ಪುಟ:Abhaya.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭

ಆ ಭಾನುನಾರ ಸಂಜೆ ಸರಸಮ್ಮ ಅಭಯಭಧಾಮದಲ್ಲಿರಲಿಲ್ಲ. ಜಲಜ-ಸಾನಿತ್ರಿಯರನ್ನು. ಕರೆದುಕೊಂಡು ಸಾಮಾನುಕೊಳ್ಳಲೆಂದು ಮಾರ್ಕೆಟಿಗೆ ಹೋಗಿದ್ದರು. ತುಂಗಮ್ಮ ಒಬ್ಬಳೇ ಕಿಟಕಿಯ ಎಡೆಯಿಂದ ಹೊರ ನೋಡುತ್ತ ಕುಳಿತಿದ್ದಳು...

ಆಕಾಶ ಶುಭ್ರವಾಗಿರಲಿಲ್ಲ.. ಕರಿಯ ಮೋಡಗಳು ಕನಿದುಕೊಂಡಿ ದ್ಹುವು. ಆ ಮೋಡಗಳನ್ನು ಜೆದುರಿಸಿ ಓಡಿಸುವಂತಹೆ ಬಲವಾದ ಗಾಳಿಯೂ ಇರಲಿಲ್ಲ. ಮಳೆ ಬರುವ ಲಕ್ಷಣ.

"ಇವತ್ತು ಇವರೆಲ್ಲ ಒದ್ದೆಯಾಗದೆ ವಾಪಸು ಬರೊಲ್ಲ'

ಎಂದು ಮನಸಿನಲ್ಲೆ ತುಂಗಮ್ಮ ಅಂದುಕೊಂಡಳು.

ಅಷ್ಟರಲ್ಲಿ ಯಾರೋ ಅಭಯಧಾಮದೆತ್ತ ಬರುತಿದ್ದುದು ಕಂಡಿತು. ಆತ ಸಮಿಪಿಸಿದಂತ್ಕ, ಪರಿಚಯದ ವ್ಯಕ್ತಿ ಎನಿಸಿತು ತುಂಗಮ್ಮನಿಗೆ.

“ಮಹಾಬಲ?

ಎಂದು ತುಂಗಮ್ಮನ ತುಟಗಳೆಜೆಯಿಂದ ಅಶ್ಚರ್ಯದ ಸ್ವರ ಹೊರ ಟತು. ಸಂತೋಷವಾಯಿತು ಆಕೆಗೆ ಒಳಗೆ ಕುಳಿತು ಬೇಸರವಾಗಿ, ಹರಟಿ ಹೊಡೆಯಲು ಹೊರಗಿನವರು ಯಾರಾದರೂ ದೊಕೆತಕೆ ಸಾಕು ಎನ್ನುವಂತಹ ಮನೋಸ್ಥಿತಿ. ಬರುತಿದ್ದ ಮಹಾನುಭಾನನೋ, ಮನೆ ಯಳಿಯ | ತುಂಗಮ್ಮ ಲಗು ಬಗೆಯಿಂದ ಎದ್ದು ಬಾಗಿಲು ತೆರೆದಳು,

ಅತ ವೇಗವೇಗನಾಗಿ ಹೆಜ್ಜೆಗಳನ್ನ್ಟಿರಿಸಿ ಭಾಗಿಲ ಬಳಿ ಬಂದ.

ಅಯ್ಯೊ! ಇಡೇನೀವೇಷ? ಕೆದರಿದ ಕೂದಲು ಮಾಸಿದೆ ಬಟ್ಟೆ, ವಿವರ್ಣವಾದ ಮುಖ...."ಕನಕಲಕ್ಷಮ್ಮ ಹೇಗಿದಾಳೆ?' ಎಂದು ಕೇಳಬೇ ಕೆಂದು ತುಂಗಮ್ಮ ತೆರೆದಬಾಯಿ ಹಾಗೆಯೇ ಉಳಿಯಿತು.

ಅತ ಕಂಪಿಸುವ ಧ್ವನಿಯಲ್ಲಿ ಗಟ್ಟಿ ಯಾಗಿಯೆ ಕೇಳಿದ :