ಪುಟ:Abhaya.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೧೧

ಯಾದ ಮನಸಿನಲ್ಲಿ ನೆಲೆಗೊಳ್ಳಲು ತಾಣವಿಲ್ಲದೆ ತೇಲಿ ಹೋಗಿತ್ತು. ಅಲ್ಲಿದ್ದು ದೊಂದೇ-- ತಮ್ಮಿಬ್ಬರ ಗೆಳೆತನದ ನಡುವೆ ತುಂಗಮ್ಮನ ಈ ಹೊಸಹುದ್ದೆ ಅಡ್ಡಗೋಡೆಯಾಗುವುದಲ್ಲಾ ಎಂಬ ದುಃಖ ಅದೇ ಆ ಹುಡುಗಿಯನ್ನು ಕೊರೆಯುತಿದ್ದ ವ್ಯಥೆ ಎಂಬುದನ್ನು ಸರಸಮ್ಮ ಸುಲಭವಾಗಿ ಗೊತ್ತು ಮಾಡಿದರು.

ಹಾಗಿದ್ದರೆ, ಜಲಜೆಯ ಮಾತಿನಲ್ಲಿ ಸತ್ಯಾಂಶವಿತ್ತು

"ತುಂಗಾ, ಅದೂ ಯೋಚಿಸ್ಬೇಕಾದ್ದೇ ನೋಡು ನಿಂಗೆ ಮಲ ಗೋಕೆ ಆಫೀಸು ಕೊಠಡಿ ಇದೆ ಬಟ್ಟೆ ಬರೆ ಹಾಸಿಗೆ ಏನು ಬೇಕಾದ್ರೂ ನೀನು ಕೊಂಡ್ಕೋಬಹುದು."

  • ಹೇಳ್ಲಿಲ್ವಾ ನಾನು?”

--ಎಂದು ಅಣಕಿಸಿ, ಜಲಜ ಕೇಳಿದಳು :

“ಸಮಿತಿಯೋರು ಸಂಬಳ ಎಷ್ಟು ಕೊಡ್ತಾರಮ್ಮ ನಮ್ಮ ಮೇಡಂಗೆ ?"

ತುಂಗಮ್ಮನಿಗೂ ಆ ವಿಷಯವನ್ನು ತಿಳಿಯುವ ಆತುರ. ಜತೆಯಲ್ಲೆ, ಜಲಜ ತನ್ನನ್ನು ಮೇಡಂ ಎಂದು ಕರೆದಳೆಂದು ಲಜ್ಜೆ-ಕೋಪ.

“ಆರು ತಿಂಗಳವರೆಗೆ ಮೂವತ್ತೈದು ಕೊಡ್ತಾರೆ ಆ ಮೇಲೆ ನಾಲ್ವತ್ತು. ಊಟ-ವಸತಿಗೇಂತ ತುಂಗ ಏನೂ ಕೊಡಬೇಕಾದ್ದಿಲ್ಲ."

ಅಷ್ಟನ್ನು ಆ ಹುಡುಗಿಯರು ನಿರೀಕ್ಷಿಸಿಯೇ ಇರಲಿಲ್ಲ

“ಇನ್ನು ಈ ಬಡ ಜಲಜೇನ ತುಂಗಕ್ಕ ಜ್ಞಾಪಿಸುತ್ತಾಳೋ ಇಲ್ವೋ?"

“ಸಾಕು, ಸಾಕೇ!"

“ಅಲ್ಲ ದೊಡ್ಡಮ್ಮ ಇನ್ನು ಈ ತುಂಗಕ್ಕನ್ನ ನಾನು ಅವರು ಇವರೂಂತ ಕರೀಬೇಕು, ಅಲ್ವಾ?”

“ನೋಡಿ ದೊಡ್ಡಮ್ಮ, ಎಷ್ಟೊಂದು ಪೀಡಿಸ್ತಾಳೆ ನನ್ನ.”

ಸರಸಮ್ಮ ಸಕ್ಕು, ಹುಡುಗಿಯರನ್ನು ಅವರಷ್ಟಕ್ಕೆ ಬಿಟ್ಟು, ಕೊಠಡಿ ಯೊಳಕ್ಕೆ ಹೋದರು ಸೀರೆ ಬದಲಿಸಿ ಅವರು ಸಾದಾಸೀರೆಯುಟ್ಟು ಕೊಂಡರು ಮೂಲೆಯಲ್ಲಿ ತೂಗುತಿದ್ದ ಸುಟ್ಟಿ ಕನ್ನಡಿಯಲ್ಲಿ ಮುಖ ನೋಡಿದರು ಅವರ ಪಾಲಿಗೆ ಆ ದಿನ ಮಹತ್ಚಪೂರ್ಣವಾಗಿತ್ತು