ಪುಟ:Abhaya.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೧೯

ಕೊಂಡು ವ್ಯಾಪಾರವನ್ನು ಎಂದಿನಂತೆ ನಡೆಸಲು ಯತ್ನಿಸುತಿದ್ದಳು ಆ ಮಹಾತಾಯಿ.

ಸರಸಮ್ಮನ ಕಣ್ಣು ಕಿಡಿ ಕಾರಿತು.

“ಹೆದರಬೇಡ! ನಾನಿದೀನಿ!"

--ಎಂದು ಅವರು ಧೈರ್ಯ ಹೇಳಿದರು.

ಮಾರನೆ ದಿನವೂ ಬಂದಳು ಆ ಹೆಂಗಸು.-ಚೀಟ ಇಲ್ಲದೆಯೇ. ಸರಸಮ್ಮ, ಆಕೆಯನ್ನು ಒಳ ಬರಲು ಬಿಡದೆ, ಬಾಗಿಲಲ್ಲೆ ನಿಂತರು. “ಇಂಗ್ಯಾಕೆ ಮಾಡ್ತೀರಮ್ಮಣ್ಣಿ” ನಿಮ್ಗೂ ಮಕ್ಕಳಿಲ್ಲವ್ರಾ?” ಎಂದು ಕವಟದ ಕಣ್ಣೀರು ಸುರಿಸಿದಳು ಆ ಹೆಂಗಸು

"ನಂಗೆ ಮಕ್ಕಳಿಲ್ಲ ನಡಿ. ಹೋಗು ಇನ್ನು ಬರ್ಬೇಡ!"

“ಎತ್ತ ತಾಯಿ ಒಟ್ಟಿ ಉರಿಸ್ಬ್ಯಾಡ್ರವ್ವಾ!” “ಹೋಗ್ತೀಯೋ, ಅಲ್ಲಿ ಪೋಲೀಸ್ರಿಗೆ ಹೇಳಿ ಕಳಿಸ್ಲೊ? ಸಾಕು ನಿನ್ನ ನಾಟ್ಕ!"

ಪೋಲೀಸರ ಮಾತು ಬಂದ ಮೇಲೆ ಆ ಹೆಂಗಸಿನ ಚರ್ಯೆ ಬದಲಾ ಯಿತು. ಕೆಟ್ಟ ಮಾತುಗಳಲ್ಲಿ ತನ್ನ ಮಗಳನ್ನು ಆಕೆ ಶಪಿಸಿದಳು

“ನನ್ನ ಮಗಳ್ನ ಮಡಿಗ್ಕೊಂಡು ಸೂಳೆಗಾರ್‍ಕೆ ಮಾಡಿ ಸಂಪಾದಿಸ್ಬೇ ಕೂಂತ ಮಾಡಿದೀಯಾ ?"

ಎಂದು ಸರಸಮ್ಮನಿಗೇ ಮಂಗಳಸ್ನಾನ ಮಾಡಿಸಿದಳು!

....ಬೇರೆ ಒಂದೆರಡು ಸಾರಿ ಹುಡುಗಿಯರೇ ಓಡಿ ಹೋಗಲು ಯತ್ನಿಸಿದುದಿತ್ತು.. ಅವರ ಪ್ರಿಯತಮರು ರಾತ್ರೆ ಹೊತ್ತು ಹೊರಗೆ ನಿಂತುಕೊಂಡು ವಿಚಿತ್ರವಾಗಿ ಸಿಳ್ಳು ಹಾಕುತಿದ್ದರು...ಅಂತಹ ಸಂದರ್ಭ ಗಳಲ್ಲಿ ತಾನು ಎಚ್ಚರಗೊಂಡಾಗಲೆಲ್ಲ ಸರಸಮ್ಮ ಕಣ್ಣಲ್ಲಿ ಎಣ್ಣೆ ಇಟ್ಟು ಹುಡುಗಿಯರನ್ನು ಕಾಯುತಿದ್ದರು; ಆರಿಸಿದ್ದ ನಿದ್ಯುದ್ದೀಪಗಳನ್ನೆಲ್ಲ ಉರಿಸಿ ಇಡುತಿದ್ದರು.

....ಅದಾದ ಮೇಲೆ, ಹೊರಗಿನಿಂದ ಕೆಟ್ಟ ತಿಂಡಿಯನ್ನು ತಂದುಕೊಟ್ಟು ಹುಡುಗಿಯೊಬ್ಬಳು ಕಾಹಿಲೆ ಬೀಳುವಂತೆ ಮಾಡಿ, ಆಸ್ಪತ್ರೆಯಿಂದ ಆಕೆ ಯನ್ನು ಓಡಿಸಿಕೊಂಡು ಹೋಗಲು ನಡೆದ ಯತ್ನ.