ಪುಟ:Abhaya.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'

ಅಭಯ

೨೬೫

ಹಿಂದೆ ಎಂದೂ ಅವರಮುಖ ಅಷ್ಟೊಂದು ಕಪ್ಪಿಟ್ಟುದ್ದನ್ನು ತುಂಗಮ್ಮ ನೋಡಿರಲಿಲ್ಲ.ಇನ್ನೂ ಒಂದು ಹುಡುಗಿಯನ್ನು ಸಂಸಾರವಂದಿಗಳಾಗಿ ಮಾಡಿ ಧನ್ಯಳಾದೆ ಎಂದು ಸರಸಮ್ಮ ಭಾವಿಸಿಕೊಂಡಿದ್ದ ಸ್ವಲ್ಪ ಸಮಯದಲ್ಲೇ-

"ಪೋಲೀಸರಿಗೆ ತಿಳಿಸಿದ್ದೀರಾ?"

"ಇನ್ನೂ ಇಲ್ರಮ್ಮ.ತಿಳಿಸ್ಲಾ?"

"ಹೂಂ.ಈಗ್ಲೇ ತಿಳಿಸಿ."

ಅವರು ಮಾಡುವಂಥಾದ್ದೇನೊ ಉಳಿದಿರಲ್ಲಿಲ್ಲ. ಆದರೂ ಮಹಾಬಲ ಪೂರ್ತಿ ನಿರಾಸೆಗೊಳ್ಳಬಾರದೆಂದು ಅವರೆಂದರು:

"ನಾವೂ ಹುಡುಕ್ತೀವಿ.ಏನಾದರೂ ಗೊತ್ತಾದ್ರೆ ಹೀಳಿ ಕಳಿಸ್ತೀವಿ."

"ನಾನೇ ಬರ್ತಿನ್ರಮ್ಮ."

"ಬೇಡಿ.ಹ್ಯಾಗೂ ನಿಮ್ಮನೆ ಗೊತ್ತಿದೆಯಲ್ಲ...ನಾವೇ ಬಂದು ಹೇಳ್ತೀವಿ"

ಅಂತೂ ಮಹಬಾಲ ಹೊರಬಿದ್ದ.ಬೀದಿಗಿಳಿಯುವಲ್ಲಿ ನೀರು ನಿಂತು ಮಣ್ಣು ತೇವವಾಗಿ ಅಂಟುಅಂಟಾಗಿತ್ತು.ಮಹಾಬಲನ ಕಾಲು ಜಾರಿತು.ಬೇಗನೆ ಎದ್ದು ನಿಂತು,ಹಿಂತಿರುಗಿ ನೋಡಿದ.ಅಭಯಧಾಮದ ಬಾಗಿಲು ಮುಚ್ಚಿತ್ತು ಅದರಮೇಲೆ ಉರಿಯುತ್ತಿತ್ತು ದೀಪ.ಕಿಟಕಿಯಲ್ಲೂ ಯಾರೂ ಇರಲಿಲ್ಲ....ಕಾಲಿಗೆ ಸ್ವಲ್ಪ ನೋವಾಗಿದ್ದಂತೆ ತೋರಿತು ಮಹಾಬಲನಿಗೆ ಆತ ಕುಂಟುತ್ತ ತನ್ನ ಪ್ರದೇಶದ ಪೋಲೀಸ್ ಸ್ಟೇಷನಿನ ಹಾದಿಹಿಡಿದ

....ಆರಾತ್ರೆ, ನೊಂದಿದ್ದ ಸರಸಮ್ಮನನ್ನು ಮಾತನಾಡಿಸುವ ಧೈರ್ಯ ತುಂಗಮ್ಮನಿಗಾಗಲಿಲ್ಲ.

ಮಾರನೆದಿನೆ ಕನಕಲಕ್ಷಮ್ಮನ ವಿಷಯತಿಳಿದು ಅಭಯಧಾಮದ ಕಾರ್ಯದರ್ಶಿನಿಯೂ ಬಂದು ಹೋದರು.ಅವರೂ ನಿರಾಸೆಯಿಂದ ನಿಟ್ಟುಸಿರು ಬಿಟ್ಟರು.

ಮೂರನೆದಿನ,ತಿಂಗಳ ಸಂಬಳ ಬಂತು, ಒಂದು ವಾರದ ವೆಚ್ಚಕ್ಕೆ ಬೇಕಾದ ಹಣವೂಕೂಡಾ.

ತುಂಗಮ್ಮ ಕೊಡಬೇಕಾಗಿದ್ದ ಹಬ್ಬದೂಟವೇನೋ ಆಯಿತು.ಆದರೆ ಹೆಚ್ಚಿನವರು ಯಾರೂ ಸಂತೋಷದಿಂದಿರಲಿಲ್ಲ.