ಪುಟ:Abhaya.pdf/೨೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ದಿಂದ ಆ ಅಭಯಧಾಮದ ಮುಖ್ಯಸ್ಥೆಯದು ಎಂಬುದು ಹುಡುಗಿಗೆ ಗೊತ್ತಾಹಗಿರಲಿಲ್ಲ ಹೀಗಾಗಿ,ಬಂದವರನ್ನು ಕಕ್ಕಾವಿಕ್ಕಿಯಾಗಿಯೆ ನೋಡುತ್ತ ಅವಳೆಂದಳು; "ವಾರ್ಡನ್ ಅವರನ್ನ ಸ್ವಲ್ಪ ಕರೀತೀರಾ?" "ಇಲ್ಲಿ ವಾರ್ಡನ್ ಇಲ್ಲ ಮೇಟ್ರನ್ ಅಂತಲೇ ಇರೋದು." "ನನಗೆ ಗೊತ್ತಿರ್ಲಿಲ್ಲ ಎಲ್ಲಿದಾರೆ ಮೇಟ್ರನ್ ?" "ನಾನೇ" ಓ ! so sorry ! ನಮಸ್ತೆ" ದಿರ್ಘಕಾಲದ ಅನುಭವದಿಂದ ರಕ್ತಗತವಾಗಿದ್ದ ಮೃದುತನದಿಂದಲೇ ಸರಸಮ್ಮ ಹೇಳಿದಳು; "ನಮಸ್ತೆ ಹೊಸಬರು ಯಾರಾದರು ಬಂದಾಗ ಅವರ ಹೆಸರು ಬರಕೊಳ್ಳೊ ಬೇಕು?" ವಯಸ್ಸಿನಲ್ಲಿ ತಮಗಿಂತ ಎಷ್ಟೆಷ್ಟೋ ಕಿರಿಯಳಾಗಿದ್ದ ಹುಡಿಗಿಯನ್ನು ಬಹುವಚನದಿಂದಲೆ ದೊಡ್ಡಮ್ಮ ಸಂಭೋಧಿಸಿದುದನ್ನು ಕಂಡಾಗ ತುಂಗಮ್ಮನಿಗೆ ಮತ್ತಷ್ಟು ಕೆಡುಕೆನಿಸಿತು ಉತ್ತರಿಸಲು ಆಕೆ ತಡವರಿಸಿದಳು. "ಮಮ್ಮಿ ಅಂದಿದ್ದರು...?" "ನೀವು ಹೇಳ್ಲೇ ಬೇಕಾದ್ದಿಲ್ಲ ಆದರೆ ಇಲ್ಲಿ ಯಾವುದಾದ್ರೂ ಒಂದು ಹೆಸರು ಬರ್ಕೋತೀವಿ. ನೋಡಿ,-ಪ್ರಭಾವತಿ, ಅಂತ ಆಗಬಹುದೊ?" ಇದು ತುಂಗಮ್ಮನಿಗೆ ಒಳ್ಳೆಯ ತಮಾಷೆಯಾಗಿ ತೋರಿತ. "ಹೂಂ...ಪ್ರಭಾ ಅಂತ ಸಾಕು." "ಆಗಲಿ ಪ್ರಭಾ..ನಾನಿರೋದು ಪಕ್ಕದ ಕೊಠಡೀಲೆ. ಏನಾದರೂ ಬೇಕಾದ್ರೆ ಬಂದು ಬಾಗಿಲು ತಟ್ಟ. ಬನ್ನಿ..ಬಚ್ಚಲು ಮನೆ ತೋರಿಸಿಕೊಡ್ತೀನಿ ಬೇರೇನಾದರೂ ಬೇಕೇ?"