ಪುಟ:Abhaya.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬೪ ಅಭಯ ನೋಡ್ತಾ ನಿಂತೆ. ಪಕ್ಕದ್ಮನೆಯೋರು ಅವಳಿಲ್ಲಾ ಅಂದ್ರು ಶೇಷಾದ್ರಿ ಪುರದಲ್ಲಿ ಅಕ್ಕನ್ಮನೆ ಇದೆ, ಅಲ್ಲಿಗೆ ಹೋಗ್ತಿನಿ ಅಂತ ಹೇಳಿ ನಿನ್ನೆಯೇ ಹೊರಟೋದ್ಲಂತೆ. ಆದರೆ ನಂಗೆ ಗೊತ್ತಿಲ್ವಾ, ಅವಳಿಗೆ ಈ ಊರಲ್ಲಿ ಯಾರೂ ಇಲ್ಲ ಅನ್ನೋ ವಿಷಯ ? ಯಾಕೋ ಸಂಶಯ ಬಂತು. ಅದೇ ನಿದ್ರೂ ನಿಮ್ಮನ್ನೆಲ್ಲಾ ನೋಡೋಕೆ ಇಲ್ಲಿಗೇ ಬಂದಿರೋದೂಂತ ಅಂದ್ಕೊಂಡು ಓಡ್ಬಂದೆ.”

“ಒಳ್ಳೆ ಕೆಲಸ ಮಾಡ್ದೆ” --ಎಂದಳು ಹುಡುಗಿಯೊಬ್ಬಳು.

“ಹಾಂ ? ಏನಂದ್ರಿ ?”

ತುಂಗಮ್ಮನೆಂದುಕೊಂಡಳು: ಬೆಪ್ಪು-ಶುದ್ಧ ಬೆಪ್ಪು, ಎಂತಹ ಅಚಾ ತುರ್ಯವಾಗಿ ಹೋಯಿತು ! ಕನಕಲಕ್ಷಮ್ಮನ್ನ ಇವನಿಗೆ ಕೊಡಲೇ ಬಾರ ದಾಗಿತ್ತೇನೋ, ಅನ್ಯಾಯವಾಗಿ ಆಕೆ ಬೀದಿ ಪಾಲಾದಳು. ಹುಚ್ಚಿ! ಹಾಗೂ ಮಾಡಬೇಕಾಗಿತ್ತೆ ? ಅಭಯಧಾಮಕ್ಕೆ ವಾಪಸು ಬರಬಾರದಾಗಿತ್ತೆ ?

ಬೇಗನೆ ಒಮ್ಮೆ ದೊಡ್ಡಮ್ಮ ಬಂದರೆ--ಎನಿಸಿತು. ಏನಾದರೂ ಮಾಡಿ ಕನಕಲಕ್ಷಮ್ಮನನ್ನು ಉಳಿಸಿಕೊಳ್ಳುವುದು ಸಾಧ್ಯವಿದ್ದರೆ ಅದು ಅವರಿಂದ ಮಾತ್ರ. ಆದರೆ ಅವರು ಅಷ್ಟು ಬೇಗನೆ ಬರುವ ಲಕ್ಷಣವಿರಲಿಲ್ಲ.

ಮಳೆ ಮಾತ್ರ ಬಂತು. ಧೋ ಎಂದು ಸುರಿಯಿತು. ಹುಡುಗಿಯರು, ತಮ್ಮ ಬಟ್ಟೆಬರೆಗಳು ತೋಯದಂತೆ ಮುನ್ನೆಚ್ಚರಿಕೆ ವಹಿಸಲು ಓಡಿಹೋದರು ಅಡುಗೆ ಮನೆಯಲ್ಲಿ ರಾತ್ರೆಗೆ ಸಿದ್ಧತೆಯೂ ಆಗ ತೊಡಗಿತು.

ಹೊರಗೆ ಮಳೆ ನೀರು ಬೀಳತೊಡಗಿದ ಮೇಲೆ ಮಹಾಬಲನ ಆಳು ನಿಂತಿತು. ಆತ ಬೆಂಚಿನ ಮೇಲೆ ಕಾಲುಗಳನ್ನಿರಿಸಿ, ಕೈಗಳಿಂದ ಸುತ್ತಿಕೊಂಡು, ಹೃದಯದೊಳಗಿನ ಛಳಿಗಾಗಿ ಕುಟುಕುಟು ಹಲ್ಲುಕಡಿಯುತ್ತ ಕುಳಿತ. ಮಳೆಯ ಕತ್ತಲೆಗಾಗಿ ತುಂಗಮ್ಮ ದೀಪಉರಿಸಿದಳು. ಆದರೆ ಮಳೆ ನಿಂತಾಗ ನಿಜವಾಗಿಯೂ ಕತ್ತಲಾಗಿತ್ತು

ಆಮೇಲೆ ಸರಸಮ್ಮ ಜಲಜ-ಸಾವಿತ್ರಿಯರೊಡನೆ ಬಂದರು. ಬಂದಾಗ ಅವರ ಮೈ ಮಾತ್ರ ತೋಯ್ದಿತ್ತು. ಆದರೆ ಮಹಾಬಲನ ಗೋಳಿನ ಕತೆ ಕೇಳಿದ ಮೇಲೆ ಅವರ ಮನ ತೋಯ್ದು ಹೋಯಿತು.