ಪುಟ:Abhaya.pdf/೨೪೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

" ಬಳ್ಳಾಪುರದ ಹತ್ತಿರ ಘಾಟಿ ಸುಬ್ರಹ್ಮಣ್ಯ ಇದೇ ನೋಡಿ, ಅಲ್ಲಿ”

" ಮದುವೆಖರ್ಚು ನೀವು ನೋಡ್ಕೋ ಬೇಕು ”

" ಅಂಧ ಖರ್ಚೆನೂ ಇಲ್ಲಾ ಅಂಬ್ರ ಅಮ್ಮಾವ್ರು!”

“ ಖರ್ಚು ಅಂದರೆ ಚಿಲ್ಲರೆ ಖರ್ಚು.ವಧೂ ಜತೇಲಿ ನಾನೂ ಇನ್ನೊಬ್ಬರೂ ಬಲ್ತಿವಿ ನಮಗೆ ರೈಲು-ಬಸ್ಸು ಚಾರ್ಜು ಕೋಷ್ಟೇಕೋ ಬೇಡ್ವೋ? "

“ ಅದನ್ನ ಕೊಡದೆ ಉಂಟೆ? "

" ನಮ್ಮದು ಬಡವರ ಮನೆ. ನಿಮಗೆ ಗೊತ್ತೆ ಇದೆ. ಆದರೂ ವಧೂನ ಹೀಗೆಯೇ ಕಳಿಸೋದಾಗುತ್ತಾ ?"

ಸರಸಮ್ಮನಿಗೆ ರೇಗಿತು.

"ಇಲ್ಲ - ಸರಿ! ಆದರೆ ಅದಕ್ಕೆ ಏನಾಡ್ಬೇಕೂಂತ ಹೇಳಿ”

" ನೀವೇ ಹೇಳಿ.”

" ಸರೊನ್ದಿಯು! ಕೇಳಿ ಹಾಗಾದರೆ ವಧೂಗೆ ಒಳ್ಳೆ ಸೀರೆ ರವಕೆ ಕಣ ಒಂದಿಷ್ಟು ವಸ್ತು ಒಡವೆ ಕೊಂಡ್ಕೊಡಿ"

"ಅಗಲಿ ಮಾಡ್ತೀನಿ."

ಮಹಾಬಲನಿಗೆ ಒಮ್ಮೆಲೆ, ತನ್ನನ್ನು ಬಿಟ್ಟ ತವರುಮನೆಗೆ ಓಡಿಹೋದ.

ಹೆಂಡತಿಯ ನನಪಾಗಿ ಮೈಯುರಿದು ಹೋಯಿತು! ಹಿಂದೆ ಆಕೆಯೇ ತಂದದ್ದು, ತಾನು ಆ ಮೇಲೆ ಮಾಡಿಸಿದ್ದು, ಎಲ್ಲವನ್ನೂ ಹೊತ್ತುಕೊಂಡೇ ಅವಳು ಓಡಿಹೋಗಿದ್ದಳು.

ಆ ವಿಷಯವನ್ನು ಇಲ್ಲಿ ಹೇಳಬೇಕೆನಿಸಿತು ಮಹಾಬಲನಿಗೆ. ಆದರೆ, ಸರಸಮ್ಮ ಏನೆನ್ನುವರೋ ಎಂಬ ಅಂಜಿಕೆಯಿಂದ ಅವನು ಸುಮ್ಮನಾದ.

"ಇನ್ನೂ ಒಂದು ವಿಷಯ ಇದೆ ."

" ಹು೦. ?”

" ಇಷ್ಟ ಕಾಲ ಅಭಯಧಾಮ ಕನಕನಿಗೆ ತಾಯ್ಯನೆಯಾಗಿತ್ತು. ಇನ್ನು ಮೇಲೆ ಎಲ್ಲಾ ಜವಾಬಾರೀನೂ ನಿಮ್ಗೆ”

" ಹೌದು."