೨೩೯
"ಈಗ ಹೇಳ್ತೀರಾ ನನ್ನ ಪ್ರಶ್ನೆಗೆ ಉತ್ತರ ?”
"ಹೋಗ್ತಿಯೋ, ಇಲ್ಲ ಹಿಂಡ್ಬೇಕೋ ಕಿವಿ ?”
ದಮಯಂತಿ ನಗುತ್ತ ಓಡಿ ಹೋದಳು.
"ಸೆಕ್ರೆಟರಿಯವರ್‍ನ ಒಪ್ಪಿಸಿ ಬಂದಿದೀನಮ್ಮ, ನಾಳೆ ಬರ್‍ತಾನೆ ಆತ -
ಆ ಮಹಾಬಲ....ಅಂತೂ ಈ ಮದುವೆ ಸೀಸನ್ನಿನಲ್ಲಿ ನಮ್ಮದೂ ಒಂದು
ಮದುವೆ ಆಗುತ್ತೆ !”
---ಎಂದು ಸರನಮ್ಮ ತುಂಗಮ್ಮನೊಡನೆ ಅಂದರು
....ಅದಾದ ಮರುದಿನ ಆತ ಬಂದ ಆದಿನ ರಜಾವಡೆದೇ ಮಹಾಬಲ
ಹೊರಟಿದ್ದ ಹೆಣ್ಣು ನೋಡಲು, ತಲೆಯ ಮೇಲೆ ವಕ್ರವಕ್ರವಾಗಿ ಕ್ರಾಪು
ಬಿಡಿಸಿತ್ತು ಮಾಸಿದ ಖಾಕಿ ಪ್ಯಾಂಟು, ಬಿಳಿಯಷರಟು, ಯಾವುದೋ
ಕಾಲದ ಯಾರೂ ಸಾಹೇಬರ ಉಣ್ಣೆಯ ಕೋಟೊಂದು, ಕಾಲಿಗೆ
ಮೋಟಾರು ಟಯರಿನ ಚಪ್ಪಲಿ, ತನ್ನ ಬೆಪ್ಪುತನವನ್ನು ಮರೆಮಾಚಿ
ಸೊಗಸುಗಾರನಾಗಿಯೇ ಕಾಣಿಸಿ ಕೊಳ್ಳಲು ಆತ ಮನಃ ಪೂರ್ವಕವಾಗಿ
ಪ್ರಯತ್ನಿಸಿದ್ದ !
ಆತ ಬಂದೊಡನೆ ಅಲ್ಲಿ ನಗೆಯ ಕೋಲಾಹಲವೇ ಆಗ ಬೇಕಿತ್ತು.
ಆದರೆ ಗಲಾಟೆ ಮಾಡಕೂಡದು ! ಎಂದು ಮೊದಲೇ ಎಚ್ಚರಿಸಿದ್ದರು
ಸರಸಮ್ಮ, ಮೌನವಾಗಿದ್ದರೂ ಹಲವು ಹುಡುಗಿಯರು ಒಬ್ಬೊಬ್ಬರಾಗಿ
ಆಫೀಸು ಕೊಠಡಿಯ ಮುಂದೆ ಹಾದು ಹೋಗುತ್ತಿದ್ದರು ಹಾಗೆ ಕಳ್ಳ
ನೋಟದಿಂದ ಮಹಾಬಲವನ್ನು ನೋಡಿ ಬಂದು ಅಡುಗೆ ಮನೆಯಲ್ಲಿ ಅಡಗಿ
ನಿಂತಿದ್ದ ಕನಕಲಕ್ಷಮ್ಮನಿಗೆ ಬಣ್ಣಿಸುತ್ತಿದ್ದರು
ಯಾವಳಾದರು ಹುಡುಗಿ ಬಾಗಿಲಿನತ್ತ ಸುಳಿದರೆ ಸಾಕು, ಇರುವೆ
ಕಡಿದ ಹಾಗಾಗುತಿತ್ತು ಮಹಾಬಲನಿಗೆ
ಸರಸಮ್ಮನೊಡನೆ ಆತ ಕೇಳಿದ:
"ನನ್ನ ಕಾಗ ತಮಗೆ ತಲಪಿರ್‍ಬೇಕು."
“ ಹೌದು. ಮೊನ್ನೇನೆ ಬಂತು"
"ತಾವು- ಏನಾದ್ರೂ---....."
ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಆ ಮನುಷ್ಯ.