ಪುಟ:Abhaya.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೭೭

“ ಅಷ್ಟು ಮಾಡಿದರೆ ತುಂಬ ಉಪಕಾರವಾಗುತ್ತೆ ಸಾರ್‌.”

ಸಂಗ್ರಹಿಸಿ ತಂದಿದ್ದ ಹೊಸಸೀರೆಗೆಳನ್ನು ಹಂಚಿ ಉಟ್ಟುಕೊಂಡು ಅಲಂಕಾರವಾಗಿದ್ದರು ಹುಡುಗಿಯರೆಲ್ಲ. ಕುರುಡಿ ಸುಂದ್ರಾ ಮತ್ತು ಪಾರ್ವತಿ ದೇವತಾಪ್ರಾಥನೆ ಮಾಡಿದರು. ಸರಸಮ್ಮನೆಪರವಾಗಿ ತುಂಗಮ್ಮ ಸ್ಟಾಗತ ಭಾಷಣವನ್ನೋದಿದಳು

ನಿರಾಭರಣ ಸುಂದರಿ ಸೆರಗನ್ನು ಎಡೆಯ ಮೇಲೆ ಹಾಯಿಸಿ ಇನ್ನೊಂದು ಕಡೆಯಿಂದ ಇಳಿಬಿಟ್ಟು ನಡುನಿಗೆ ಬಿಗಿದಿದ್ದಳು. ಎತ್ತರದ ಮಾಟವಾದ ಫಿಲುವು ಯಾವ ಕಂಪನವೂ ಇಲ್ಲದ ಉಚ್ಚಸರ. ಸ್ಪಷ್ಟ ಪದೋಚ್ಚಾರಣೆ. ಆಕೆ ಆಡುತಿದ್ದ ಮಾತು, ಕುಳಿತಿದ್ದ ಹುಡುಗಿಯರ ತಲೆ ಗಳನ್ನು ಹಾದು ಗೋಡೆಗೆ ಬಡಿದು ಇಂಪಾಗಿಯೇ ಪ್ರತಿಧ್ವನಿಸುವಂತಿತ್ತು.

ತಮ್ಮ ಹಿಂದೆ ನಿಂತಿದ್ದ ಸರಸಮ್ಮನನ್ನು ಉದ್ದೇಶಿಸಿ ಮೇಯರ್‌ ಕೇಳಿದರು:

“ ಇವರು ಯಾರು ?

ತುಂಗಮ್ಮ ಅಂತ. ನನ್ನ ಸಹಾಯಿಕೆ. "I see."

“ ಮೊದಲು ಅಭಯಧಾಮಕ್ಕೆ ಜೇಕೆ ಹುಡುಗಿಯರ ಹಾಗೆಯೇ ಈಕೇನೂ ಬಂದಿದ್ರು.”

"ಓ!"

ಅಭಯಧಭಾಮದ ಹಿರಿಮೆಯ ಬಾವುಟ ತುಂಗಮ್ಮ, ಆರೀತಿ ಸರಸಮ್ಮ ಹೇಳಿದುದು ಸರಿಯಾಗಿಯೇ ಇತ್ತಲ್ಲವೆ? ಆ ಅಭಿಮಾನಕ್ಷಮ್ಯವಲ್ಲವೆ?

ಮೇಯರ್‌ ಆಶ್ಚರ್ಯ ವ್ಯಕ್ತಪಡಿಸಿದುದನ್ನು ಕಂಡು ಸಂಶೋಷ ಗೊಂಡ ಸರಸಮ್ಮ ಹೆಮ್ಮೆಯಿಂದಲೇ ಅಧ್ಯಕ್ಷಪೀಟದ ಅಕ್ಕ ಪಕ್ಕದಲ್ಲಿದ್ದವ ರನ್ನು ನೋಡಿದಳು. ತಮ್ಮನ್ನೇ ದಿಟ್ಟ ಸುತಿದ್ದ ಆ ಯುವಕ... ತಾವು ಆಡಿದ ಮಾತುಗಳೂ ಅತನಿಗೆ ಕೇಳಿಸಿದವೋ....ಏನೋ....ಮುಖ ಮಾಟವಾಗಿತ್ತು. ಮುಗುಳುನಗು. ಕುಣಿಯುತಿತ್ತು ತುಟಗಳಮೇಲೆ. ಯಾರೋ ಆತ? ಆತನಪಕ್ಕದಲ್ಲೆ ಸುಂದರಮ್ಮಅನಂತರಾಮಯ್ಯ ಕುಳಿತಿದ್ದರು - ಆಡಳಿತ ಸಮಿತಿಯ ಪ್ರಮುಖ ಸದಸ್ಯೆ. ಅವರ ಸಂಬಂಧಿಕನಿರಬಹುದೆ? ?