ವಿಷಯಕ್ಕೆ ಹೋಗು

ಪುಟ:Abhaya.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಭಯ
೨೭೫

"ಘನ ಶಾಮಸುಂದರಾ ಶ್ರೀಕರಾ ಅರುಣೋದಯ ‍ಝೂಲ....”
ಮಧುರ ಕಂಠದಿಂದ ಹಾಡುತಿದ್ದಳು ಪಾರ್ವತಿ, ಯಾರೂ ಹೇಳ
ದೆಯೇ, 'ಹಾಡು - ಹಾಡು' ಎಂದು ಕೇಳದೆಯೇ.
"ಆನಂದ ಕಂದಾ-"
ನೈಸರ್ಗಿಕ ಶೋಭೆಗೆ ಮಾನವನಿರ್ಮಿತ ಸೌಂದರ್‍ಯ ಲೇಪನವಾದ
ಹಾಗಾಯಿತು ವಾತಾವರಣ....
"ಇಂಥ ಘಳಿಗೆಯಲ್ಲಿ ಲೋಕವೆಲ್ಲ ಸುಂದರವಾಗಿಯೇ ಇರತ್ತೆ ಅಂತ
ಅನಿಸುತ್ತೆ ಅಲ್ವೆ ತುಂಗಾ ?”
“ಹೌದು ದೊಡ್ಡಮ್ಮ ಈ ಸೌಂದರ್‍ಯ ಸದಾಕಾಲವೂ ಹೀಗೆಯೇ
ಇರಲಿ ಅಂತಾನೂ ಅನಿಸುತ್ತೆ.
-ಆ ಬಳಿಕ ಗಜಿಬಿಜೆ, ಗುಲ್ಲು, ಸದ್ದು.
ದಿನ ನಿತ್ಯದ ಜೀವನ ಚಕ್ರ ತಿರುಗಲು ಆರಂಭ
............. ..
ನವರಾತ್ರಿ ಕಳೆದಿತ್ತು, ಸಣ್ಣ ಪುಟ್ಟ ಹಬ್ಬಗಳೆಷ್ಟೋ ಆಗಿ ಹೋಗಿ
ದ್ದುವು.
ಆದರೆ ಅಭಯಧಾಮವೇ ಇದಿರು ನೋಡಿದ ದೊಡ್ಡದೊಂದು ಹಬ್ಬ
ವಿತ್ತು ಅದು ಅಭಯಧಾಮದ ವಾರ್ಷಿಕೋತ್ಸವ.
ಡಿಸೆಂಬರ್ ಹತ್ತೊಂಭತ್ತರ ಆ ಉತ್ಸವದ ಸಿದ್ಧತೆ ಭರದಿಂದಲೆ
ಸಾಗಿತು ಒಳಗಿನ ಗೋಡೆಗಳಿಗೆಲ್ಲ ಹುಡುಗಿಯರು ತಾವೇ ಸುಣ್ಣ ಬಳೆ
ದರು. ಹೊರಗಿನ ಗೋಡೆಗಳನ್ನು ಕೂಲಿತೆತ್ತು ಬಿಳಿದುಗೊಳಿಸಿದ್ದಾಯಿತು.
ಕಿಟಕಿ ಬಾಗಿಲುಗಳು ನಿರ್ಮಲವಾದುವು ಉದ್ಯಾನದ ಕಳೆ ನಾಶವಾಯಿತು.
ಸರಸಮ್ಮ ಇಬ್ಬರು ಹುಡುಗಿಯರೊಡನೆ, ತುಂಗಮ್ಮ ಮತ್ತು ಜಲಜ
ಬೇರೊಬ್ಬಳೊಡನೆ, ಲಲಿತ - ಸಾ ವಿ ತ್ರಿ ಯ ರು ಮತ್ತೊಬ್ಬಳೊಡನೆ-
ಹೀಗೆ ಮೂರು ಗುಂಪುಗಳಾಗಿ, ಮೊದಲೇ ಸಿದ್ಧಗೊಳಿಸಿದ್ದ ಪಟ್ಟಿಯಂತೆ
ಊರಿನ ಪ್ರಮುಖ ಅಂಗಡಿಗಳಿಗೆ ಹೋಗಿ, ಬಡ ಅನಾಥ ಹುಡುಗಿಯರ
ಅಭಯಧಾಮಕ್ಕಾಗಿ ಸೀರೆ - ರವಕೆ ಕಣಗಳನ್ನು ಕೇಳಿ ತಂದರು. ಸಮಿತಿಗೇ
ನೇರವಾಗಿ ಚಂದಾ ಕೊಡದೇ ಇದ್ದ ಕೆಲವರು ಶ್ರೀಮಂತರ ಮನೆಗಳಿಗೆ