ಪುಟ:Abhaya.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೨೩

ಕೆಟ್ಟವರು ಒಳ್ಳೆಯವರಾಗಿದ್ದರು....

ಹಾಗಾಗುವುದು ಸಾಧ್ಯವಿತ್ತು...

ಹಾಗಾಯಿತೆಂದು ತಿಳಿದು ಸಂತೋಷಪಡುತ್ತ ತುಂಗಮ್ಮ ಮುಗುಳು ನಕ್ಕಳು.

"ಹುಡುಗೀರಲ್ಲಿ ಒಬ್ಬಳ ಪರಿಚಯವಂತೂ ನಿಂಗೆ ಚೆನ್ನಾಗೇ ಇದೆ."

ತುಂಗಮ್ಮನ ಹುಬ್ಬುಗಳು ಅಶ್ಚರ್ಯದಿಂದ ಮೇಲಕ್ಕೆ ಹೋದುವು.

“ಯಾರು ದೊಡ್ಡಮ್ಮ ?"

“ನೀನೇ ಹೇಳು ನೋಡೋಣ ”

ತುಂಗಮ್ಮ ಯೋಚಿಸಿದಳು; ಯಾನ ಹೆಸರೂ ಹೊಳೆಯಲಿಲ್ಲ.

“ಯಾರೋ!"

“ಸಾವಿತ್ರಿ ಕಣೇ."

"ಓ! ನಿಜವಾಗ್ಲೂ!”

“ಹೂಂ."

ತಮ್ಮ ದೊಡ್ಡಮ್ಮನನ್ನು ಅಂಧೆಯಾಗಿ ಮಾಡಿ ಒಂದು ಕಾಲದಲ್ಲಿ ಓಡಿಹೋಗಬಯಸಿದ ಹುಡುಗಿ ಸಾವಿತ್ರಿ, ಈ ದಿನ ಅದೇ ದೊಡ್ಡಮ್ಮನ ಮೆಚ್ಚುಗೆಗೆ ಪಾತ್ರಳಾದವರಲ್ಲಿ ಒಬ್ಬಳು...

ಮಾತು ನಿಂತು ಕೊಠಡಿಯಲ್ಲಿ ಮೌನ ನೆಲೆಸಿತು.

ಈಗ ತನ್ನ ಪ್ರವೇಶವಾಗಲೆಂದು, ಬೇಸಗೆಯ ಕಾರಿರುಳನ್ನು ಭೇದಿಸಿ ಕೊಂಡು ತಣ್ಣನೆಯ ಗಾಳಿಯೊಂದು ಸದ್ದಿಲ್ಲದೆ ಸುಳಿದು ಹೋಯಿತು.

ಮ್ಭೆ ಕೈ ಮುರಿದು ಬಾಯಿ ಆಕಳಿಸಿದರು ಸರಸಮ್ಮ

ಮೆಲ್ಲನೆ ಹುಟ್ಟಿ, ನೂರು ಜೀವಗಳನ್ನು ಒಳಗೊಂಡು ರೂಪು ತಳೆದು, ವಿಸ್ತಾರವಾಗಿ ಬೆಳೆದಿದ್ದ ಅಭಯಧಾಮದ ಇತಿಹಾಸ...

ಅದರ ಗುಂಗಿನಲ್ಲೇ ಇನ್ನೂ ಇದ್ದಳು ತುಂಗಮ್ಮ.

“ಹೊತ್ತಾಯ್ತು. ಮಲಗೋಣ ಇನ್ನು. ಮಾತನಾಡಿ ಮುಗಿಯೋ ಕತೆಯೇ ಇದಲ್ಲ.”

ಹೌದೆಂದು ತಲೆಯಾಡಿಸಿ ತುಂಗಮ್ಮ ಎದ್ದಳು

ಎದ್ದು ನಿಂತವಳು ಕಿಟಿಕಿಯಿಂದ ಹೊರನೋಡಿದಳು. ದೂರದ