ಪುಟ:Abhaya.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೨೭ “ಮೊದಲು ಇಲ್ಲಿಗೆ ಬಂದ ದಿವಸ ನಂಗೂ ಹಾಗೇ ಆಗಿತ್ತು ಕಣೇ. ಹಾಗೆ ಆಗೋದು ಸ್ವಾಭಾವಿಕ ”

"ಏನೋ ದೊಡ್ಡಮ್ಮ, ಹುಡುಗೀರು ಗಲಾಟೆ ಮಾಡಿದ್ರೆ--?”

"ಹುಚ್ಚಿ, ಅವರೇನೂ ಮಾಡೋಲ್ಲ ಯಾವ ಯೊಚ್ನೇನೂ ಮಾಡದೆ ಸುಮ್ಮಿರು ಚೆನ್ನಾಗಿಯೇ ಪಾಠ ಹೇಳ್ತಿಯಾ ನೀನು - ನಂಗೊತ್ತು.”

" ಅದೇನು ಹೇಳ್ತಿನೊ !”

ಯಾಕೆ ತುಂಗ ? ಉಪಾಧ್ಯಾಯರ ಮಗಳಲ್ವೇನೆ ನೀನು ?”

ಮತ್ತೆ ತಂದೆಯ ನೆನವು ಅವರ ಮೂವತ್ತು ವರ್ಷಗಳ ಅಧ್ಯಾಪಕ ಜೀವನದಲ್ಲಿ ನೂರುಗಟ್ಟಲೆಯಾಗಿ ಅದೆಷ್ಟೊಂದು ಹುಡುಗರು ಓನಾಮ ಕಲಿತಿರಲಿಲ್ಲ; ಎಷ್ಟೊಂದು ಜನ ವಿದ್ಯಾವಂತರಾಗಿರಲಿಲ್ಲ. ಪದವೀಧರರಾಗಿರ ಲಿಲ್ಲ! ತಾನಾದರೋ ಏನೂ ತಿಳಿಯದ ಹುಡುಗರಿಗೆ ಅಕ್ಷರಜ್ಞಾನ ಮಾಡಿಸಿದ ರಾಯಿತು ಅಷ್ಟಕ್ಕೇ ಹೀಗೆ ಅಳುಕಿದರೆ !

ಸರಸಮ್ಮನ ಮಾತಿನಿಂದ ಧೈರ್ಯಗೊಂಡ ತುಂಗಮ್ಮ ಹಸನ್ಮುಖಿ ಯಾದಳು

....ಆದಿನ ಅಭಯಧಾಮಕ್ಕೆ ಬಂದಾಗ ಅಧ್ಯಾಪಿಕೆ ರಾಜಮ್ಮನವರಿಗೆ ಸಮಿತಿಯ ತೀರ್ಮಾನದ ವಿಷಯ ತಿಳಿಯಿತು. ತನ್ನ ಕೆಲಸ ಕಡಿಮೆಯಾಗು ತ್ತದೆಂದು ಅವರಿಗೆ ಸಂತೋಷವಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ.

" ಶುಭಸಮಾಚಾರ !” --ಎಂದು ಅವರು ಹೇಳಿದರೂ ಮುಖ ಗಂಟಿಕ್ಕದಿರಲಿಲ್ಲ.

ಅದನ್ನು ಲಲಿತೆಗೆ ತೋರಿಸುತ್ತ ಜಲಜ ಅಂದಳು :

" ಹುಂ! ನೋಡಿದ್ಯಾ ? ಹ್ಯಾಗೆ ಮಾಡ್ತಿದಾಳೆ ಆ ಟೀಚ ! ನಮ್ಮ ತುಂಗಕ್ಕ ಇನ್ನೂ ಒಂದಿಷ್ಟು ಇಂಗ್ಲಿಷು ಕಲೀಲಿ - ಒಂದೆರಡು ವರ್ಷ ಹೋಗ್ಲಿ. ಆಮೇಲೆ ಏನಾದರೂ ಮಾಡಿ ಆ ಮಡ್ಡಮ್ಮನ್ನ ಓಡಿಸೋಕು ಲಲಿತಾ.

ಲಲಿತೆಗೆ ಜಲಜೆಯ ವಿಚಾರ ಪೂರ್ಣ ಒಪ್ಪಿಗೆಯಾಗಿತ್ತು.

ಅಂತೂ ರಾಜಮ್ಮನ ಸಹಾಯದಿಂದ ಸರಸಮ್ಮ ಹುಡುಗಿಯರನ್ನು ಎರಡು ತರಗತಿಗಳಾಗಿ ವಿಂಗಡಿಸಿದರು. ಸಂಖ್ಯೆ ಸಮ - ಸಮವೆನಿಸಿದರೂ ರಾಜಮ್ಮನ ತರಗತಿ ವಿಸ್ತಾರವಾದ ಹಜಾರದಲ್ಲೇ ನಡೆಯಿತು. ತುಂಗಮ್ಮ