ಪುಟ:Abhaya.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೦ ಅಭಯ

" ಏನಾದ್ರೂ ಮಾಡೋಣ ಆದರೆ ಯಾವಾಗ ಮದ್ವೆ ಮಾಡೋ ಬೇಕೂ೦ತಿದೀರಿ ನೀವು ?” ಈಗ್ಲೇ - ಈ ಸೀಸನ್‌ನಲ್ಲೇ !

"ಓ!"

"ಮದ್ವೆ ಸೀಜನ್ ಷುರುವಾದಾಗ್ನಿಂದ ನಂಗೆ ಇದೇ ಯೋಚ್ನೆ ಅತ್ಕೊಂಬಿಟ್ಟಿತ್ತು ನಮ್ಮ ಓಣೀಲೆ ಒಂದು ಮದ್ವೆ ಆಗೋಯ್ತು !”

"ಸರಿ, ಸರಿ...."

ಅಷ್ಟು ಮಾತನಾಡಿ ಮತ್ತೆ ಮೌನ ತಳೆದ ಭೂಪತಿ.

ಸರಸಮ್ಮನ ನಿರ್ದೇಶದಂತೆ ಕನಕಲಕ್ಷಮ್ಮ, ಅಭಯಧಾಮಕ್ಕೆ ಬಂದ ಅತಿಥಿಗಾಗಿ ಒಂದು ಲೋಟ ಕಾಫಿ ಎತ್ತಿಕೊಂಡು ಬಂದಳು. ತಲೆ ಸ್ವಲ್ಪ ಬಾಗಿತ್ತು. ಆದರೂ ಮಹಾಬಲನಮೇಲೆಯೇ ನೆಟ್ಟಿತ್ತು ದೃಷ್ಟಿ.

ಕಪ್ಪಗಿತ್ತು ಕಾಫಿ, ಆದರೆ ಕನಕಲಕ್ಷಮ್ಮ ಅದಕ್ಕಿಂತ ಬಿಳಿಯಾಗಿದ್ದಳು. ಕಾಫಿಯ ಲೋಟವನ್ನು ಕನಕಲಕ್ಷಮ್ಮ ದೊಡ್ಡಮ್ಮನ ಮೇಜಿನ ಮೇಲಿಟ್ಟಳು.

" ಕಾಫಿ ತಗೊಳ್ಳಿ ” ಎಂದರು ಸರಸಮ್ಮ, ಹಾಗೆಯೇ ಕನಕನತ್ತತಿರುಗಿ ಅಂದರು. “ ಹೋಗೋಡ, ಇಲ್ಲೇ ಇರು ಕನಕಲಕ್ಷಮ್ಮ....”

ಕನಕಲಕ್ಷಮ್ಮ ಎಂದ ಹೆಸರನ್ನು ಮನಸ್ಸಿನಲ್ಲಿ ತೊದಲುತ್ತ ಮಹಾಬಲ ಕಾಫಿಯ ಲೋಟವನ್ನೆತ್ತಿಕೊಂಡು, ಆ ಕರಿಯ ದ್ರಾವಕವನ್ನು ಗುಟುಕು ಗುಟುಕಾಗಿ ಸದ್ದು ಮಾಡುತ್ತ ಹೀರಿದ.

ಹ್ಯಾಗಿದೆ ?” -ಎಂದರು ದೊಡ್ಡಮ್ಮ, ಹುಡುಗಿಯ ವಿಷಯ ಕೇಳಿದರೋ ಏನೆಂಬುದು ತಿಳಿಯದೆ ಮಹಾಬಲ ತಬ್ಬಿಬ್ಬಾದ.

"ಕಾಫಿ ಹ್ಯಾಗಿದೇರಿ ?” ಚೆನ್ನಾಗಿದೆ.” " ಹುಡುಗಿ ಹ್ಯಾಗಿದಾಳೆ ?” " ಹುಂ ?"