ಪುಟ:Abhaya.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೦

ಅಭಯ

ಹಾಕುವ, ಸೀರೆಗಳಮೇಲೆ ಚಿತ್ತಾರ ಒತ್ತುವ, ಉದ್ಯೋಗ ಆರಂಭಿಸಬೇಕು.
ಕೆಲವು ಹುಡುಗಿಯರಿಗಾದರೂ ನಿರ್ದಿಷ್ಟವಾದ ಹೆಚ್ಚಿನ ವಿದ್ಯಾಭ್ಯಾಸ
ದೊರೆಯುವಂತೆ ಮಾಡಬೇಕು ಆದಷ್ಟು ಬೇಗನೆ ತಮ್ಮ ಅಭಯಧಾಮ
ದಿಂದ ಒಬ್ಬಳು ಹುಡುಗಿಯರಿಗಾದರೂ ಎಸ್. ಎಸ್. ಎಲ್ ಸಿ ಪರೀಕ್ಷೆ ಕಟ್ಟ
ಬೇಕು. ತಮ್ಮ ನಿರ್ದೇಶನದ ಕೆಳಗೆ, ಅಭಯಧಾಮದ ಹುಡುಗಿಯೊಬ್ಬಳು
ವಿಶ್ವವಿದ್ಯಾನಿಲಯದ ವದವೀಧರಳೂ ಆಗುವಂತಾದರೆ !
ಅಷ್ಟು, ಮುಂದಿನ ಕನಸಾದರೆ, ಇಂದೇ ನೆನಸಾಗಬೇಕಾದ ಬೇರೊಂದು
ವಿಷಯವಿತ್ತು ಅಭಯಧಾಮದ ಆಶ್ರಯದಲ್ಲಿ ಹೆರಿಗೆಯಾದಾಗಲೆಲ್ಲ,
ಮಕ್ಕಳನ್ನು ಯಾವಾಗಲೂ ಅನಾಥಾಲಯಕ್ಕೆ ಕಳುಹುವುದು ನಡೆದು
ಬಂದಿದ್ದ ಪದ್ಧತಿ. ಹಾಗೆ ಮಕ್ಕಳನ್ನು ಕೊಟ್ಟಾಗಲೆಲ್ಲ ಸರಸಮ್ಮನಿಗೆ ತಡೆಯ
ಲಾಗದ ಸಂಕಟವಾಗುತಿತ್ತು. ಅದರ ಬದಲು, ಅಭಯಧಾಮಕ್ಕೆ ಸಂಬಂಧಿ
ಸಿದ ಬಾಲ ಆಶ್ರಮವೊಂದಿದ್ದರೆ? ಅಷ್ಟಲ್ಲದೆ, ಬೀದಿಯಲ್ಲಿ 'ದೇವಾರ್ಸಿ'
ಗಳಾಗಿ ಅಲೆಯುವ ಎಳೆಯ ಹುಡುಗರನ್ನು ಸುಧಾರಿಸುವುದಕ್ಕೂ ಅದು
ಸಹಾಯಕವಾಗುವುದು ಅಭಯಧಾಮದ ಸುತ್ತಲೂ ಇದ್ದ ಖಾಲಿ ಜಾಗದಲ್ಲಿ
ಇನ್ನೊಂದು ಪುಟ್ಟ ಕಟ್ಟಡವನ್ನೂ ಕಟ್ಟಿಸುವುದು ಆಗದ ಮಾತೇನೂ ಅಲ್ಲ ...
ಅದಕ್ಕಿಂತಲೂ ಪ್ರಕೃತಕ್ಕೆ ಮುಖ್ಯವೆಂದರೆ, ಕಟ್ಟಡದ ಸುತ್ತಲೂ
ನಡೆಸಬೇಕಾದ ತರಕಾರಿ ಕೃಷಿ ಈಗಿರುವ ಕಿರುಗೋಡೆಯ ಮೇಲೆ
ಎತ್ತರದ ಮುಳ್ಳು ಬೇಲಿಯನ್ನು ಏರಿಸಿದರೆ, ಅಂತಹ ಬೆಳೆಸಾಧ್ಯ. ಅದರಿಂದ,
ಅಭಯಧಾಮದ ಈಗಿನ ಖರ್ಚು ಉಳಿಯುವುದಷ್ಟೇ ಅಲ್ಲ, ತರಕಾರಿಯ
ಮಾರಾಟದಿಂದ ಸಂಪಾದನೆಯೂ ಆಗುವುದು ...
-ಅದನ್ನೆಲ್ಲ ಸರಸಮ್ಮ ಮನಸಿನಲ್ಲಿ ಮೆಲುಕು ಹಾಕುತಿದ್ದಾಗಲೆ,
ಪಕ್ಕದ ಕಿಟಕಿಯ ಎಡೆಯಿಂದ ಸ್ವರ ಕೇಳಿಸಿತು :
"ಪೋಸ್ಟ್ !”
ಅದರ ಜತೆಯಲ್ಲಿ ತೆಳ್ಳಗಿನ ಲಕೋಟೆ ಕೊಠಡಿಯೊಳಕ್ಕೆ ಬಿದ್ದ ಸದ್ದು.
ಬಂದುದೊಂದೇ ಲಕೋಟಿ ಸರಸಮ್ಮನೆದ್ದು ಅದನ್ನೆತ್ತಿಕೊಂಡರು.
ತಪ್ಪು ತಪ್ಪು ಇಂಗ್ಲಿಷಿನಲ್ಲಿ ಅವರ ಹೆಸರನ್ನೆ ಮೇಲೆ ಬರೆದಿದ್ದರು. ಅಂಚೆ
ಚೀಟಿಯ ಮೇಲೆ ಸಿಟಿ ಪೋಸ್ಟ್ ಆಫೀಸಿನ ಮುದ್ರೆ ಇತ್ತು.