ವಿಷಯಕ್ಕೆ ಹೋಗು

ಪುಟ:Abhaya.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ೨೨೦ ಅಭಯ ........

ತುಂಗಮ್ಮ, ನಿಜವಾಗಿಯೂ ಅತ್ಯಂತ ಸ್ವಾರಸ್ಯಕರವಾದ ಕತೆ ಕೇಳುನವವಳಂತೆ, ಸರಸಮ್ಮ ಹೇಳಿದುದಕ್ಕೆಲ್ಲ ಕಿವಿಗೊಟ್ಟಳು. ಜಲಜ ತನಗೆ ಗೊತ್ತಿದ್ದ ಕೆಲವು ಘಟನೆಗಳನ್ನು ಹಿಂದೆ ಹೇಳಿದ್ದಳು ನಿಜ. ಆದರೆ ಸರಸಮ್ಮನ. ಬಾಯಿಂದಲೇ ಎಲ್ಲವನ್ನೂ ಕೇಳುವುದು ಆಕೆಯ ಪಾಲಿನ ಪರಮ ಭಾಗ್ಯವಾಗಿತ್ತು.

ಸರಸಮ್ಮ ಸುಮ್ಮನಾದುದನ್ನು ಕಂಡು, ಕತೆಗಳು ಮುಗಿದುವೇನೋ ಎನಿಸಿತು ತುಂಗಮ್ಮನಿಗೆ,

ಹಾಗಾಗಬಾರದೆಂದು ಆಕೆಯೊಂದು ಪ್ರಶ್ನೆ ಕೇಳಿದಳು :

“ಒಮ್ಮೆ ಹುಡುಗೀರೆಲ್ಲ ಓಡಿಹೋಗೋಕೆ ಪ್ರಯತ್ನ ಪಟ್ಟಿದ್ರಂತೆ ಹೌದೆ?"

“ಹೂಂ ಕಣೆ. ಜಲಜ ಹೇಳಿದ್ಳೆ?"

“ಹೂಂ ದೊಡ್ಡಮ್ಮ. ಆಕೆ ಬರೋಕ್ಕುಂಚೆಯೊ, ಬಂದ ಶುರುವಿ ನಲ್ಲೋ ಏನೊ--"

“ಹಾದು, ಹೌದು..."

ಸರಸಮ್ಮ ಆ ಘಟನೆಯನ್ನು ಸ್ಮರಿಸಿಕೊಂಡು ನಕ್ಕರು. ಅದನ್ನು ಹೇಳುವ ಇಚ್ಛೆಯಾಯಿತು ಅವರಿಗೆ.

“ಒಂದು ದಿವಸ--"

ಒಂದು ದಿವಸ ಸರಸಮ್ಮ ಆಡಳಿತ ಸಮಿತಿಯ ಸಭೆಗೆ ಹೋಗಿದ್ದರು. ಆಗ ಹಾಗೆ ಹೋದಾಗ ಹೊರಗಿನಿಂದ ಬೀಗ ತೆಗಲಿಸಬೇಕಾಗುತಿತ್ತು. ಹಿಂತಿರುಗುವಾಗ ಕತ್ತಲಾಗುತಿತ್ತು.

ಅದೆಲ್ಲನನ್ನೂ ಚೆನ್ನಾಗಿ ತಿಳಿದಿದ್ದ ಕೆಲವು ಹುಡುಗಿಯರು ಬಲು ಗುಪ್ತವಾಗಿ ಒಳಸಂಚು ನಡೆಸಿದರು. ಹಿಂತಿರುಗಿದ ಸರಸಮ್ಮ ಬಾಗಿಲು ತೆರೆದೊಡನೆ ಅವರ ಕಣ್ಣಿಗೆ ಮೆಣಸಿನ ಕಾಯಿಪುಡಿ ಎರಚಬೇಕು; ಅವರು ಬೊಬ್ಬಿಡದಂತೆ ಬಾಯಿಗೆ ಬಟ್ಟೆಯ ಚಿಂದಿ ತುರುಕಬೇಕು; ಕೊಠಡಿಗೆ ತಳ್ಳಿ ಬಾಗಿಲೆಳೆದುಕೊಂಡು ತಾವೆಲ್ಲ ಹೊರ ಬೀಳಬೇಕು!