ವಿಷಯಕ್ಕೆ ಹೋಗು

ಪುಟ:Abhaya.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೨ ಅಭಯ

ಸಹಾಯಿಕೆಯೊಬ್ಬರು ಬೇಕೆಂದು ಬಹಳ ದಿನಗಳಿಂದ ಅವರು ಒತ್ತಾಯಿಸು ತಿದ್ದ ಕೇಳಿಕೆ ಅಂತೂ ಕೊನೆಗೊಮ್ಮೆ ಮಾನ್ಯವಾಯಿತು. ಅದೂ ಕೂಡಾ, ಎಂತಹ ಸಹಾಯಿಕೆ ದೊರೆತಿದ್ದಳು--ಎಂದೋ ಮಾಡಿದ್ದ ಪುಣ್ಯ ಕೆಲಸದ ಫಲವೇ ಎನ್ನುವ ಹಾಗೆ |

ತಮಗೆ ನೆರವು ದೊರೆಯಿತೆಂಬ ಸ್ವಾರ್ಥದ ಆ ಅಂಶಕ್ಕಿಂತಲೂ ಹೆಚ್ಚಾಗಿ, ತಾವು ನಂಬಿಕೆ ಇರಿಸಿದ್ದ ಪ್ರೀತಿಸಿದ್ದ ಹುಡುಗಿಯೊಬ್ಬಳ ಬದುಕು ಇನ್ನು ಸುಗಮವಾಗುವುದೆಂಬ ಅಂಶ ಅವರನ್ನು ಸಂತೋಷ ಗೊಳಿಸಿತ್ತು.

ಹೊರಗೆ ಜಲಜ ಸುಮ್ಮನಿರಲಿಲ್ಲ. ಕಟ್ಟಿಡದ ನಾಲ್ಕು ಮೂಲೆಗ ಳಿಗೂ ಆಕೆ ನೆಗೆದು ಹೋಗಿ ಆ ಸುದ್ದಿ ತಿಳಿಸಿದಳು. ಸಂತೋಷಪಟ್ಟ ಹುಡುಗಿಯರು ಕೆಲವರು; ಮುಖಸಿಂಡರಿಸಿಕೊಂಡವರು ಕೆಲವರು... ಜಲಜ ಆಸರೆ ಕೊಡದೇ ಹೋದ ಮತ್ಸರ, ಬೇರೆ ಬೇರೆ ಹೃದಯಗಳಲ್ಲಿ ವಿಧವಿಧವಾಗಿ ಹೆಡೆಯಾಡಿಸಿತು.

"ಘಾಟಿ! ದೊಡ್ಡಮ್ಮನ್ನ ಬಲೆಗೆ ಹಾಕ್ಕೊಂಡ್ಬಿಟ್ಲು"

“ಚಾಲಾಕಿ. ಹೊರಗೆ ಇದ್ದು ಚೆನ್ನಾಗಿ ವ್ಯಾಪಾರ ನಡೆಸೋದು ಬಿಟ್ಟಿಟ್ಟು....

“ಇನ್ನು ಇವಳ್ಕೈಲಿ ಪಾಠ ಬೇರೆ ಹೇಳಿಸ್ಕೋಬೇಕೊ?”

ಆ ವಾರ್ತೆಯಿಂದ ಅನಂದಿತರಾದವರಿಗೂ ಕಡಿಮೆ ಇರಲಿಲ್ಲ.

“ತುಂಗಮ್ಮ ಒಳ್ಳೆಯವಳಮ್ಮ-ನಿಜವಾಗ್ಲೂ."

“ಆ ರಾಜಮ್ನಂಥ ಮಡ್ಡಮ್ಮಗಳ್ನ ಕರೆಸ್ಕೊಳ್ದೆ, ತುಂಗಮ್ಮನ್ನೇ ನೇಮಿಸ್ಕೊಂಡು ಒಳ್ಳೇ ಕೆಲಸ ಮಾಡಿದ್ರು "

ಈ ನೇಮಕ ತಮಾಷೆಯಾಗಿಯೂ ತೋರಿತು ಕೆಲವರಿಗೆ.

“ಅಂತೂ ಇನ್ನು ತುಂಗಮ್ಮನ್ನ ಮೇಡಂ ಅಂತ ಕೂಗ್ಬೇಕು."

“ವಯಸ್ನಲ್ಲಿ ನನಗಿಂತ್ಲೂ ಆಕೆ ಒಂದು ವರ್ಷ ಚಿಕ್ಕೋಳು ಕಣೇ!"

ಸಮಿತಿಯ ತೀರ್ಮಾನದ ವಿಷಯದಲ್ಲಿ ಅಭಯಧಾಮದ ಹುಡುಗಿಯ ರಲ್ಲೆಲ್ಲ ಏಕಾಭಿಪ್ರಾಯವಿಲ್ಲದೆ ಇದ್ದುದನ್ನು ತುಂಗಮ್ಮ ಗಮನಿಸದಿರಲಿಲ್ಲ. ಅದನ್ನು ಕಂಡು ಆಕೆಗೆ ಸ್ವಲ್ಪ ಕಸಿವಿಸಿಯಾಯಿತು.