ಪುಟ:Abhaya.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'

ಅಭಯ

೨೬೭

ದುಃಖಿನಿಯಾಗಿದ್ದಳು. ಕುಲಾವಿ ಕಾಲು ಚೀಲಗಳಿಗಾಗಿ ಉಣ್ಣೆ ಕೊಂಡು ತಂದು ಕನಕಲಕ್ಷಮ್ಮನಿಗೆ ಆದಿನ ಕಳುಹಿಸಬೇಕೆಂಬುದು ಅವಳ ಅಪೇಕ್ಷೆಯಾಗಿತ್ತು. ಆದರೆ ಆ ಕನಕಲಕ್ಷಮ್ಮ__

....ಆದಿನ, ತನ್ನ ಸಂಪಾದನೆ ಕೈಗೆ ದೊರೆತ ಮೊದಲದಿನ, ತುಂಗಮ್ಮ್ ತನ್ನ ತಂದೆಗೆ ಕಾಗದ ಬರೆಯಲು ಕುಳಿತಳು. ಬರೆವಣಿಗೆ ಬಲು ಕಷ್ಟವಾಯಿತು. ಹೃದಯವನ್ನು ಯಾರೋ ಹಿಂಡಿದ ಹಾಗೆ ನೋವಾಯಿತು. ಕನಕಲಕ್ಷಮ್ಮನ ವಿಷಯ ಬರೆದು, ತನ್ನ ದುಃಖವನ್ನು ಮಾತುಗಳಲ್ಲಿ ಹರಿಯಗೊಡಬೇಕೆಂದು ತುಂಗಮ್ಮ ಯೋಚಿಸಿದಳು ಮರುಕ್ಷಣವೆ, ಛೆ! ಅಭಯಧಾಮ ಇಷ್ಟೇನೆ ಎಂದುಕೊಳ್ಳಬಹುದು ಅಣ್ಣಯ್ಯ. ಆತನಿಗೆ ಈ ವಿಷಯ ಏನನ್ನೂ ಬರೆಯ ಕೂಡದು, ಎಂದು ತೀರ್ಮಾನಿಸಿದಳು ಹಾಗೆ ಮಗಳು, ಒಲ್ಲದ ನಗೆಯನ್ನು ಮುಖದ ಮೇಲೆ ಬರಿಸಿಕೊಡು ತಂದೆಗೆ ಒಳ್ಳೆಯ ಕಾಗದ ಬರೆದಳು

ಆ ವಾರದಲ್ಲೆ ಮತ್ತೊಮ್ಮೆ ಮಹಾಬಲ ಬಂದ ಹತ್ತು ವರ್‍ಷಗಳಷ್ಟು ಮುಂದಕ್ಕೆ ಹಾರಿ ಹೋದ ಹಾಗಿತ್ತು ಅವನ ವಯಸ್ಸು ಗಲ್ಲಗಳು ಬತ್ತಿಹೋಗಿ ಕಣ್ಣುಗಳು ಗುಳಿ ಬಿದ್ದಿದ್ದುವು. ಸರಸಮ್ಮ ಮತ್ತು ತುಂಗಮ್ಮನೆದುರು, ನಡೆದುದೆಲ್ಲವನ್ನೂ ಆತ ಹೇಳಿದ.

ಕನಕಲಕ್ಷಮ್ಮ ಮನೆಯಿಂದ ಓಡಿ ಹೋದ ಮರುದಿನದಿಂದಲೆ ಮಹಾಬಲ ರಜಾಪಡೆದ. ಕಾಲು ಸ್ವಲ್ಪ ಕುಂಟುತಿದ್ದರೂ ಹುಚ್ಚನಂತೆ ಬೀದಿ ಬೀದಿ ಅಲೆದ 'ಅಕ್ಕನ ಮನೆ' ಎಂಬುದು ಸುಳ್ಳಾದರೂ, ಆ ಅವಸರದಲ್ಲಿ ಶೇಷಾದ್ರಿಪುರ ಎಂಬುದನ್ನಷ್ಟು ಸತ್ಯವಾಗಿಯೆ ಆಕೆ ಹೇಳಿರಬಹುದೆಂಬುದು ಮಹಾಬಲನ ಊಹೆಯಾಗಿತ್ತು. ಹೀಗಾಗಿ ಸಂಜೆಯ ಹೊತ್ತು ಶೇಷಾದ್ರಿಪುರದ ಬೀದಿಗಳಲ್ಲಿ ಎರಡನೆಯ ಬಾರಿ ಸುತ್ತಾಡಿದ.

ಹಾಗೆ ಸುತ್ತಾಡಿ ಬೇಸತ್ತು ಜೋಲುಮೋರೆ ಹಾಕಿಕೊಂಡು ಕಾಫಿಯನ್ನಾದರೂ ಕುಡಿಯೋಣವೆಂದು [ಕಾಫಿ ಎಂದ ಆತ; ಹೆಂಡವಿದ್ದರೂ ಇರಬಹುದು!] ಅಂಗಡಿಬೀದಿಗೆ ಬರುತಿದ್ದಾಗ ಆಕೆ ಕಾಣಸಿಕ್ಕಿದಳು. ಪಕ್ಕದ ಬೀದಿಯಲ್ಲಿ ಅವಸರ ಅವಸರವಾಗಿ ಹೋಗುತಿದ್ದಳು. ತಲೆಯ ಮೇಲೆ ಸೆರಗನ್ನು ಹೊದೆದುಕೊಂಡಿದ್ದಲು.