ಆ ಪ್ರಶ್ನೆಯನ್ನು ಕೇಳಬಾರದಾಗಿತ್ತೇನೋ ಅನಿಸಿತು ತುಂಗಮ್ಮನಿಗೆ.ಆದರೆ ವಾಸ್ತವವಾಗಿ ದೊಡ್ಡಮ್ಮನಿಗೇ ಅದು ತಿಳಿದಿರಲಿಲ್ಲ.
"ನಂಗೊತ್ತಿಲ್ಲ ಕಣೆ. ಅವರಾಗಿ ಹೇಳ್ಲಿಲ್ಲ. ನಾನು ಕೇಳ್ಲಿಲ್ಲ "
"ಕೊಠಡಿ ಖಾಲಿ ಮಾಡಿಸ್ಲಾ?"
"ಹೌದು; ಆಲ್ಲಿಂದ ಆ ತಂಬೂರಿ - ತಬಲ ಬೇರೇನೇನು ಸಾಮಾನು ಇದೆಯೊ ಅದನ್ನೆಲ್ಲಾ ಇಲ್ಲಿಗೆ ತಂದ್ಬಿಡಿ"
"ಆಗಲಿ ದೊಡ್ಡಮ್ಮ .ಹೆರಿಗೆ ಇಲ್ಲೇ ಆಗುತ್ತೋ?"
"ಹೌದುಮತ್ತೆ !ಆಸ್ಪತ್ರೆಗೆ ಕಳುಹಿಸೋಹಾಗೆ ಇಲ್ಲ ತುಂಗ "
"ಹಾಸಿಗೆ -"
ಆಮೇಲೆ ನೋಡೋಣ ಬಹಳಮಾಡಿ ಅದನ್ನೆಲ್ಲಾ ತಂದೆತರ್ತಾರೆ."
ತುಂಗಮ್ಮನ ಕುತೂಹಲ ಹೆಚ್ಚಿತು ತನ್ನ ಹಾಗೆಯೇ ದುರದೃಷ್ಟಶಾಲಿಯಾದ-ಆದರೆ ಶ್ರೀಮಂತಳಾದ -ಹುಡುಗಿಯನ್ನು ನೋಡಲು ಅವಳು ತವಕ ಗೊಂಡಳು ಕೊಠಡಿ ಸಿದ್ದನಾಗುತಿದ್ದುದನ್ನು ಕಂಡು ಜಲಜ ಕೇಳದಿರಲಿಲ್ಲ.
"ಏನಕ್ಕ ? ಏನ್ಸಮಾಚಾರ ?"
"ಆದರೇನು ಇರೋಕೆ ಬರ್ತಾರೊ ಆದ್ವಾ-"
ಜಲಜೆಯಧ್ವನಿಯಲ್ಲಿ ಸೂಕ್ಷ್ಮವಾಗಿ ತಿಳಿದುಕೊಳ್ಳುವ ಸಾಮರ್ಥ್ಯವಿತ್ತು.
"ಅದೇನೊ ನಂಗೊತ್ತಿಲ್ಲಮ್ಮ."
ತುಂಗಮ್ಮನ ಆ ಉತ್ತರವನ್ನು ನಿಜವೆಂದು ಭಾವಿಸಲು ಜಲಜೆಯ ಮನಸ್ಸು ಒಪ್ಪಲಿಲ್ಲ ಆದರೆ.ತುಂಗಮ್ಮ ತನ್ನಿಂದ ಏನನ್ನಾದರೂ ಮರೆಮಾಚುತ್ತಿರಬಹುದೆಂದು ಭಾವಿಸುದಕಕ್ಕಂತೂ ಅವಳು ಸಿದ್ದಳಿರಲ್ಲೇ ಇಲ್ಲ.
"ನಂಗೊತ್ತಕ್ಕಾ.ಹೇಳ್ತೀನಿ ಕೇಳು."
ತುಂಗಮ್ಮನಿಗೆ ಆಶ್ಚರ್ಯವಾಯ್ತು
"ಏನು?"