ಪುಟ:Abhaya.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೦ ಅಭಯ

“ಅಲ್ಲಿ ಏನು ಹೇಳಿದ್ರು ದೊಡ್ಡಮ್ಮ?

“ಒಪ್ಪಿಗೆ ಅಂದ್ರು. "ಓ!"

ಓ--ಎಂದವರು ಇಬ್ಬರು; ತುಂಗಮ್ಮ ಮತ್ತು ಜಲಜ. ಆ ಗೆಳತಿ ಯರು ಸಂತೋಷದಿಂದ ಪರಸ್ಪರರನ್ನು ನೋಡಿದರು.

“ನೀನು ಮಾಡಬೇಕಾದ ಕೆಲಸ ಯಾವುದು ಗೊತ್ತೆ ತುಂಗ? ಏನೇನೂ ಓದು ಬರದೇ ಇರೋರಿಗೆ ಅಕ್ಷರಾಭ್ಯಾಸ ಮಾಡಿಸ್ಬೇಕು ; ಆಫೀಸು ನೋಡ್ಟೋಬೇಕು; ಲೆಕ್ಕಪತ್ರ ಇಟ್ಕೋಬೇಕು. ಚುಟುಕಾಗಿ ಹೇಳೋದಾದರೆ ನೀನು ಅಧ್ಯಾಪಿಕೆ, ಗುಮಾಸ್ತೆ ಮತ್ತು ನನ್ನ ಸಹಾಯಿಕೆ | ಏನೆಂತೀಯಾ ?

ತನ್ನ ಕಿವಿಗಳನ್ನು ತುಂಗಮ್ಮ ನಂಬಲಾರದೆ ಹೋದಳು.

"ಇಷ್ಟೂ ನಿಮ್ಮ ದಯದಿಂದ ದೊಡ್ಡಮ್ಮ."

“ಹಾಗೆಲ್ಲ ಹೇಳ್ಬಾರ್‍ದು ತುಂಗ

«ನಾನೂ ಒಂದು ಮಾತು ಆಡ್ಬಹುದೊ?"

--ಎಂದಳು ಜಲಜ ನಡುವೆ ಬಾಯಿ ಹಾಕೆ. ಆ ಸ್ವರ ಎಂದಿನಂತಿರ ಲಿಲ್ಲ. ಸರಸಮ್ಮನೆಂದರು:

"ಏನು ಹೇಳು."

«ಇವತ್ತೇ ಆಖೈರಿ. ತುಂಗಕ್ಕ ಇನ್ನು ನನ್ಜತೇಲಿ ಮಲಗ್ಬಾರ್‍ದು.

ಯಾಕಂತೀಯಾ ಹಾಗೆ ?

--ಎಂದಳು ತುಂಗಮ್ಮ, ಹಾಗನ್ನ ಬೇಡವೆಂದು ಅಂಗಲಾಚುವ ಧ್ವನಿಯಲ್ಲಿ.

  • ಅಲ್ವೆ ಮತ್ತೆ? ತುಂಗಕ್ಕ ಇನ್ನು ಮೇಷ್ಟ್ರು. ನಮ್ಜತೇಲಿ

ಇರೋಕಾಗುತ್ತಾ?

ಆ ಧ್ವನಿಯ ನೋವಿಗೆ ಕಾರಣ ಹುಡುಕಿದರು ಸರಸಮ್ಮ. ಹಳಬ ಳಾದ ತನಗೆ ದೊರೆಯದ ಸ್ಥಾನಮಾನ ಹೊಸಬಳಾದ ತುಂಗಮ್ಮನಿಗೆ ದೊರೆಯಿತೆಂದು ಜಲಜ ಮತ್ಸರಪಡಬಹುದೆ? ಅಂತಹ ಭಾವನೆ ಜಲಜೆಯ ಮನಸಿನಲ್ಲಿ ನುಸುಳಿದ್ದುದೇನೊ ಫಿಜಿ. ಆದರೆ ಅದು, ಆ ತಿಳಿ