ಪುಟ:Abhaya.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪

ಒಂದು ಸಂಜೆ ಸಮಿತಿಯ ಸಭೆಯಿಂದ ಹಿಂತಿರುಗಿದ ಸರಸಮ್ಮ ಎಂದಿ ಗಿಂತಲೂ ಹೆಚ್ಚು ಹಸನ್ಮುಖಯಾಗಿದ್ದರು. ಹೊರಬದ್ದಾಗಲೆ ಹೇಳಿದ್ದ ರಾಕೆ, ಆ ದಿನ ಸಮಿತಿಯ ಸಭೆಯಲ್ಲಿ ತುಂಗಮ್ಮನ ವಿಷಯ ಚರ್ಚೆಯಾಗು ವುದೆಂದು ಆ ಕಾರಣದಿಂದ, ಸರಸಮ್ಮ ಬರುವುದನ್ನೆ ಇದಿರು ನೋಡುತಿ ದ್ವಳು ತುಂಗಮ್ಮ. ಅವರು ಬಂದಾಗ, ಆ ಮುಖವನ್ಫ಼್ನು ನೋಡುತ್ತಲೆ, ಸಮಿತಿಯ ಇತ್ಯರ್ಥ ಏನಿರಬಹುದೆಂದು ಊಹಿಸುವುದು ತುಂಗಮ್ಮನಿಗೆ ಕಷ್ಟವಾಗಲಿಲ್ಲ. ಆದರೂ ಪರೀಕ್ಷೆಯ ಫಲಿತಾಂಶ ತಿಳಿಯಲು ನಿಂತಿದ್ದ ಜಾಣೆಯಾದ ವಿದ್ಯಾರ್ಥಿನಿಯ ಹಾಗೆ ಅಕೆ, ತನ್ನ ದೊಡ್ಡಮ್ಮನನ್ನು ಇದಿರ್ಗೊಂಡಳು,

ಆದರೆ, ಅವರಿಬ್ಬರಲ್ಲಿ ಯಾರು ಮಾತನಾಡುವುದಕ್ಕೂ ಅವಕಾಶ ಕೊಡದೆ, ಜಲಜ ಕೇಳಿದಳು:

“ಏನು ತೀರ್ಮಾನವಾಯ್ತು ದೊಡ್ಡಮ್ಮ?"

ಸರಸಮ್ಮ, ಒಮ್ಮೆಲೆ ಮುಖ ಬಾಡಿಸಿ ವಿಷಾದದಿಂದ ತಲೆಯಾಡಿ ಸಿದರು.

“ತುಂಗ ಇನ್ನು ಇಲ್ಲಿ ಇರಕೂಡದಂತೆ *

ತುಂಗಮ್ಮನ ಎದೆ ಧಸಕ್ಕೆಂದಿತು. ಜಲಜ ಆಕ್ರೋಶಮಾಡಲು ಸಿದ್ಧಳಾಗಿ ಏರಿಸಿದ ಸ್ವರದಲ್ಲಿ ಅಂದಳು:

“ಸುಳ್ಳು ! ದೊಡ್ಡಮ್ಮ, ಸುಳ್ಳು ಹೇಳ್ತಿದೀರಿ ನೀವು!

ಸರಸಮ್ಮ ನಕ್ಕರು.

“ಅಷ್ಟು ಗೊತ್ತಿದ್ದೋಳು ಮತ್ಯಾಕೆ ಕೇಳ್ವೆ--ಏನು ತೀರ್ಮಾಕ ಅಂತ?"

ದೊಡ್ಡಮ್ಮನ ನಗು ಸಮಾಧಾನಗೊಳಿಸಿದರೂ ತುಂಗಮ್ಮ ಕೇಳಿದಳು :

14