ಪುಟ:Abhaya.pdf/೨೪೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೪೧ " ಇವಳೇ - ಕನಕಲಕ್ಷಮ್ಮ - ಸರಿಯಾಗಿ ನೋಡಿ....ನೀನೂ ನೋಡು ಮಗೂ.”

ಕನಕಲಕ್ಷಮ್ಮ ಮಹಾಬಲ ಇಬ್ಬರ ಮುಖಗಳೂ ಲಜ್ಜೆಯಿಂದ ಕೆಂಪ ಗಾದುವು.

ಸರಸಮ್ಮ, ಕನಕನ ವಿಷಯವಾಗಿ ಚುಟುಕು ಪರಿಚಯಮಾಡಿ ಕೊಟ್ಟರು ಅವರು ಸುಳ್ಳೇನನ್ನೂ ಹೇಳಲಿಲ್ಲ. ಆದರೆ ಮಾತು ಆಗಿನ ಪರಿಸ್ಥಿತಿಯಲ್ಲಿ ಆಭಾಸವಾಗಿ ತೋರದಂತೆ ಎಚ್ಚರ ವಹಿಸಿದ್ದರು.

ಮಹಾಬಲ ಕದ್ದು ಕದ್ದು ಕನಕಲಕ್ಷಮ್ಮನನ್ನು ನೋಡಿದ. ಅಲ್ಲಿ ನಿಂತಿದ್ದ ಜೀವ ತನ್ನ ಪಾಲಿನದಾಗುವುದೆಂದು ಆತ ಮೈಮರೆತ.

ಒಬ್ಬಳು ಹುಡುಗಿ ಅಭಯಧಾಮಕ್ಕೆ ಬಂದಾಗ, ಹಸುರು ಕೆಂಪು ಚಿತ್ತಾರಗಳನ್ನು ಬರೆದಿದ್ದ ವಾಯಿಲ್ ಸೀರೆಯನ್ನುಟ್ಟಿದ್ದಳು ಅದನ್ನು ಈದಿನ 'ವಧು'ವಿಗೆ ಉಡಿಸಲಾಗಿತ್ತು. ಓರಣವಾಗಿ ತಲೆಬಾಚಿ ಹೆರಳು ಹಾಕಿದ್ದರು. ಹೆರಳಿನ ಮುಡಿಯಮೇಲೆ ಅದೇ ಉದ್ಯಾನದ ಹೂಗಳ ಕಿರೀಟವಿತ್ತು. ಮುಖಕ್ಕೆ ಪೌಡರನ್ನು ಒಂದಿಷ್ಟು ಹೆಚ್ಚಾಗಿಯೇ ಬಳೆದಿದ್ದರು.

ಮುಖ್ಯವಾಗಿ, ಯೌವನದ ಅಂಗ ಸೌಷ್ಟವ ಶೃಂಗಾರದ ನೆರವಿಗೆ ನಿಂತು, ಮಹಾಬಲನ ಮೇಲೆ ಮೋಹದ ಬಲೆ ಬೀಸಿತು " ಇವಳು ನಿಮಗೆ ಒಪ್ಪಿಗೆಯೇನಪ್ಪ ?”

"ನೀವು ಹೇಗಂತೀರೋ ಹಾಗೆ."

"- ಅದೆಂಥಾಮಾತು ! ಸ್ಪಷ್ಟವಾಗಿ ಹೇಳಿ ಇಷ್ಟು ಕೂಡಾ ಉತ್ತರ ಕೊಡೋಕೆ ಆಗ್ಲೆ ಇರೋರು ಯಾಕ್ಬರ್‍ತೀರ ಇಲ್ಲಿ ?”

ತನ್ನನ್ನೆಲ್ಲಿ ಹೊರಟು ಹೋಗಲು ಹೇಳುವರೋ ಎಂದು ಮಹಾಬಲನಿಗೆ ಅಳುಕಿತು. " ಒಪ್ಪಿಗೆ " --ಎಂದು ಆತ ಅವಸರದಲ್ಲೇ ಹೇಳಿದ. " ಸರಿ ಹಾಗಾದರೆ, ಮದುವೆದಿನ ಗೊತ್ಮಾಡಿ.” " ಆಗ್ಲೆ ಮಾಡಿದೀನಿ ! ಮೇಲಿನ ಗುರುವಾರ ಒಳ್ಳೆಲಗ್ನ ಇದೆ.” " ಮದುವೆ ಏರ್ಪಾಟು ಎಲ್ಲಿ ಮಾಡ್ಬೇಕೂಂತಿದೀರಾ ?” 16