ವಿಷಯಕ್ಕೆ ಹೋಗು

ಪುಟ:Abhaya.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೩೫

ವರ ದೊರಕಿಸುವುದೆಂದರೆ, ಅವರಿಗೆ ಹೆಚ್ಚು ಸಂತೋಷವಾಗಲೇ ಬೇಕಲ್ಲವೆ ? ಆ ಸಂಜೆ ಸರಸಮ್ಮ ಕನಕಲಕ್ಷಮ್ಮನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿದರು :

“ಆದಿನ ಬಂದಿದ್ರಲ್ಲಿ, ಮಹಾಬಲ ಅಂತ ನೆನಪಿದ್ಯಾ?" ಆಕೆಗೆ ನೆನಪಿತ್ತು ಆದರೆ ಹಾಗೆಂದು ಒಪ್ಪಿಕೊಳ್ಳಲು ಅವಳಿಗೆ ನಾಚಿಕೆ ಯಾಯಿತು.

ಯಾರು, ಯಾವಾಗ, ದೊಡ್ಡಮ್ಮ?” ? " ಓ--ಮರೆತೇ ಹೋಯ್ತೇನೆ ? ಅಷ್ಟು ಬೇಗ ? ಹುಂ ........ ಹೋದ ಡಿಸೆಂಬರ್‌ನಲ್ಲಿ ಬಂದಿರ್‍ಲಿಲ್ವೆ ಒಬ್ರು-ಇನ್‍ಕಂಟ್ಯಾಕ್ಸ್ ಕಚೇರಿ ಯವರು ?”

ಕನಕಲಕ್ಷಮ್ಮನ ಮುಖ ಲಜ್ಜೆಯಿ೦ದ ಕೆಂಪಗಾಯಿತು. "ಹೂಂ."

" ನಾಡಿದ್ದು ತಿರ್‍ಗಾ ಬರ್‍ತಾರಂತೆ ” ಅದಕ್ಕೆ ?-ಎಂದು ಪ್ರಶ್ನಿಸುವ ಅರ್ಧದಲ್ಲಿ ಕನಕಲಕ್ಷಮ್ಮ ಸರಸಮ್ಮನ ಮುಖ ನೋಡಿದಳು

" ಏನು ಉತ್ತರ ಕೊಡೋಣ ?”

ತನ್ನನ್ನು ಯಾಕೆ ಕೇಳಿತಿದ್ದಾರೆಂದು ಕನಕಲಕ್ಷಮ್ಮನಿಗೆ ಆಶ್ಚರ್ಯ ನಾದರೂ ತನ್ನನ್ನು ಒಬ್ಬಳನ್ನೇ ಕೇಳುತ್ತಿರುವರಲ್ಲಾ ಎಂಬ ಸಮಾಧಾನವೂ ಆಯಿತು.

ಸರಸಮ್ಮ ಮೃದುವಾಗಿ ಆಕೆಯ ಭುಜಮುಟ್ಟಿ ಒರಗು ಬೆಂಚಿನ ಮೇಲೆ ಕುಳ್ಳಿರಿಸಿದರು.

ಆದಾಯ ತೆರಿಗೆ ಕಚೇರಿಯವರು ಎಂದಿದ್ದರು ಸರಸಮ್ಮ- ಜವಾನ, ಎಂದಿರಲಿಲ್ಲ. ಆದರೂ ಮಹಾಬಲನ ನಿಜವಾದ ಉದ್ಯೋಗವೇನೆಂಬುದು ಕನಕಲಕ್ಷಮ್ಮನಿಗೆ ತಿಳಿದಿತ್ತು.

ಜಾತಿಯ ತೊಂದರೆ ಇರಲಿಲ್ಲ. ಒಂದೇ ಜಾತಿಯವರಾಗಿದ್ದರು ಅವ ರಿಬ್ಬರೂ. ಯಾವುದರಲ್ಲಿ ಏನುಕಡಿಮೆ ಮಹಾಬಲನಿಗೆ ? ತಕ್ಕಷ್ಟು