ಪುಟ:Abhaya.pdf/೨೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಹಾದಿಯ ಪರಿಚಯವನ್ನು ಕೇಳಿ ಮಂದಟ್ಟು ಮಾಡಿಕೊಂಡಿದ್ದಳು ತುಂಗಮ್ಮ.

ಆರು ತಿಂಗಳ ಹಿಂದೆ ತುಮಕೂರಲ್ಲೆ ಆ ಮಾತು ಬಂದಿತ್ತು. ತಾಯಿ

ತಂದೆಯರು ಗುಸಗುಸ ಆಡಿಕೊಂಡುದ್ದನ್ನು ಕದ್ದು ಕೇಳಿದ್ದಳು ಆ ಮಗಳು.ಅಲ್ಲಾಗಲೀ ಇಲ್ಲಾಗಲೀ ಬಾಯ್ತೆರೆದು ಯಾರೂ ಆ ಪ್ರಸ್ತಾಪ ಮಾಡಿರಲಿಲ್ಲ. ಹಾಗೆ ಪ್ರಸ್ತಾಪಿಸಲು, ಅದು ಗೌರವದ ಪ್ರಶ್ನೆಯಾಗಿತ್ತಲ್ಲವೆ?

ಆದರೆ ತುಂಗಮ್ಮನಿಗೆ ಆ ವಿಷಯ ತಿಳಿದು ಹೋಗಿತ್ತು. ಆ ಕಾರಣ

ದಿಂದಲೆ, ಪ್ರಯಾಸ ಪಟ್ಟು ಆಕೆ, ಅಷ್ಟಕ್ಕಿಷ್ಟು ಕೂಡಿಸಿ ಮಾಹಿತಿ ಸಂಗ್ರಹಿಸಿದಳು. ಆ ಮಾಹಿತಿಯ ಆಧಾರದ ಮೇಲೆ ಇನ್ನು-

ತುಂಗಮ್ಮ ತಡವರಿಸಿದಳು.

ತಾನು ಮುಂದೆ ಸಾಗಬೇಕೆ ಬೇಡವೆ? ಸರಿಯೆ ತಾನು ಮಾಡು

ತ್ತಿರುವುದು?

ಆಕೆ ನಿಂತಲ್ಲಿಯೆ ಸ್ವಲ್ಪ ಬಾಗಿ, ಕೈಯಲ್ಲಿದ್ದ ಖಾಲಿ ಬಾಟಲಿಯನ್ನು

ನೆಲದ ಮೇಲಿರಿಸಿದಳು ತನಗೆ ಅನಗತ್ಯವಾಗಿದ್ದ ಅದನ್ನು ಎಸೆಯಲು ಮನಸಾಗಲಿಲ್ಲ. ಎಸೆದಿದ್ದರೆ ಬಾಟಲಿ ಒಡೆಯುತ್ತಿತ್ತು. ಗಾಜು ಒಡೆದು ಚೂರಾಗುವುದನ್ನು ಸಹಿಸಲು ತುಂಗಮ್ಮ ಸಿದ್ಧಳಿರಲಿಲ್ಲ.

ಯಾವುದಕ್ಕೂ ನೋವಾಗ ಬಾರದು,ಏನೂ ಒಡೆಯ ಬಾರದು

,

ಎಂಬುದು ಬಾಲ್ಯದಿಂದಲೆ ಆಕೆ ಬೆಳೆಸಿಕೊಂಡು ಬಂದಿದ್ದ ಮನೋಭಾವನೆ.

ಆದರೆ ಸ್ವತಃ ಆಕೆಗೇ ನೋವಾಗಿತ್ತು; ಆ ಹೃದಯ ಒಡೆದಿತ್ತು.....

ಎರಡು ಜೀವಗಳನ್ನು ಹೊತ್ತ ಕಾಲುಗಳು ಮುಂದೆ ನಡೆದುವು.

ಜಯನಗರದ ಹತ್ತಿಪ್ಪತ್ತು ಮನೆಗಳನ್ನು ಅಲ್ಲೆ ಬಿಟ್ಟು ಕೊರಕಲು ಹಾದಿಯೊಂದು ಏರಿ ಇಳಿಯುತ್ತ ಕಾಣದ ಗುರಿಯೆಡೆಗೆ ಸಾಗಿತ್ತು. ತುಂಗಮ್ಮ ಆ ಹಾದಿ ಹಿಡಿದಳು.

...ದೂರದ ಅಂತರದಲ್ಲಿ ಎತ್ತರದಲ್ಲಿ ವಿದ್ಯುದ್ದೀಪಗಳು ಮಿನುಗಿ

ದುವು. ಅದು, ಏರಿಳಿಯುತ್ತ ಬೀದಿಯುದ್ದಕ್ಕೂ ನಕ್ಷತ್ರ ತೋರಣ.ಆದರೆ ತುಂಗಮ್ಮ, ಆ ಅಂದವನ್ನು ನಿರೀಕ್ಷಿಸಿ ಮೆಚ್ಚಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಸಂಜೆ ಮನೆ ಬಿಟ್ಟಾಗ ಅಂದುಕೊಂಡಿದ್ದಳಾಕೆ: "ಒಮ್ಮೆ ಕತ್ತಲಾ