ಪುಟ:Abhaya.pdf/೨೫೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ತಂದೆಯ ಉತ್ತರ ತಂಗಮ್ಮನ ಕೈಸೇರಲು ಸ್ವಲ್ಪ ತಡವಾಯಿತು. ಅದಕ್ಕೆ ಕಾರಣ, ತಂದೆ ತುಮಕೂರು ಬಿಡುವ ಗಡಿಬಿಡಿಯಲ್ಲಿದ್ದುದು. ಆದರೆ, ಬೆಳಗಾಂವಿ ಸೇರಿದಮೇಲೆ ಅವರು ತಡಮಾಡಲಿಲ್ಲ.

ಈಗ ತುಂಗಮ್ಮನ ಪ್ರಕರಣ, ಅವರೊಬ್ಬರ ಹೃದಯದೊಳಗೆ ಬಚ್ಚಿಟ್ಟದ ರಹಸ್ಯವಾಗಿರಲಿಲ್ಲ ದೊಡ್ಡ ಮಗಳಿಗೆ ಅದನ್ನು ಹೇಳಿಯಾಗಿತ್ತು. ಅಳಿಯನಿಗೂ ಕೂಡಾ ಪುಟ್ಟಿ ತಮ್ಮನೂ ಅಷ್ಟಿಷ್ಟು ಊಹಿಸಿಕೊಂಡಿದ್ದ. ಅವನಿಗೂ ತಿಳಿದಿತ್ತು -ಆಗಬಾರದ್ದು ಏನೋ ಆಗಿದೆ ಎಂದು ಅಳಿದು ದೇವರಿಗೆ ತುಸು ಅಸಮಾಧಾನವೆನಿಸಿತು. ಆದರೆ ಯಾರೂ ತುಂಗಮ್ಮನನ್ನು ಜರೆಯಲಿಲ್ಲ,ನಿಂದಿಸಲಿಲ್ಲ.ಬೇರೆ ಎಲ್ಲ ಭಾವನೆಗಳನ್ನೂ ವಾತ್ಸಲ್ಯ-ಮರುಕ ಗೆದ್ದಿದ್ದುವು.ಅಷ್ಟು ಸಾಧ್ಯವಾಗಲು ಕಾರಣ, ತುಂಗಮ್ಮನ ಆಗಿನ ಇರುವಿಕೆ, ಆಕೆ ಆರಂಭಿಸಿದ್ದ ಬದುಕಿನ ಹೊಸ ಅಧಾಯ.

ಹತ್ತಿರದಲ್ಲೆ ಕುಳಿತು ಮೈದಡವಿ ಮಾತನಾಡುವಂತೆ ಅವರು ಅದೆಲ್ಲ ವನ್ನೂ ಬರೆದಿದ್ದರು.

“...ನನಗೆ ಗೊತ್ತಿದೆ ಮಗೂ.. ಬೇರೆ ಯಾರಾದರೂ ಆಗಿದ್ದರೆ ಏನೇನೋ ಆಗುತಿತ್ತು .ಆದದ್ದು ಆಗಿ ಹೋಯಿತು. ಇನ್ನು ಆ ವಿಷಯ ಚಿಂತಿಸ ಬಾರದು.. ತುಮಕೂರಿನ ನೀರಿನ ಋಣವೂ ಮುಗಿದ ಹಾಗಾಯಿತು. ಪುಟ್ಟೂನ ಇಲ್ಲೇ ಹೈಸ್ಕೂಲಿಗೆ ಸೇರಿಸ್ತೀನಿ. ನಿನ್ನ ಈಗಿನ ವಿಷಯ ತಿಳಿದು ಸಮಾಧಾನವೆನಿಸಿತು. ಶ್ರೀಮತಿ ಸರಸಮ್ಮನವರನ್ನು ನಾನು ಎಷ್ಟು ಕೊಂಡಾಡಿದರೂ ಸಾಲದು. ಅವರು ನಮ್ಮ ಪಾಲಿನ ದೇವರಾಗಿ ಬಂದರು. ಅವರು ದೊಡ್ಡಮ್ಮ ಎಂತಲೇ ತಿಳಿದುಕೊಂಡು, ಅವರಿಗೆ ವಿಧೇಯಳಾಗಿ ವರ್ತಿಸಿ ಪ್ರೀತಿ ಸಂಪಾದಿಸಿಕೋ."