ಪುಟ:Abhaya.pdf/೨೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಭಾಳನ್ನು ಪ್ರಭಾದೇವಿಯಾಗಿಮಾಡಿ ಜಾಣತನದಿಂದ ನಯವಾಗಿ ತುಂಗಮ್ಮ ಉತ್ತರವಿತ್ತುದನ್ನು ಕಂಡು ಸರಸಮ್ಮನಿಗೆ ಆನಂದವಾಯಿತು.

ಅದು ಅಭಯಧಾಮದಲ್ಲಿ ಕಲಿತ ಮೊದಲವಾಠ, ಪ್ರಭಾ ಬದಲಾಯಿ! ಸಿದಳು ನಿಜ, ಆದರೆ ಆ ಹುಡುಗಿಯರಲ್ಲಿ ಆಕೆ ಒಬ್ಬಳಾಗಲಿಲ್ಲ ಪಾಯಸ ದೂಟಕ್ಕೆ ಮುಂಚೆ "ಹುಡುಗೀರಾ” ಎಂದು ಸಂಬೋಧಿಸಿ ಸರಸಮ್ಮ ಭಾಷಣ ಮಾಡಲಿಲ್ಲ. ಇತರ ಹುಡುಗಿಯರ ವಂಗ್ರಿಯಲ್ಲಿ ಊಟಕ್ಕೆ ಕುಳಿತುಕೊಳ್ಳಲೇ ಇಲ್ಲ ಪ್ರಭಾ, ಅವಳ ಊಟ ಕೊಠಡಿಯಲ್ಲೇ ನಡೆಯಿತು. ಎಲ್ಲರ ದೃಷ್ಟಿಯಲ್ಲಿ ಆಕೆ ಅತಿಧಿಯಾದಳು. ಹೊಸ ತುಪ್ಪ, ವಿಶೇಷ ಉಪ್ಪಿನ ಕಾಯಿ ಮುತ್ತಿತರ ಸಾಮಗ್ರಿಗಳು ಹೊರಗಿನಿಂದಲೆ ಆಕೆಗೆ ಪೂರೈಕೆಯಾದುವು. ಅಗಸ ವಾರಕ್ಕೊಮ್ಮೆ ಬಟ್ಟೆ ಬರೆ ಒಗೆದು ತಂದ. 

ಇ೦ತಹ ತರತಮ ನೀತಿ ಸರಸಮ್ಮನಿಗೆ ಇಷ್ಟವಿರಲಿಲ್ಲ, ಆದರೂ ಅವರು ಸಮಿತಿಯ ಪ್ರಮುಖರ ನಿರ್ದೇಶಕ್ಕೆ ಇದಿರಾಗಿ ಮಾತನಾಡು ವಂತಿರಲಿಲ್ಲ.

ನಗರದ ಸುಪ್ರಸಿದ್ಧರಾದ ಡಾಕ್ಟರೊಬ್ಬೊರು ದಿನಬಿಟ್ಟು ದಿನಬಂದು ಪ್ರಭಾಳನ್ನು ನೋಡಿಕೊಂಡು ಹೋದರು.

ಜಾತಿಯ ಪ್ರೆಶ್ನೆಯಿಂದಾಗಿ ಆಕೆ ಬೇರೆಯಾಗಿಯೆ ಉಳಿದಿರಲಿಲ್ಲ. ಅಂತಹ ಭಾವನೆಗಳು ಅಲ್ಲಿ  ಕ್ಷಣಿಕವಾಗುತಿದ್ದುವು. 'ಕಾಲುಜಾರಿದ ತಾವೆಲ್ಲ ಒಂದೇ ಜಾತಿ - ಎನ್ನುವುದು ಅಭಯಧಾಮದ ಹುಡುಗಿಯರ ಧೋರಣೆ. ಆದರೆ ಪ್ರಭಾ, ವರ್ಗವ್ಯತ್ಯಾಸದಿಂದಾಗಿ ಬೇರೆಯಾಗಿದ್ದಳು. ಆಕೆ ಹುಟ್ಟಿದ ಬೆಳೆದ ವಾತಾವರಣವೆಲ್ಲ, ಆಕೆಯ ಓದು ಸಂಸಾರವೆಲ್ಲ, ಈ ಹುಡುಗಿಯರಿಗಿಂತ ಭಿನ್ನವಾಗಿತ್ತು.
ಮೊದಲು ಏಕಾಂತವನ್ನೇ ಬಯಸಿದಳು ಪ್ರಭಾ, ಆದರೆ ಕ್ರಮೇಣ ಅದು ಬೇಸರವಾಗಿ, ಒಬ್ಬಿಬ್ಬರು ಹುಡುಗಿಯರೊಡನೆ ಹೆಚ್ಚುಸಲಿಗೆಯಿಂದ ಇರತೊಡಗಿದಳು.

ಮಳೆ ಬಂದು ನಿಂತಿದ್ದ ಆ ಮುಂಜಾನೆ ತುಂಗಮ್ಮ ಮತ್ತು ಜಲಜ ಪ್ರಭಾಳ ಕೊಠಡಿಗೆ ಬಂದು ಬಾಗಿಲು ತಟ್ಟಿದರು. ಅಗಣಿ ಹಾಕಿರಲಿಲ್ಲ.