ಪುಟ:Abhaya.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೮ ಅಭಯ

ಆಗ ಅವರೊಡನೆ ಸಹಾನುಭೂತಿ ತೋರಿಸಿದ್ದ ಹುಡುಗಿಗೆ ಮುಂದೆ ಮದುವೆಯಾಯಿತು...

ಇನ್ನೊಂದು ಕಥೆ, ಪೋಲೀಸರು ಸೊಳೆಗೇರಿಯಿಂದ ಹಿಡಿದು ತಂದಿದ್ದೊಂದು ಹುಡುಗಿಗೆ ಸಂಬಂಧಿಸಿದ್ದು.

ಅವರು ಒಪ್ಪಿಸಿ ಹೋದ ಹುಡುಗಿ ಚೆಲುವೆಯಾಗಿದ್ದಳು.

ಮರುದಿನವೆ ಮಧ್ಯವಯಸ್ಸಿನ ಹೆಂಗಸೊಬ್ಬಳು ಬಂದು, ಬಾಗಿಲು ಬಡೆದು, ಸರಸಮ್ಮನ ಕಾಲಿಗೆ ಬಿದ್ದು ಅತ್ತಳು:

“ಉಡ್ಗಿ ನನ್ನ ಒಬ್ಳೇ ಮಗಳು. ಒಳ್ಳೇವಳಮ್ಮಾ ಒಳ್ಳೇವ್ಳು... ಈ ವರ್ಸವೇ ಮದುವೆ ಮಾಡ್ಬೇಕೂಂತಿದ್ದೆ...ಯಾರೋ ಚಾಡು ಹೇಳ್ಕೊ ಟ್ಫವ್ರೆ....ಬುಟ್ಟುಡೀಮ್ಮಾ ಬುಟ್ಬುಡಿ....!"

ಸರಸಮ್ಮ ಆ ಹುಡುಗಿಯನ್ನು ಕರೆದು ಕೇಳಿದರು:

"ಈಕೆ ನಿನ್ತಾಯಿನ ?*

ಹುಡುಗಿ ಅಲ್ಲವೆನ್ನಲಿಲ್ಲ.

“ಬಾ ಮೊಗಾ ಒಂಟೋಗೋವಾ

ಎಂದು ಪ್ರೀತಿಯ ಧ್ವನಿಯಲ್ಲಿ ಹೆಂಗಸು ಪುಸಲಾಯಿಸಲೆತ್ನಿಸಿದಳು.

ಹುಡುಗಿ ಮಾತನಾಡಲಿಲ್ಲ.

ಇದೊಂದೂ ಅರ್ಧವಾಗದೆ ಸರಸಮ್ಮ ಉಪಾಯವಾಗಿ ಆಕೆಯನ್ನು ಹೊರಹಾಕಬೇಕಾಯಿತು :

“ನಾಳೆ ಪೋಲೀಸ್ರಿಂದ ಚೀಟಿ ತಗೊಂಡು ಬಾ ಅಮ್ಮ ನಿನ್ನ ಮಗಳ್ನ ಬಿಟ್ಬಿಡ್ತೀನಿ.”

ಆದರೆ ಆ ಹೆಂಗಸು ಹೋಗಿ, ಬಾಗಿಲು ಮುಚ್ಚಿಕೊಂಡಿತೋ ಇಲ್ಲವೋ, ಆ ಹುಡುಗಿ ದೊಡ್ಡಮ್ಮನ ಮೊಣಗಾಲನ್ನು, ಭಯದಿಂದ ಕಂಪಿಸುವ ಮಗುವಿನಂತೆ ಬಿಗಿಹಿಡಿದು ಅತ್ತಳು.

“ನನ್ನ ಕಳಿಸ್ಬೇಡಿ ದೊಡ್ಡಮ್ಮ ಕಳಿಸ್ಬೇಡಿ.... !"

ವಿಚಾರಿಸಿದಾಗ ವಿಷಯ ತಿಳಿಯಿತು. ಆಕೆಯನ್ನು ಕೆಟ್ಟ ಹಾದಿಗೆ ಹಚ್ಚಿದ್ದವಳು ತಾಯಿಯೇ. ಈಗ ತನ್ನ ಸಂಪಾದನೆಯ ಮಾರ್ಗ ಕೈ ತಪ್ಪಿ ಹೋಗುತ್ತದೆಂದು ಅವಳಿಗೆ ಸಂಕಟವಾಗಿತ್ತು. ಮಗಳನ್ನು ಮತ್ತೆ ದೊರಕಿಸಿ