ಪುಟ:Abhaya.pdf/೨೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸುಖಿಯಾಗಿರಬೇಕೆಂದಲ್ಲ,- ಅಕ್ಕಪಕ್ಕದವರಿಗೆ ಸಂದೇಹ ಬರಬಾರದೆಂದು.

ಆ ನಾಟಕದ ಜೀವ ಅಗತ್ಯವಾಗಿತ್ತು ರಂಗಮ್ಮನ ಪಾಲಿಗೆ ಅದರ

ಫಲವಾಗಿ ಮನೋ ವ್ಯಾಕುಲ ಹೆಚ್ಚಿತು ಬುಳು ದುರ್ಭರವಾಯಿತು.

ಅಂತಹ ದೌರ್ಬಲ್ಯದ ಸಂದರ್ಭಗಳನ್ನೇ ಇದಿರು ನೋಡುತಿದ್ದ ಸಾವು

ಹೆಡೆಯಾಡಿಸಿ, ತಾನೂ ಒಂದು ಪರಿಹಾರವೆಂದು ವೈಯಾರವಾಗಿ ಹೇಳದೆ ಇರಲಿಲ್ಲ. ಆದರೆ ಅದಕ್ಕೆ ಮನಸೋಲಲಿಲ್ಲ ತುಂಗಮ್ಮ ಆತ ಬಂದೇ ಬರುವನೆಂಬ ನಂಬಿಕೆಯಿನ್ನೂ ಆಕೆಯಲ್ಲಿ ಬಲವತ್ತರವಾಗಿತ್ತು. ದಿನಕಳೆದಂತೆ ತನ್ನೊಡನೆ ಆ ಆಸೆಯೂ ಕ್ಷೀಣಿಸುತಲಿದ್ದರೂ ತುಂಗಮ್ಮ ಉಸಿರು ಹಿಡಿದು ಕುಳಿತಳು

ಆದರೆ ಕೊನೆಗೂ ಬರಲೇ ಇಲ್ಲ ಆತ....

ಆ ಒಂದು ರಾತ್ರೆ, ತಾನಿದ್ದ ಮನೆಯ ದಂಪತಿಗಳ

ಮಾತುಕತೆಯನ್ನು ಕೇಳಿ ತುಂಗಮ್ಮ ತತ್ತರಿಸಿ ಹೋದಳು.

ಯಾವುದೋ ಕಾರಣಕ್ಕಾಗಿ ಉಂಟಾಗಿದ್ದ ದಂಪತಿಗಳ ವಿರಸ

ತುಂಗಮ್ಮನನ್ನು ಆಹುತಿ ತೆಗೆದುಕೊಂಡಿತು.

"ಹೋಗಿ! ಒಬ್ಬರೇ ಏನು ನಿಮಗಿದ್ಮೇಷ್ಟ್ರು? ಇನ್ನೂ ನಾಲ್ಕು ಜನ

ಹುಡುಗೀರ್ನ ಕರಕೊಂಡ್ಬನ್ನಿ ಈ ಮನೆನೇ ಒಂದು ಆಸ್ಪತ್ರೆಯಾಗ್ಲಿ!'

"ಶ್! ಮೆಲ್ಲಗೆ ಮಾತಾಡೆ, ಈಗ್ತಾನೇ ಮಲಕ್ಕೊಂಡಿದಾಳೆ"

"ಅಯ್ಯೋ ಪಾಪ,ಪುಟ್ಮಗು! ನನ್ನ ಮಾತು ಕೇಳಿ ನೊಂದ್ಕೊಂಡು

ಬುಳುಬುಳೂಂತ ಅತ್ಬಿಡತ್ತೆ, ಅಲ್ಲ?"

"ಥೂ! ಇದೇನೆ ಹಾಳು!"

"ಸಾಕಾಯ್ತಮ್ಮಾ ನಂಗೆ. ದಿನ್ವೆಲ್ಲಾ ಮೂಲೇಲಿ ಕೂತಿರ್ತಾಳೆ ಮೂದೇವಿ. ನಮ್ಮಗು ಅತ್ತು ರಂಪಮಾಡ್ತಿದ್ರೂನೂ ಒಂದ್ನಿಮಿಷ ಹತ್ರ ಕರಕೊಂಡು ರಮಿಸೋಲ್ಲ."

"ಪಾಪ! ಅವಳ ಕಷ್ಟ ಅವಳಿಗೆ!"

"ಸಾಕು! ನಿಲ್ಸಿ ಮಾತ್ನ! ನಾನು ನಮ್ತಾಯಿ ಮನೆಗೆ ಹೊರ

ಟೋಗ್ತೀನಿ."