯ್ತೂಂತ ತಿಳಿಸ್ತೀರಾ ?”
ಆತ ಹೂಂ ಎನ್ನಲಿಲ್ಲ. ಲಾಳಹೊಡೆದಿದ್ದ ಬೂಟುಗಳಿಂದ ಅಸ
ಹನೀಯವಾದ ಸಪ್ಪಳಮಾಡುತ್ತ ಹುಡುಗಿಯರೊಡನೆ ಹೊರಟುಹೋದ.


ಪೋಲಿಸಿನವನು ಬಂದು ಏನನ್ನೂ ಹೇಳಲಿಲ್ಲ.
ಸರಸಮ್ಮನೇ ಸ್ಟೇಶನಿಗೆ ಹೋಗಿ ವಿಚಾರಿಸಿಕೊಂಡು ಬಂದರು.
ಕಾವೇರಿಯ ತಂದೆ, ಮಗಳನ್ನು ಕರೆದುಕೊಂಡು ಹೋಗಿದ್ದರು ಬಾನಕಿ
ಯನ್ನೂ ಎಚ್ಚರಿಕೆಯ ಮಾತುಗಳನ್ನಾಡಿದಮೇಲೆ ಬಿಟ್ಟು ಬಿಡಲಾಗಿತ್ತು.
ತುಂಗಮ್ಮನಿಗೆ ಇದನ್ನು ಕೇಳಿ ಸಂತೋಷವಾಯಿತು.
ಜಲಜ ಒಂದು ಮಾತೆಂದಳು :
"ಅವರು ಆ ಜಾನಕೀನ ಇಲ್ಲಿಗೆ ಕಳಿಸಿ ಕೊಡಲಿಲ್ಲವಲ್ಲ ! ನಮ್ಮ
ಪುಣ್ಯ !”