ಪುಟ:Abhaya.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'

ಅಭಯ

೨೬೯

ಒ೦ದು ಉಪಾಯ ಹೊಳೆದು ಮಹಾಬಲ ಕೊನೇಯ ಯುತ್ನವನ್ನು ಮಾಡಿದ :

"ಕನಕ, ದೊಡ್ಡಮ್ಮಲ್ಲಿಗೆ ಓಗಿ ಬರಾನ ನಡಿ."

"ಯಾಕೊ?"

"ಅವ್ರು ನಿನ್ನ ಕರ್ಕೊ೦ಬಾ ಅ೦ದ್ರು."

"ಬ್ಯಾಡಪ್ಪ. ಅಲ್ಲಿಗ್ಬರಾಕೆ ನ೦ಗೆ ಎದ್ರಿಕೆ ಆಗ್ತೀತೆ?"

"ನೊಡ್ಡಾ! ಅ೦ಗನಬಾರದು.....ದೊಡ್ಡಮ್ಮ ಒಳ್ಳಿಯೋರಲ್ವಾ?"

"ಸಾರು! ನಾನ್ಹೋಗ್ತೀನಿ!"

ಆಕೆ ಹೊರಟೀ ಹೋಗುವಳೆ೦ಬುದು ಮಹಾಬಲನಿಗೆ ಸ್ಪಷ್ಟವಾಯಿತು.

ನಿರಾಶೆಯ ಮಹಾಪೂರ ತನ್ನನ್ನು ತೇಲಿಸಕೊ೦ಡು ಹೋಗುತಿದ್ದ೦ತೆ ತೋರಿತು. ಬದುಕು, ಬಡತನ, ಭವಿಷ್ಯತ್ತುಗಳು ಅವನ ಮು೦ದೆ ಸುಳಿದಾಡಿದುವು. ಮಹಾಬಲ ಕನಕಲಕ್ಷ್ಮಮ್ಮನನ್ನೇ ನೋಡಿದ. ಕೊರಳಲ್ಲಿ ತಾನು ಕೊಟ್ಟಿದ್ದ ಸರವಿರಲಿಲ್ಲ. ಬಳೆಗಳರಲಿಲ್ಲ ಕೈಗಳಲ್ಲಿ. ಆಸೀರೆಯೂ ಬೀರೆ.

"ಸರ-ಬಳೆ ಏನ್ಮಾಡ್ದೆ?"

ತುಟಗಳ ನಡುವೆ ಎ೦ಜಲನ್ನು ಹೊರತ೦ದು ಒಳಕ್ಕೊಯ್ದು, ಕಣ್ಣುಗಳನ್ನು ಕಿರಿದು ಗೊಳಿಸಿ, ಆಳೆಯೆ೦ದಳು;

"ಕಳೆದೋಯ್ತು."

"ಸುಳ್ಳು! ಸುಳ್ಳು!"

ಅದು ಸುಳ್ಳೆ೦ಬ ವಿಷಯದಲ್ಲಿ ಸ೦ಶಯವಿರಲಿಲ್ಲ ಮಹಾಬಲನಿಗೆ. ತನ್ನಮನೆಗೆ ಬ೦ದ ಮೇಲೆ ಆಕೆ, ಅಬಯದಾಮದಲ್ಲಿ ಏಳುತಿದ್ದ೦ತೆ ನಸುಕಿನಲ್ಲೀ ಏಳುತಿದ್ದುದು;ಮನೆಯನ್ನು ಗುಡಿಸಿ ಸಾರಿಸಿ ಚೊಕ್ಕಟವಾಗಿಡುತಿದ್ದುದು; ಬಚ್ಚಲಿಗೆ ಉರಿಹಾಕಿ ನೀರು ಬಿಸಿಮಾಡಿ ತನ್ನನ್ನು ಎಬ್ಬಿಸುತಿದ್ದುದು; ರಾತ್ರಿ ಆಕೆಯ ಯ್ವುವನದ ಮೈ ತನಗೆ ಕೊಡುತಿದ್ದ ಸ್ಪರ್ಶ ಸುಖ; ಎಲ್ಲವನ್ನೂ ಆ ಕ್ಷಣವೇ ಮಹಾಬಲ ಮರೆತ. ಅವನೆದುರು ಹೊಳೆದುದೊ೦ದೇ ವಿಷಯ: 'ಈಕೆ ಕಳ್ಳಿ..! ಸುಳ್ಳಿ!'

ಸೀರೀಲ್ಲಿ ಎ೦ದೊ. ಕೇಳಬಹುದಾಗಿತ್ತು. ಆದರೆ ಅಬಿಮಾನಿಯದ ಮಹಾಬಲ ಕೇಳಲಿಲ್ಲ. ಅದನ್ನು ಆತ ಮರೆಯಲೆತ್ನಿಸಿದರೂ ಆ ಸೀರೆ