ಪುಟ:Abhaya.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೧೫

ಧಾಮದಿಂದ ಏನೂ ಪ್ರಯೋಜನವಾಗೊಲ್ಲ ಅನಿಸ್ತಿತ್ತು ಆದರೆ ಆಗಾಗ್ಗೆ ಒಳ್ಳೇ ಹುಡುಗೀರ್‍ನ ನಾನು ನೋಡೋದ್ರಿಂದಾನೇ ಇನ್ನೂ ಇಲ್ಲೇ ಇದೀನಿ...”

"ಹೌದು ದೊಡ್ಡಮ್ಮ, ನಂಗೂ ಈಗ ಅರ್ಥವಾಗ್ತಿದೆ. ಜಲಜ- ಲಲಿತೆಯರಂಥ ಒಳ್ಳೇ ಹುಡುಗೀರು ಇಲ್ಲೇ ಇದ್ರೆ, ಇವರ್‍ನೆಲ್ಲ ಸುಧಾರಿ ಸ್ಕೊಂಡು ಹೋಗೋದು ಬಲುಕಷ್ಟ.”

ಉತ್ತರವಾಗಿ ಅನುಭವದ ಆಳದಿಂದ ಕೆಲವು ಮಾತುಗಳು ಬಂದುವು.

“ಜಲಜಾ, ಲಲಿತಾ, ನಾನು, ನೀನು-ಪರಿಪೂರ್ಣರು ಯಾರೂ ಇಲ್ಲ ತುಂಗ. ಸಣ್ಣದಾಗಲಿ ದೊಡ್ಡದಾಗಲಿ ತಪ್ಪು ಮಾಡ್ದೇ ಇರೋರು ಇಲ್ಲವೇ ಇಲ್ಲ. ತಪ್ಪು ಮಾಡೋದು ಮನುಷ್ಯನ ಸ್ವಭಾವ. ತಪ್ಪು ಮಾಡಿದ್ಮೇಲೆ ಅದನ್ನು ತಿದ್ದಿಕೋಬೇಕಾದ್ದು ಮನುಷ್ಯನ ಕರ್ತವ್ಯ. ಕೆಟ್ಟವರೂಂತ ನಾವೆ ಭಾವಿಸೋವರಲ್ಲೂ ಒಳ್ಳೆತನ ಇರ್‍ತದೆ. ಒಳ್ಳೆಯವರೂಂತ ನಾವು ತಿಳಕೊಂಡವರಲ್ಲೂ ಕೆಟ್ಟತನ ಇರ್‍ತದೆ. ಇಲ್ಲ ಅಂತೀಯಾ?”

ನಿಧಾನವಾಗಿ ಬರುತಿದ್ದ ಮಾತುಗಳನ್ನು ಕೇಳುವುದರಲ್ಲೆ ತಲ್ಲೀನ ಗಿದ್ದ ತುಂಗಮ್ಮ ಎಚ್ಚರಗೊಂಡಳು ಏನು ಉತ್ತರ ಹೇಳಬೇಕೆಂದು ಆಕೆಗೆ ಹೊಳೆಯಲಿಲ್ಲ.

"ಹೂಂ" ಎಂದಳಾಕೆ.

ಭಿನ್ನಾಭಿಪ್ರಾಯದ ಉತ್ತರವನ್ನು ತುಂಗಮ್ಮನಿಂದ ನಿರೀಕ್ಷಿಸದೇ ಇದ್ದ ಸರಸಮ್ಮ, ಬೇರೆ ಮಾತಿನ ಹಾದಿ ನೋಡದೆ, ಮುಂದುವರಿಸಿದರು :

“ನಿನಗೆ ಈಗಾಗಲೇ ಗೊತ್ತಾಗಿರ್‍ಬೇಕು. ಅಭಯಧಾಮವನ್ನ ಪ್ಯು ಸ್ಥಿತಿಗೆ ತರೋದು ಸುಲಭವಾಗಿರ್‍ಲಿಲ್ಲ. ಹಿಂದೆ ಹ್ಯಾಗಿತ್ತೂಂತ!..."

............

ಹಾಗೆ ಸರಸಮ್ಮ, ತಮ್ಮ ಕೆಲವೊಂದು ಅನುಭವಗಳನ್ನು ಕುರಿತು ಹೇಳಿದರು.

ಆಕೆ ಸಹಾಯಿಕೆಯಾಗಿ ಅಭಯಧಾಮಕ್ಕೆ ಬಂದಾಗ ಆಗಿನ ಮೇಟ್ರನ್‌ಗೆ ವಯಸ್ಸಾಗಿತ್ತು. ಆಗ ಬರುತಿದ್ದ ಹುಡುಗಿಯರ ಮೈ ಮೇಲಿರು