ಪುಟ:Abhaya.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಗಮ್ಮ ತಿರಿಗಿನೋಡಲಿಲ್ಲ.

ನಾಲ್ಕು ದಿನಗಳ ದೀರ್ಘಾಕಾಲ ಮನಸಿನೊಳಗೇ ತುಮಲ ನಡೆದು

ಕೊನೆಯ ನಿರ್ಧಾರಕ್ಕೆ ಆಕೆ ಬಂದಿದ್ದಳು ಔಷಧಿ ತರಲೆಂದು ಮಾವಳ್ಳಿಯ ಆವರಣದಿಂದ ಹೊರಬಿದ್ದ ತುಂಗಮ್ಮ ಬೇರೆಯೇ ಹಾದಿ ಹಿಡಿದಳು "ಇನ್ನೂ ಬೆಳಕಿದೆ. ಯಾರಾದರೂ ನೋಡುತ್ತಿದಾರೋ ಏನೋ ಒಮ್ಮೆ ಕತ್ತಲಾದರೆ-ಒಮ್ಮೆ ಕತ್ತಲಾದರೆ!" ಎಂದು ಹೇಳುತ್ತ ಆಕೆ,ಕ್ರುಂಬೀಗಲ್ ರಸ್ತೆಯುದ್ದಕ್ಕೂ ನಡೆದಳು.ಒಮ್ಮೆಯೂ ತಿರುಗಿ ನೋಡಲಿಲ್ಲ ತುಂಗಮ್ಮ.

ಮುಂದೆ ದೊರೆತುದು ಐದು ರಸ್ತೆಗಳು ಒಂದುಗೂಡಿದ ಹಿರಿಯ

ವೃತ್ತ ಅಲ್ಲೇ ಇತ್ತು ಲಾಲ್ಬಾಗ್ ಉದ್ಯಾನದ ದಕ್ಷಿಣ ಹೆಬ್ಬಾಗಿಲು.

ತುಂಗಮ್ಮನ ದೃಷ್ಟಿ ಉದ್ಯಾನದ ಆವರಣವನ್ನು ಹಾದು ಒಳಕ್ಕೆ

ಸರಿಯಿತು.

-ಹಸುರು ಹುಲ್ಲಿನ ಮೇಲೆ ಕುಳಿತು ಕಡಲೇಕಾಯಿ ತಿನ್ನುತ್ತ ಹರಟೆ

ಹೊಡೆಯುತ್ತಿದ್ದವರು; ಕಾಲುಹಾದಿಯಲ್ಲೂ ಕೆರೆಯ ಏರಿಯ ಮೇಲೂ ನಡೆದು ಹೋಗುತ್ತಿದ್ದ ಯುವಕ ಯುವತಿಯರು, ಹುಡುಗ ಹುಡುಗಿಯರು;ವಿಹಾರಕ್ಕೆ ಬಂದ ವೃದ್ಧ ದಂಪತಿಗಳು.. ಕ್ರಾಪು ಕತ್ತರಿಸಿಕೊಂಡಿದ್ದ ಹಸುರು ಗಿಡಗಳು; ಅಲಂಕಾರವಾಗಿ ಶಾಸ್ತ್ರ ಬದ್ಧವಾಗಿ ಬೆಳೆದಿದ್ದ ಬಣ್ಣದ ಹೂಗಳು.

ಎಲ್ಲವೂ ಹಿಂದಿನಂತೆಯೇ, ಎಂದಿನಂತೆಯೇ...

ಮಾದಳ್ಳಿ ಮನೆಯ ಆ ಐದು ತಿಂಗಳ ಅಜ್ಞಾತವಾಸದ

ಅವಧಿಯಲ್ಲಿ ಮೂರು ಬಾರಿ ತುಂಗಮ್ಮ, ತನಗೆ ರಕ್ಷಣೆಯನ್ನಿತ್ತಿದ್ದ ಗೃಹಿಣಿಯೊಡನೆ ಮುಚ್ಚಂಜೆಯಾದ ಬಳಿಕ ಲಾಲ್ಬಾಗಿಗೆ ಬಂದಿದ್ದಳು ಅಲ್ಲಿ ಆಗ ಮಗುವಿನಂತೆ ವಿಹರಿಸಬೇಕೆಂದು ಆಕೆಯ ಮನಸ್ಸು ಬಯಸಿತ್ತು. ಆದರೆ ಅದು