ಪುಟ:Abhaya.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ಅಭಯ

ದೊಡ್ಡ ಸಾಹೇಬರ ಕಚೇರಿಯಲ್ಲಿ ಜವಾನನಾಗಿರುವವನಿಗೆ ಅಂತಹ
ಅವಮಾನವೆಂದರೆ !

ಸಾಹೇಬರ ಮುಂದೆಯೂ ರಾಣಿಸಾಹೇಬರ ಮುಂದೆಯೂ ಮಹಾಬಲ
ತನ್ನ ಗೋಳು ತೋಡಿಕೊಂಡು ಗೋಗರೆದ

" ಎಂಗಾದ್ರೂ ಮಾಡಿ ಒಂದು ಎಣ್ಣು ಕೊಡ್ಸಿ”

-ಎಂದು ರಾಣಿ ಸಾಹೇಬರ ಮುಂದೆ ಪ್ರತ್ಯೇಕವಾಗಿ ವಿನಂತಿಮಾಡಿದ.
ಆ ಸಾಯಂಕಾಲ ರಾಣಿ ಸಾಹೇಬರು 'ಸಮಾಜ' ದಲ್ಲಿ ನೆರೆದಿದ್ದ ಸ್ನೇಹಿತೆ
ಯರ ಮುಂದೆ ತಮ್ಮ ಜವಾನನ ಕತೆ ಹೇಳಿದರು. ಎಲ್ಲರೂ ಬಿದ್ದು ಬಿದ್ದು
ನಕ್ಕಿದ್ದೂ ನಕ್ಕಿದ್ದೇ.

ಆದರೂ ಒಬ್ಬ ಚದುರೆಗೆ ಒಂದು ಯೋಚನೆ ಹೊಳೆದು, “ಐ ಸೇ"
ಎಂದರು.

ಹುಬ್ಬುಗಳೇ ಪ್ರಶ್ನಾರ್ಥಕ ಚಿಹ್ನೆಗಳಾಗಿ ಉತ್ತರದ ಹಾದಿ ನೋಡಿದರು
ಸುತ್ತು ಮುತ್ತಲಿದ್ದವರು.

" ಈ ಜವಾನನಿಗೆ ನಾವು ಸಹಾಯ ಮಾಡ್ಲೇಬೇಕು ಇದು ನಮ್ಮ
ಅಭಿಮಾನದ ಪ್ರಶ್ನೆ ಏನಂತೀರ ?”

" ಯಾರ ಮಗಳ್ನ ನೋಡಿ ಇಟ್ಟಿದ್ದೀರಿ ?”

" ನಮ್ಮ ಕಮಲನ್ನಿಗೆ ಹೇಳೋಣ. ಸಾರ್ವಜನಿಕಸೇವೆ ಅಂತ
ಸಮಾಜಕ್ಕೆ ಬರೋದನ್ನೂ ಬಿಟ್ಬಿಟ್ಟಿದಾರಲ್ಲ ಅವರ ಅಭಯಧಾಮದಿಂದ
ಒಂದು ಹುಡುಗೀನಾದರೂ ಕೊಡಿಸ್ಲಿ ಏನಂತೀರ ?”
ಆ ಯೋಚನೆ ಸರಿಯಾಗಿಯೇ ತೋರಿತು ಎಲ್ಲರಿಗೂ.

"ಆ ಅಭಯಧಾಮದಲ್ಲಿ ಹಾಗಾಗುವುದೂ ಉಂಟಂತೆ ಈಗಾಗ್ಲೇ
ಎಷ್ಟೋ ಮದುವೆಗಳೂ ಆಗಿವೆಯಂತಲ್ಲ"

" ಹೌದು. ಹೌದು.”

ಆದರೆ ಒಬ್ಬರಿಗೆ ಮಾತ್ರ ಒಂದೇ ಸಂದೇಹವಿತ್ತು.

" ಈ ಹುಡುಗೀರೆಲ್ಲ ಪರಿಶುದ್ಧವಾಗಿರ್‍ತಾರಾ ? ಇಸ್ಸಿ !"

ಶುದ್ಧಾಶುದ್ಧತೆಯ ಪ್ರಶ್ನೆ ಬಂದಾಗ ಯಾವಾಗಲೂ ರೇಗಾಡುತ್ತಿದ್ದವ
ರೊಬ್ಬರು ಸ್ವರವೇರಿಸಿ ಕೇಳಿದರು: