ಪುಟ:Abhaya.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೨೯

ಆ ಬಳಿಕ ತರಗತಿಯ ಆರಂಭ.

ಗೋಡೆಗೆ ಒರಗಿಸಿದ್ದ ಮರದ ಕರಿಹಲಗೆಯ ಮೇಲೆ ಸುಣ್ಣದ ಕಡ್ಡಿ ಯಲ್ಲಿ ಸರಸಮ್ಮನ ನಿರ್ದೇಶದಂತೆ ತುಂಗಮ್ಮ ಬರೆದಳು : ' ಓಂ ಶ್ರೀ ಗಣಪತಾಯೆ ನಮಃ '

ಆ ಬಳಿಕ ಅಕ್ಷರಮಾಲೆ ಒಂದೊಂದಾಗಿ.

ಹುಡುಗಿಯರೂ ಹಿಂದೆ ಎಷ್ಟೋ ಸಾರೆ ಬರೆದಿದ್ದುದನ್ನೇ ಸ್ಟೇಟಿನಮೇಲೆ ಒಂದೊಂದಾಗಿ ಬರೆದು ಕೊಂಡರು - ತಪ್ಪಾಗಿಯೂ ಸರಿಯಾಗಿಯೂ. ಆ ಬಳಿಕ ತಿದ್ದುವ ಕೆಲಸ...

ನೋಡುತ್ತಲೇ ನಿಂತಿದ್ದರು ಸರಸಮ್ಮ. ತುಂಗಮ್ಮನ ದಕ್ಷತೆಯ ವಿಷಯದಲ್ಲಿ ಅವರಿಗೆ ಯಾವ ಸಂದೇಹವೂ ಇರಲಿಲ್ಲ.

ಅಭಯಧಾಮದಿಂದ ಏನುಪ್ರಯೋಜನವಾಗಿದೆ ? ಯಾರಾದರೂ ಕೇಳಲಿ ಇನ್ನು ಆ ಪ್ರಶ್ನೆಯನ್ನು ! ಸರಸಮ್ಮ ಆಗ ಎದೆಯುಬ್ಬಿಸಿ ತುಂಗಮ್ಮ ನನ್ನ ಬೊಟ್ಟು ಮಾಡಿ ಹೇಳುವರು :

" ನೋಡಿದಿರಾ ? ಈ ಕೆ - ಇ ವ ರು - ತುಂಗಮ್ಮ ಅಂತ. ನನ್ನ ಸಹಾಯಿಕೆ. ಒಂದು ಕಾಲದಲ್ಲಿ ಅಭಯ ಯಾಚಿಸಿ ಇಲ್ಲಿಗೆ ಬಂದಿದ್ದರು !"

ಹಾಗೆ ಯೋಚಿಸುತ್ತಲಿದ್ದ ಸರಸಮ್ಮ ತರಗತಿಯತ್ತ ಗಮನ ಕೊಡು ವುದನ್ನೇ ಮರೆತರು. ನಿಂತಲ್ಲಿಂದ ಚಲಿಸಿ ಆಕೆ ತಮ್ಮ ಕೊಠಡಿಯತ್ತ ಬ೦ದರು....

....ಅಭಯಧಾಮದ ಆಡಳಿತ ಸಮಿತಿಗೆ ಹೊಸ ಕಾರ್ಯದರ್ಶಿನಿಯ ಆಯ್ಕೆಯಾದ ಮೇಲೆ, ಸರಸಮ್ಮನ ಹಳೆಯ ಆಸೆಗಳು ಮತ್ತೊಮ್ಮೆ ಚೇತರಿಸಿ ಕೊಂಡಿದ್ದುವು. ಹಣವ ನ್ನಾ ದ ರೊ ಸ ಮಾ ಜ ದ ಹ ಲ ವಾ ರು ದಾನಶೀಲರಿಂದ ಕೇಳಿ ಬೇಡಿಕಾಡಿ ಪಡೆಯುವುದು ಸಾಧ್ಯವಿತ್ತು. ಆದರೆ ಜನಸಂಪತ್ತು, ನಂಬುಗೆಯ ಪ್ರಾಮಾಣಿಕರಾದ ಉತ್ಸಾಹಿ ಕಾರ್ಯಕರ್ತರ ಸಂಪತ್ತು, ಅವರಿಗಿರಲಿಲ್ಲ. ಆದುದರಿಂದ ಚೇತರಿಸಿಕೊಂಡಿದ್ದ ಆಸೆ ಗಳನ್ನೂ ಅದುಮಿ ಹಿಡಿಯದೆ ಅನ್ಯಗತಿ ಇರಲಿಲ್ಲ.

ಈಗ ಮತ್ತೆ ಆಸೆಗಳು ತಲೆ ಎತ್ತಿದುವು.

ಅಭಯಧಾಮದ ಚಟುವಟಿಕೆಗಳನ್ನು ವಿಸ್ತರಿಸಬೇಕು. ಬಟ್ಟೆಗೆ ಬಣ್ಣ