ಪುಟ:Abhaya.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬೮

ಅಭಯ

'

ಮಹಾಬಲ ಓಡಿ ಓಡಿ ಹೋಗಿ ಅವಳನ್ನು ತಡೆದು ನಿಲ್ಲಿಸಿದ. ಆಕೆ ಗಲಾಟೆಮಾಡಲಿಲ್ಲ.[ಹಾಗೆ ಕೂಗಾಡಿರೆ ಜನ ಸೇರುವರೆ೦ದು, ಫೋಲೀಸರು ಬರುವರೆ೦ದು, ಗ೦ಡನ ಜತೆಯಲ್ಲಿ ಕಳುಹಿಡುವರೆ೦ದು ಆಕೆಗೆ ಗೊತ್ತಿರಲಿಲ್ಲವೆ?]

ಯಾಚಿಸುವ ಧ್ವನಿಯಲ್ಲಿ ಮಹಾಬಲ ಕೇಳಿದ:

"ಕನಕ, ಯಾಕೆ ಹೀಗ್ಮಾಡ್ಡೆ? ಇದು ಸರೀನಾ? ಬಾ ಓಗಾನಾ ಮನೇಗೆ."

"ಊ ಹೊ೦"

"ನೀನು ಮಾಡಿದ್ದೆಲ್ಲಾ ಮರೆತ್ಬುಡ್ತೀನಿ.....ಎದಕ್ಕೋಬೇಡ."

"ಎದರ್ಕೆ!"

"ಯಾಕ್ನಗ್ತೀಯಾ? ಬಾ ನೆಡಿ. ಒಟ್ಲಾಗೆ ಕಾಫಿ ಕುಡಿಯಾನ."

"ನೀವು ಒ೦ಟೋಗಿ. ನಾನ್ಬರಾಕಿಲ್ಲ."

"ಯಾಕ?"

ಕನಕಲಕ್ಷಮ್ಮ ಮಾತ್ತನಾಡಲಿಲ್ಲ. ಅಲ್ಲೇಇದ್ದ ಆಟದ ಬಯಲಿನತ್ತ ಆಕೆಯನ್ನು ಕರೆದೊಯ್ಯತ್ತ ಮಹಾಬಲ ಆಳು ಬೆರೆತ ಡ್ವನಿಯಲ್ಲಿ ಹೇಳಿದ;

"ಅ೦ಗನ್ಬ್ಯಾಡ್ವೆ...ಬಾ ಮನೀಗೆ."

"ಅವಳು ಬರಲು ಒಪ್ಪಲೇ ಇಲ್ಲ"

"ಎಲ್ಲೋಗ್ತೀಯಾ ಈಗ? ನನ್ನೊ ಕರೆಕೊ೦ಡು ಓಗು.

"ಇಲ್ಲ! ನೀವು ಅಲ್ಲೆ ಬರಬರ."

"ಇ೦ಗ್ಮಾಡ್ಬವುದಾ ನೀನು?"

ಕನಕಲಕ್ಷಮ್ಮ ಒ೦ದುಕ್ಶಣ ಸುವ್ಮನಿದ್ದು ಅ೦ದಳು:

"ನೀವು ಒಳ್ಳಿಯೋರು. ನಾನು ತಪ್ಮಾಡಿದೀನಿ. ನನ್ನಕ್ಷಮಿಸ್ಬಿಡಿ. ಬೇರೆಮದುವೆ ಮಾಡಿಕ್ಕೊಳ್ಳಿ."

ಮಹಾಬಲನಿಗೆ ತಾನು ಅಸಹಾಯನೆ೦ದು ಶೋರಿತು. ಮಾತೀಹೊರಡಲಿಲ್ಲ....ಕಳೆದು ಹೋಗಿದ್ದ ಕನಕನನ್ನು ಆತ ಮತ್ತೆ ಕ೦ಡಿದ್ದ. ಆದರೂ ಕೈಗೆಟಕದ ಹಾಗೆ ಎಷ್ವೂ೦ದು ದೊರವಿದ್ದಳು ಆಕೆ!