ಪುಟ:Abhaya.pdf/೨೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಷ್ಟೇ. ತನ್ನ ಮಗೂನ ಬಿಟ್ಟು ಹೋಗೋಕೆ ಒಪ್ಪಲೇ ಇಲ್ಲ. ಆದರೆ ಮನೆ ತನದ ಗೌರವದ ಪ್ರಶ್ನೆ. ಒತಾಯಮಾಡಿ ಕರ್ರ್ಕೊಂಡು ಹೋದ್ರು..." "ಹೌದು ದೊಡ್ಡಮ್ಮ. ಮನುಷ್ಯರು ಅಂದ್ಮೇಲೆ ಒಳ್ಳೆಯವರೂ ಇರತ್ತಾರೆ ಕೆಟ್ಟವರೂ ಇರತ್ತಾರೆ". "ನಿಜ.ಆದರೆ, ಕೆಟ್ಟವರು ಒಳ್ಳೆಯವರಾಗೋಕೆ ಪ್ರಯತ್ನಿಸ್ಬೇಕು.ಒಳ್ಳೆಯವರು ಕೆಟ್ಟವರಾಗದಹಾಗೆ ಎಚ್ಚರವಾಗಿರಬೇಕು. ಅಲ್ವಾ?" "ಹೂಂ ಹೌದು." ರಾತ್ರೆ ಮಲಗುವುದಕ್ಕೆ ಮುಂಚೆ ತುಂಗಮ್ಮ, ಪ್ರಭಾ ಎಂಬ ಹುಡುಗಿ ಬಂದು ಹೋದ ವಿಷಯ, ತಂದೆಗೆ ವಿವರವಾಗಿ ಕಾಗದ ಬರೆದಳು. ಬರೆದ ಬಳಿಕ ಆದ್ಯಂತವಾಗಿ ಓದಿದಳು. ಮನಸಿಗೆ ತೃಪ್ತಿಯಾಗಲಿಲ್ಲ. ಇದನ್ನು ತಂದೆಗಾದರೂ ಯಾಕೆ ಬರೆಯಬೇಕು ಎಂದು ಕೊಂಡಳು. ಕಾಗದ ಹರಿದು ಚೂರಾಯಿತು. ಬೆಳಿಗ್ಗೆ ಬಚ್ಚಲು ಒಲೆಗೆ ಹಾಕಲೆಂದು ಆ ಚೂರುಗಳನ್ನೆಲ್ಲ ಮುದುಡಿಸಿ ಮುದ್ದೆಮಾಡಿ ತನ್ನ ಚಾಪೆಯ ಕೆಳಗಿರಿಸಿದಳು. ಮನಸನ್ನು ಬೇಸರಕ್ಕೆ ಗುರಿಪಡಿಸಿದ ಯೋಚನೆಗಳನ್ನು ಓಡಿಸಲೆತ್ನಿ ಸುತ್ತಾ ದುಪಟ ಹೊದೆದುಕೊಂಡು ತುಂಗಮ್ಮ ನಿದ್ದೆಗೆ "ಬಾ ಬಾ ಬಾ" ಎಂದಳು. ಒಂದು, ಎರಡು, ಮೂರು, ಎಂದು ನೂರರ ತನಕ ಎಣಿಸ ಹೊರಟಳು. ಆ ಸಂಖ್ಯೆ ಅರುವತ್ತರ ಗಡಿ ದಾಟಿತೋ ಇಲ್ಲವೋ....