ಪುಟ:Abhaya.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೬

ಅಭಯ

ತುಂಗಮ್ಮ ಅದೆಷ್ಟೋ ಬಾರಿ ಆ ಕಾಗದವನ್ನೋದಿದಳು
ತನ್ನ ದೊಡ್ಡಮ್ಮನಬಳಿಗೆ ಒಯ್ದು ತುಂಗಮ್ಮ ಅದನ್ನು ತೋರಿಸಿದಳು:
"ನಮ್ಮಣ್ಣ ಕಾಗದ ಬರೆದಿದಾರೆ. ಓದಿ ನೋಡಿ ದೊಡ್ಡಮ್ಮ"
ಮುಖಬಾಗಿಸಿ, ಕನ್ನಡಕ ಮತ್ತು ಹುಬ್ಬುಗಳೆಡೆಯಿಂದ ತುಂಗಮ್ಮ
ನನ್ನು ನೋಡಿ, ಮತ್ತೆ ತಲೆಯೆತ್ತಿ ಕತ್ತನ್ನು ಹಿಂದಕ್ಕೆ ಸರಿಸಿ ಸರಸಮ್ಮ
ನೆಂದರು:
"ನಿನಗೆ ಬಂದಿರೋ ಕಾಗದ ನಾನ್ಯಾಕೆ ಓದ್ಲೆ?"
ದೊಡ್ಡಮ್ಮನ ನಗೆಯಮಾತಿಗೆ ನಗುತ್ತಲೆ ತುಂಗಮ್ಮ ಉತ್ತರ
ವಿತ್ತಳು:
"ಓ! ಇದೊಂದು ಹೊಸದು ಇಷ್ಟು ದಿವಸ ಓದ್ತಿರ್ಲಿಲ್ವೇನೊ?"
"ಆ ದಿವಸ ಬೇರೆ. ಈಗಿನದು ಬೇರೆ"
"ಹೂಂ ಗೊತ್ತು ಓದ್ನೋಡಿ ದಮ್ಮಯ್ಯ"
ತುಂಗಮ್ಮನನ್ನು ತಮ್ಮ ಹಾಸಿಗೆಯ ಮೇಲೆ ಕೂತಿರ ಹೇಳಿ, ಸರಸಮ್ಮ
ಆ ಕಾಗದವನ್ನೋದಿದರು. ಅವರ ತಂದೆಯಿಂದ ಎಂದೂ ಅಂತಹಕಾಗದ
ಅವರಿಗೆ ಬಂದಿರಲಿಲ್ಲ ಬಾಲ್ಯದಲ್ಲಿ ಅವರಿಗೆ ಯಾರೂ ಅಷ್ಟು ಪ್ರೀತಿಯಿಂದ
ಬರೆದಿರಲಿಲ್ಲ....ನಿವೃತ್ತ ಉಪಾಧ್ಯಾರ ಕೈಬರಹ ಅಕ್ಷರಗಳು ಏಕ
ಪ್ರಕಾರವಾಗಿದ್ದುವು ಅವು ಮುದ್ದಾಗಿರಲಿಲ್ಲ ಆದರೆ ಬರೆದಿದ್ದ ವಿಷಯ
ಮುದ್ದು ಮುದ್ದಾಗಿತ್ತು...ಒಂದು ಕಾಗದದಲ್ಲೆ ಅಷ್ಟೊಂದು ಒಲುಮೆ
ನಲುಮೆಗಳನ್ನು ತುಂಬುವುದು ಸಾಧ್ಯ ಅಲ್ಲವೆ?
ಓದುತಿದ್ದ ಸರಸಮ್ಮ ಹೃದಯದಲ್ಲಿ ಮೃದುಭಾವನೆಗಳ ಘರ್ಷಣೆ
ನಡೆದುದರ ಫಲವಾಗಿ ಕಣ್ಣುಗಳು ಮಂಜಾದುವು ಕನ್ನಡಕ ಗಾಜಿಗೆ
ಯಾರೋ ನೀರಿನ ಹನಿ ಸಿಂಪಡಿಸಿದಂತಾಯಿತು.
ಓದಿ ಮುಗಿದಾಗ ಅವರು ಮಾತನಾಡಲಿಲ್ಲ. ಮಾತೃವಾತ್ಸಲ್ಯದಿಂದ
ತುಂಗಮ್ಮನನ್ನು ನೋಡಿ ನಕ್ಕರು
ತುಂಗಮ್ಮನೂ, 'ಕಾಗದ ಹೇಗಿದೆ?' ಎಂದು ಕೇಳಲಿಲ್ಲ ತನ್ನ
ಅಮೂಲ್ಯ ಆಸ್ತಿ ಎಂಬಂತೆ ಅದನ್ನು ಮಡಚಿ, ಬೆರಳುಗಳ ಎಡೆಯಲ್ಲಿ ಮೃದು
ವಾಗಿ ಹಿಡಿದು, ಕುಳಿತಲ್ಲಿಂದ ಎದ್ದಳು.