ಆ ಹುಡುಗಿಯನ್ನು ತಾಯಿ ಮತ್ತು ಅಣ್ಣನೊಡನೆ ಆ ಕೊಠಡಿಯಲ್ಲಿ ಬಿಟ್ಟು ಕಾರ್ಯರ್ಶಿನಿ ಆಫೀಸು ರೂಮಿಗೆ ಬಂದರು.
" ಹೆಸರು ಏನೂಂತ ಬರಕೊಳ್ಳೋಣ?”
–ಎ೦ದು ಕೇಳಿದರು ಸರಸಮ್ಮ.
"ಏನಾದರೊಂದು ಬರಕೊಂಡ್ಬಿಡೀಪ್ಪಾ. ಇದೊಳ್ಳೆ ಗೋಳು ! ಇದೊಳ್ಳೆ ಸಮಾಜಸೇವೆ! ಅಂತೂ ಬಾಡಿಗೆಮನೆ ಕೆಟ್ಟೋಯ್ತು ಈ ಅಭಯಧಾಮ."
ಎದುರಲ್ಲಿ ಅಷ್ಟೊಂದು ವಿನಯದಿಂದ ಅವರೊಡನೆ ವರ್ತಿಸುತಿದ್ದವರು, ಅವರಿಂದ ದೂರ ಉಳಿದಾಗ ಬೇಸರ ವ್ಯಕ್ತಪಡಿಸುತ್ತ ಮುಖ ಒರೆಸಿಕೊಂಡರು
ಸರನಮ್ಮನಿಗೂ ಅದು ತಿಳಿದಿತ್ತು, ಆದರೆ ಅದಕ್ಕೆಲ್ಲ ಒಪ್ಪದೆ ಬೇರೆ ಹಾದಿ ಇರಲಿಲ್ಲ, ಸಮಾಜದಲ್ಲಿನ ಪ್ರತಿಷ್ಠಿತರ ಹಣಸಹಾಯದ ಆಧಾರದ ಮೇಲೇಯೇ ಮುಖ್ಯವಾಗಿ ನಡೆದಿತ್ತು ಆ ಅಭಯಧಾಮ ಎಲ್ಲಾದರೂ ಒಂದೆಡೆ ಅಗೌರವವಾದರೂ ಸಾಕು,ಆಡಳಿತ ಸಮಿತಿ ಮುರಿದು ಮಣ್ಣುಪಾಲಾದ ಹಾಗೆಯೇ.
ಆ ಯುವಕ ಬಂದು ಹೇಳಿದ;
" ಇನ್ನು ಹೊರಡಬಹುದೇ ಅಂತ ಮಮ್ಮಿ ಕೇಳ್ತಾರೆ."
"ಕೊಠಡಿಯಲ್ಲಿ ಹುಡುಗಿ ತಾಯಿಯಮಡಿಲಲ್ಲಿ ಮುಖವಿಟ್ಟ ಅತ್ತಳು;
ಮಮ್ಮೀ!ಮಮ್ಮೀ!'
"ಅಳಬೇಡ ಮಗೂ...ಆದಷ್ಟು ಬೇಗನೆ ಮನೆಗೆ ಕರಕೊಂಡು ಹೋಗ್ತೀವಿ”
" ಹಿ..ಹಿ .. ದಿಗಿಲಾಗುತ್ತಮ್ಮ ...”
" ಇಲ್ಲಿರೋ ಜನರಿಗೆ ಹೇಳ್ತೀನಿ ನಿನಗೇನೂ ಕೊರತೆ ಆಗದ ಹಾಗೆ ನೋಡೋತಾರೆ."
ಹುಡುಗಿ ಅಳು ನಿಲ್ಲಿಸಿದಳು.
ಡ್ರೈವರ್, ಕಾರ್ಯದರ್ಶಿನಿ ಮತ್ತು ಆ ಯುವಕ ಹೊರಗೆ ಅಂಗಳಕ್ಕಿಳಿದ ಮೇಲೆ, ಹುಡುಗಿಯ ತಾಯಿಯೊಬ್ಬರೇ ಸರಸಮ್ಮನೆಡೆಗೆ ನಡೆದು ಬಂದರು.