ಪುಟ:Abhaya.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೪ ಅಭಯ

" ಈ ಸಲ ಸುಮ್ಮನೆ ನೋಡಿಕೊಂಡು ಹೋಗಿ, ಹುಡುಗಿಯರೂ ನಿಮ್ಮನ್ನ ನೋಡಲಿ.” " ಎಂದಿದ್ದರು ಸರನಮ್ಮ ತನ್ನ ಅಭಿಮಾನಕ್ಕೆ ಧಕ್ಕೆ ತಗಲಿದಂತಾಗಿ ಆತ ಕೇಳಿದ್ದ :

" ಹುಡುಗೀರು ನನ್ನ ನೋಡೋದಂದ್ರೇನಮ್ಮ? ನಾನು ನೋಡಿ ಮೆಚ್ಕೊಂಡ್ರೆ ಸಾಲ್ದಾ ?"

ಸರಸಮ್ಮನಿಗೆ ನಗು ಬಂದಿತ್ತು. ಅಂತೂ ಉಪಾಯವಾಗಿ ಆದಿನ ಅವನನ್ನು ಬೀಳ್ಕೊಟ್ಟಿದ್ದರು.

ಮತ್ತೆ ಈಗ ಈ ಕಾಗದ.

ಒಮ್ಮೆ ಅಂಟಿಕೊಂಡಮೇಲೆ ಅವನು ಬಿಟ್ಟು ಬಿಡುವ ಲಕ್ಷಣ ತೋರಲಿಲ್ಲ. ಆದಿನ ಆತ ಬಂದು ಹೋದ ಬಳಿಕ ಆ ಭೇಟಿಯ ಉದ್ದೇಶ ತಿಳಿದಾಗ, ಸಾಮಾನ್ಯವಾಗಿ ಎಲ್ಲ ಹುಡುಗಿಯರೂ ಅವನನ್ನು ಕುರಿತು ಗೇಲಿ ಮಾಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು ಆದರೆ ಒಬ್ಬಳು-ಕನಕಲಕ್ಷಮ್ಮ- ಇತರರಷ್ಟು ನಗದೆ ಮೌನವಾಗಿಯೇ ಇದ್ದಳೆನ್ನಬೇಕು. ಅದನ್ನು ಗಮನಿಸಿದ ಹುಡುಗಿಯರು, ಕನಕಲಕ್ಷಮ್ಮನನ್ನು ನಗೆಚಾಟಿಯಿಂದ ಹೊಡೆದು ಬಡೆದು, ಆಕೆಯನ್ನೆ ಜವಾನ ಮಹಾಬಲನ ಹೆಂಡತಿಯಾಗಿ ಘೋಷಿಸಿದ್ದರು.

ತನಗೆ ಅವಮಾನವಾಯಿತೆಂದು ಎಲ್ಲರೆದುರು ಆಗ ಕನಕಲಕ್ಷಮ್ಮ ಅತ್ತಿದ್ದಳು.

ಆದರೆ ಅವಳ ದೃಷ್ಟಿಗೆ ಮಹಾಬಲ ಚೆನ್ನಾಗಿಯೇ ಕಂಡಿದ್ದ. ಆತ ತನ್ನ ಗಂಡನೆಂದು ಹುಡುಗಿಯರು ಗೇಲಿ ಮಾಡಿದುದು ಹಿತಕರವಾಗಿಯೂ ಅವಳಿಗೆ ತೋರಿತ್ತು.

ಸರಸಮ್ಮನ ಸೂಕ್ಷ್ಮದೃಷ್ಟಿಗೆ ಆ ಹುಡುಗಿಯ ಪರಿಸ್ಥಿತಿ ಗೋಚರ ವಾಗದೆ ಹೋಗಿರಲಿಲ್ಲ.

ತಮ್ಮನ್ನೆ ನಂಬಿದ್ದ ಮಹಾಬಲನ ಕೈ ಬಿಡಲು ಸರಸಮ್ಮನಿಗೆ ಇಷ್ಟ ವಾಗಲಿಲ್ಲ ! ಮದುವೆ ಕೂಡಿಸಿಕೊಡುವುದೆಂದರೆ ಯಾರಿಗೆ ತಾನೆ ಸಂತೋಷ ವಾಗದೆ ಇದ್ದೀತು ? ಅದರಲ್ಲೂ ಅಭಯಧಾಮದ ಒಬ್ಬಳು ಹುಡುಗಿಗೇ