ಪುಟ:Abhaya.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೬ ಅಭಯ

ವಿದ್ಯಾವಂತ, ಸಂಪಾದನೆಯೂ ತಕ್ಕಮಟ್ಟಿಗಿದೆ. ಏನೋ ವಿರಸವಾಗಿ ಮೊದಲ ಹೆಂಡತಿ ಹೊರಟುಹೋದಳು. ಅವಳಿಗೆ ಭಾಗ್ಯವಿರಲಿಲ್ಲ ಈಗ ... -ಹೀಗೆ ಬಲು ನಿಧಾನವಾಗಿ ಸರನಮ್ಮ ವಿವರಿಸಿದರು.

ಎರಡು ವರ್ಷಗಳಿಗೆ ಹಿಂದೆ ಕಾಹಿಲೆಯ ಜೀವಿಯಾಗಿಯೆ ಕನಕ ಲಕ್ಷಮ್ಮ ಅಭಯಧಾಮಕ್ಕೆ ಬಂದಿದ್ದಳು. ಅರಸೀಕೆರೆಯವಳು. ಛಿದ್ರವಾ ದೊಂದು ರೈತ ಕುಟುಂಬಕ್ಕೆ ಸೇರಿದಾಕೆ. ಬಾಲ್ಯದಲ್ಲಿ ಆಕೆಗೆ ಮದುವೆ ಯಾಗಿತ್ತು ಯಾವುದೋ ಸಣ್ಣ ಜಗಳ ದೊಡ್ಡದಾಗಿ ಮಾವನ ಮನೆಯವರ ಮನಸ್ಸು ಕಹಿಯಾಯಿತು. ಸೊಸೆಯನ್ನು ಅವರು ಕರೆಸಿಕೊಳ್ಳಲೇ ಇಲ್ಲ. ಹಾಗೆ ಹಿರಿಯರಿಗಾಗಿ ತನ್ನನ್ನು ಬಿಟ್ಟ ಆಗಂಡನಿಗೆ ಬೇರೊಂದು ಮದುವೆಯೂ ಆಗಿಹೋಯಿತು. ಕನಕಲಕ್ಷಮ್ಮ ತನ್ನ ಮನೆ ಬಿಟ್ಟು ಹೋದಳು. ಬೆಂಗಳೂರು ನಗರದಲ್ಲಿ ಕೂಲಿನಾಲಿ ಮಾಡಿ ಜೀವನ.... ಅಲ್ಲಿ ಆಕೆ ತುಳಿಯ ಬೇಕಾಗಿ ಬಂದ ದಾರಿ....ಬೇರೆ ಜನ ಅದನ್ನು 'ಅಡ್ಡದಾರಿ' ಎಂದು ಕರೆದಿದ್ದರು.

....ಸಂಕಟಪಡುತಿದ್ದ ಆಕೆಗೆ ಯಾರೋ ಅಭಯಧಾಮದತ್ತ ಬೊಟ್ಟು ಮಾಡಿದ್ದರು. ತನ್ನ ಪರಿಚಿತರು ಯಾರೂ ಇಂಥದೇ ಎಂದು ಹೇಳಲಾಗದ ಹುಣ್ಣುಗಳೊಡನೆ ಆಕೆ ಅಲ್ಲಿಗೆ ಬಂದಿದ್ದಳು

ಸರಸಮ್ಮ ಪೂರ್ಣ ಲಕ್ಷ್ಯದಿಂದ ಚಿಕಿತ್ಸೆಯ ಏರ್ಪಾಟು ಮಾಡಿದರು. ಆರೆಂಟು ತಿಂಗಳಲ್ಲಿ ಕನಕಲಕ್ಷಮ್ಮ ಪೂರ್ತಿ ಗುಣ ಹೊಂದಿದಳು....

....ಈಗ ಆಕೆಯ ಮುಂದಿದ್ದುದು - ಬಾಳ್ವೆಯ ಮಹಾದುರ್ಗದೊಂದು ತೆರೆದಿದ್ದ ಬಾಗಿಲು. ಒಳಹೋಗಲೆ? ಬೇಡವೆ? ಎಂದು ಶಂಕಿಸುತಿದ್ದಳಾಕೆ. ಸರಿಯಾದ ನಿರ್ಧಾರಕ್ಕೆ ಬರಲು ನೆರವಾಗುವಂತೆ ಮಾತನಾಡಿದರು ಸರಸಮ್ಮ:

"ನೋಡು ಮಗೂ, ಇದೀಗ ಪರಿಸ್ಥಿತಿ. ನನ್ನ ಕೇಳಿದರೆ ನೀನು ಒಪ್ಪಿಕೊಳ್ಳೋದು ವಾಸಿ. ಎಷ್ಟು ದಿನ ಅಂತ ಹೀಗೇ ಇರ್‍ತೀಯಾ ? ಯೋಚಿಸ್ನೋಡು.”