ಪುಟ:Abhaya.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

ಅಭಯಧಾಮದ ಮುಖವನ್ನೇ ಕಂಡಿರದ ಗಂಡಸೊಬ್ಬರು ಪ್ರಭಾಳ

ತಂದೆ - ಅಭಯಧಾಮದ ಬೆಳವಣಿಗೆಯ ವೆಚ್ಚಕಾಗಿ ಐದು ಸಾವಿರ ರೂಪಾಯಿಗಳಿಗೆ ಒ೦ದು ಚೆಕ್ ಕಳುಹಿಸಿಕೊಟ್ಟರು.

ಆ ವಿಷಯವನ್ನು ಕಾರ್ಯದರ್ಶಿನಿಯಿಂದ ಕೇಳಿ ತಿಳಿದ ಬಳಿಕ

ಸರಸಮ್ಮ ತುಂಗಮ್ಮನಿಗೆ ಹೇಳಿದರು.

"ನೋಡಿದಾ ತುಂಗ? ಹೀಗಿದೆ ಪ್ರಪಂಚ.”

“ಹೂಂ ದೊಡ್ಡಮ್ಮ.”

"ಈ ಹಣ ನಮಗೆ ಬೇಕೇ ಬೇಕು. ಬರೇ ಸರಕಾರದ ಒಂದಿಷ್ಟು

ದಾನದಿ೦ದಲೇ ಸಂಸ್ಥೆ ನಡೆಸೋದು ಸಾಧ್ಯವೆ.”

"ಆದರೆ ಅವಳು ಪ್ರಭಾ-”

"ಈಗ ಹೇಳ್ತೀನಿ ತುಂಗ. ಹುಡುಗರ ಜತೆ ಓಡಾಡೋದು ಅವಳಿಗೆ

ಆಟವಾಗಿತ್ತ೦ತೆ ಏನೂ ಆಗಬಾರದೆ೦ದು ಮು೦ಜಾಗ್ರತೆ ವಹಿಸಿಕೊ೦ಡಿದ್ಲು. ಆದರೂ ಹೀಗಾಯ್ತು. ಇ೦ಥವನೇ೦ತ ಹೇಳೋದಕ್ಕೂ ಅವಳ ಕೈಲಿ ಆಗ್ಲಿಲ್ವಂತೆ... ಇನ್ನು ಆ ಮಗು ಅನಾಥಾಶ್ರಮದು, ಅದರ ವಾಲಿ ಗೆ ತಂದೆಯೂ ಇಲ್ಲ ತಾಯಿಯೂ ಇಲ್ಲ. ಇನ್ನು ಆ ಪ್ರಭಾನೋ, ಆಕೆಯ ಮನಸ್ಸಿನಲ್ಲಿ ಪಶ್ಚಾತ್ತಾಪದ ಭಾವನೆ ಇದೇಂತ ಯಾವ ಆಧಾರದ ಮೇಲೆ ಹೇಳೋಣ?”

ಆ ಮಾತು ನಿಜವಾಗಿತ್ತು.

ಆ ಪ್ರಭಾ ತನ್ನ ಹಾಗೆ ಮೋಸಹೋಗಿರಲಿಲ್ಲ ಹಾಗಾದರೆ.

"ಶ್ರೀಮಂತರು ಎಲ್ಲ ಹುಡುಗೀರೂ ಹೀಗೆಯೇ ಇರ್ತಾರ ದೊಡ್ಡಮ್ಮ?”

"ಛೆ! ಛೆ! ಹಾಗಲ್ಲ ತುಂಗ, ಎಲ್ಲೋ ಕೆಲವರು ಹೀಗಿರಾರೆ ಅಷ್ಟೆ.

ಇವರು ಬದುಕೋ ರೀತಿಯೇ ಇ೦ಥಾದ್ದು . ಹಿ೦ದೆ ಇಲ್ಲಿ ಸುಲೋಚನಾ೦ತ ಒಬ್ಬಳಿದ್ಲು. ಶ್ರೀಮಂತರ ಹುಡುಗಿಯೇ... ಆದರೆ ಇಲ್ಲಿಗೆ ಬಂದ್ಮೇಲೆ ಹ್ಯಾಗೆ ಬದಲಾದ್ಲೂ೦ತ! ಎಲ್ಲರ ಜತೇಲಿ ಅನ್ಯೋನ್ಯವಾಗಿದ್ದು, ಎಲ್ಲರ ಪ್ರಿತಿಗೂ ಪಾತ್ರಳಾದ್ಲು, ಈಗ ನೋಡು, ಈ ಪ್ರಭಾ ಹೋದಾಗ ನಮ್ಮ ಹುಡುಗೀರಿಗೆ ಏನಾದರೂ ಬೇಸರವಾಯ್ತೆ? ಸುಲೋಚನಾ ಹೋದಾಗ ಹಾಗಲ್ಲ.... ಅವಳೂ